Asianet Suvarna News Asianet Suvarna News

Walmart shooting: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಬಂದೂಕುಧಾರಿ ಸೇರಿ 10 ಜನ ಬಲಿ..!

ಅಮೆರಿಕದ ವರ್ಜೀನಿಯಾದಲ್ಲಿ ಅಲ್ಲಿನ ಸ್ಥಳೀಯ ಕಾಲಮಾನ ಮಂಗಳವಾರ ಗುಂಡಿನ ದಾಳಿ ನಡೆದಿದ್ದು, ಓರ್ವ ಬಂದೂಕುಧಾರಿ ಮನ ಬಂದಂತೆ ಗುಂಡು ಹಾರಿಸಿ ಹಲವರನ್ನು ಬಲಿ ಪಡೆದಿದ್ದಾನೆ ಎಂದು ವರ್ಜೀನಿಯಾ ಪೊಲೀಸರು ಮಾಹಿತಿ ನೀಡಿದ್ದಾರೆ.

multiple fatalities in walmart shooting in united states virginia police details ash
Author
First Published Nov 23, 2022, 12:51 PM IST

ಅಮೆರಿಕದಲ್ಲಿ (United States of America) ಶಸ್ತ್ರಾಸ್ತ್ರ (Weapon) ಖರೀದಿಗೆ ನಿಯಂತ್ರಣವೇ ಇಲ್ಲದಂತಾಗಿದ್ದು, ಬಂದೂಕು ಎಲ್ಲರ ಕೈಗೂ ದೊರಕುವಂತಾಗಿದೆ. ಈ ಹಿನ್ನೆಲೆ ಆಗಾಗ್ಗೆ ಗುಂಡಿನ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ದಾಳಿಗಳಲ್ಲಿ ಹಲವರು ಬಲಿಯಾದರೂ ಸಹ ಅಲ್ಲಿನ ಸರ್ಕಾರ ಬಂದೂಕುಗಳ್ನು ನಿಯಂತ್ರಿಸುವ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಈ ಹಿನ್ನೆಲೆ, ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ ನಡೆದಿದ್ದು, ಸುಮಾರು 10 ಜನರು ಬಲಿಯಾಗಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ವರ್ಜೀನಿಯಾದಲ್ಲಿ (Virginia) ಅಲ್ಲಿನ ಸ್ಥಳೀಯ ಕಾಲಮಾನ ಮಂಗಳವಾರ ಗುಂಡಿನ ದಾಳಿ ನಡೆದಿದ್ದು, ಓರ್ವ ಬಂದೂಕುಧಾರಿ (Single Shooter) ಮನ ಬಂದಂತೆ ಗುಂಡು ಹಾರಿಸಿ (Shooting) ಹಲವರನ್ನು ಬಲಿ ಪಡೆದಿದ್ದಾನೆ (Multiple Fatalities) ಎಂದು ವರ್ಜೀನಿಯಾ ಪೊಲೀಸರು (Virginia Police) ಮಾಹಿತಿ ನೀಡಿದ್ದಾರೆ.

ವರ್ಜೀನಿಯಾದ ವಾಲ್‌ಮಾರ್ಟ್‌ ಸ್ಟೋರ್‌ವೊಂದರಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹಾಗೂ ನಗರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಂದೂಕುಧಾರಿಯೂ ಮೃತಪಟ್ಟಿದ್ದಾನೆ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ  ಹಲವರು ಬಲಿಯಾಗಿರುವುದನ್ನು ಹಾಗೂ ಹಲವರು ಗಾಯಗೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ ಎಂದೂ ಚೆಸಾಪೀಕ್‌ ಪೊಲೀಸ್‌ ಇಲಾಖೆಯ ಅಧಿಕಾರಿ ಲಿಯೋ ಕೋಸಿನ್ಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಇದನ್ನು ಓದಿ: Mexico Mass Shooting: ನಗರದ ಮೇಯರ್‌ ಸೇರಿ 12 ಜನರ ದಾರುಣ ಸಾವು!

ಹಾಗೂ, ಈ ಪ್ರಕರಣ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಕೂಡಲೇ ವಾಲ್‌ಮಾರ್ಟ್‌ ಸ್ಟೋರ್‌ ಒಳಗೆ ಹೋಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದೂ ಹೇಳಿದ್ದಾರೆ. ಓರ್ವ ಬಂಧೂಕುಧಾರಿ ಎಂದು ನಾವು ನಂಬುತ್ತೇವೆ ಹಾಗೂ ಆ ಓರ್ವ ಬಂದೂಕುಧಾರಿ ಈ ಸಮಯದಲ್ಲಿ ಮೃತಪಟ್ಟಿದ್ದಾನೆ ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ವರ್ಜೀನಿಯಾದ ಚೆಸಾಪೀಕ್‌ ನಗರದಲ್ಲಿ ಈ ಗುಂಡಿನ ದಾಳಿ ನಡೆದಿದ್ದು ಈ ಬಗ್ಗೆ ಚೆಸಾಪೀಕ್‌ ನಗರ ಎಂಬ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಸಹ ಈ ದಾಳಿ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಯಾಮ್‌ ಸರ್ಕಲ್‌ನ ವಾಲ್‌ಮಾರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಬಂದೂಕುಧಾರಿಯು ಹಲವರನ್ನು ಕೊಂದಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದೂ ಟ್ವೀಟ್‌ ಮಾಡಿದ್ದಾರೆ. ಹಾಗೂ, ನಮ್ಮ ಮೊದಲ ಪ್ರತಿಸ್ಪಂದಕರು ಉತ್ತಮವಾಗಿ ತರಬೇತಿ ಪಡೆದಿದ್ದಾರೆ ಮತ್ತು ಪ್ರತಿಕ್ರಿಯಿಸಲು ಸಿದ್ಧರಾಗಿದ್ದಾರೆ; ದಯವಿಟ್ಟು ಅವರಿಗೆ ಹಾಗೆ ಮಾಡಲು ಅವಕಾಶ ನೀಡಿ ಎಂದೂ ಅವರು ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ. 

ಇದನ್ನೂ ಓದಿ: 28 ವರ್ಷಗಳ ನಂತರ ಡೆನ್ಮಾರ್ಕ್‌ ಮಾಲ್‌ನಲ್ಲಿ ಶೂಟೌಟ್‌, ಮೂವರ ಹತ್ಯೆ!

ಘಟನಾ ಸ್ಥಳದಲ್ಲಿ ಹೆಚ್ಚು ಪೊಲೀಸ್ ಅಧಿಕಾರಿಗಳು ಇರುವುದನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ. ಇನ್ನು, ಹಲವು ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರದೇಶವನ್ನು ಸುತ್ತುವರಿಯಲಾಗುತ್ತಿದೆ ಎಂದೂ ಚೆಸಾಪೀಕ್‌ ಪೊಲೀಸ್‌ ಇಲಾಖೆಯ ಅಧಿಕಾರಿ ಲಿಯೋ ಕೋಸಿನ್ಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, 10 ಕ್ಕಿಂತ ಹೆಚ್ಚು ಜನರು ಬಲಿಯಾಗಿಲ್ಲ ಎಂದು ನಾವು ನಂಬುತ್ತೇವೆ ಎಂದು ಪೊಲೀಸರು ಹೇಳಿದ್ದಾರೆಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. 

ಇನ್ನು, ಈ ಪ್ರದೇಶದ ಅಂದರೆ ವರ್ಜಿನಿಯಾ ಮಹಿಳಾ ಸೆನೇಟರ್‌ ಲೂಯಿಸ್‌ ಲ್ಯೂಕಾಸ್‌, ‘’ಇಂದು ರಾತ್ರಿ ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ನನ್ನ ಜಿಲ್ಲೆಯ ವಾಲ್‌ಮಾರ್ಟ್‌ನಲ್ಲಿ ಅಮೆರಿಕದ ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿ ನಡೆದಿರುವುದು ಹೃದಯ ವಿದ್ರಾವಕವಾಗಿದೆ." "ನಮ್ಮ ದೇಶದಲ್ಲಿ ಹಲವಾರು ಜೀವಗಳನ್ನು ತೆಗೆದುಕೊಂಡ ಈ ಬಂದೂಕು ಹಿಂಸಾಚಾರದ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾವು ಪರಿಹಾರಗಳನ್ನು ಕಂಡುಕೊಳ್ಳುವವರೆಗೆ ನಾನು ವಿಶ್ರಮಿಸುವುದಿಲ್ಲ" ಎಂದು ಅವರು ಟ್ವೀಟ್‌ ಮೂಲಕ ಈ ದಾಳಿಯನ್ನು ಖಂಡಿಸಿದ್ದಾರೆ. 

Follow Us:
Download App:
  • android
  • ios