Asianet Suvarna News Asianet Suvarna News

Afghans Amid Harsh Winter: ಕೊನೆಗೂ ವಿಶ್ವದ ಮುಂದೆ ಕೈಚಾಚಿದ ತಾಲಿಬಾನಿ ನಾಯಕರು

ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. 

Mullah Baradar urges world community to help Afghans amid freezing winter gow
Author
Bengaluru, First Published Jan 9, 2022, 9:28 PM IST

ಕಾಬೂಲ್‌: ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ಆ ವಿಡಿಯೊವನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ‘ಆರ್‌ಟಿಎ’ ಪ್ರಸಾರ ಮಾಡಿದೆ. ಹೌದು, ಯುದ್ಧ ಪೀಡಿತ ಅಫ್ಗಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವದ ರಾಷ್ಟ್ರಗಳು ತಮ್ಮ ರಾಜಕೀಯ ಸಮಸ್ಯೆಯನ್ನೂ ಮೀರಿ ಸಹಾಯ ಹಸ್ತ ಚಾಚಬೇಕು ಎಂದು ತಾಲಿಬಾನ್‌ ನಾಯಕ ಮುಲ್ಲಾ ಬರಾದರ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್‌ನ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, 'ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯು ಗಂಭೀರವಾಗಿದೆ ಎಂದು ಹೇಳಿದ್ದಾರೆ.

‘ಅಫ್ಘಾನಿಸ್ತಾನ ಒಂದು ಕಡೆ ನಿರ್ಬಂಧಗಳನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಕಳೆದ 20 ವರ್ಷಗಳ ಆಡಳಿತ ದೇಶದಲ್ಲಿ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಯಾವುದೇ ಮೂಲಸೌಕರ್ಯ ಸೃಷ್ಟಿ ಮಾಡಿಲ್ಲ. ದೇಶದ ನಾಗರಿಕರಿಗೆ ಹಣ, ವಸತಿ ಮತ್ತು ಆಹಾರದ ತೀವ್ರ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಅಫ್ಗನ್ನರಿಗೆ ವಿಶ್ವ ರಾಷ್ಟ್ರಗಳಿಂದ ಮಾನವೀಯ ಸಹಾಯದ ತುರ್ತು ಎದುರಾಗಿದೆ,’ ಮುಲ್ಲಾ ಬರದಾರ್ ಹೇಳಿಕೊಂಡಿದ್ದಾರೆ.

ತುರ್ತು ಪರಿಸ್ಥಿತಿ ಎದುರಾದರೂ ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದ ಬರಾದರ್, ಇದೇ ವೇಳೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ನಾಗರಿಕರಿಗೆ ಸಹಾಯ ಮಾಡಲು ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

MUKESH AMBANI: ಅಮೆರಿಕದಲ್ಲಿ ಅಂಬಾನಿ ಸಾಮ್ರಾಜ್ಯ, ಐಷಾರಾಮಿ ಹೋಟೆಲ್ ತೆಕ್ಕೆಗೆ!

ವಾರದ ಹಿಂದೆ, ನೈಸರ್ಗಿಕ ವಿಕೋಪದ ಕಾರಣಕ್ಕಾಗಿ  ಆಫ್ಘಾನಿಸ್ತಾನವು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಅಲ್ಲಿ ವಿಪರೀತ ಹಿಮ ಮತ್ತು ಮಳೆ ಸುರಿಯುತ್ತಿದ್ದು, ದೇಶದ ಪ್ರಮುಖ ರಸ್ತೆಗಳು ಬಂದ್‌ ಆಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಈ ವರೆಗೂ ಆಡಳಿತಾತ್ಮಕ ವಿಚಾರದಲ್ಲಿ ತಾಲಿಬಾನ್ ಮುಖಂಡರು ಪ್ರತಿನಿತ್ಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ನೈಸರ್ಗಿಕ ವಿಕೋಪ ಆಫ್ಘಾನಿಸ್ತಾನದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ.

ಅತಿವೃಷ್ಟಿಯಿಂದಾಗಿ ಹಲವಾರು ಪ್ರಾಂತ್ಯಗಳಲ್ಲಿ ಜನರು ಆರ್ಥಿಕ ನಷ್ಟವನ್ನು ಎದುರಿಸಿದ್ದಾರೆ ಮತ್ತು ಸೇತುವೆಗಳು ಹಾನಿಗೊಳಗಾಗಿವೆ ಎಂದು ಲೋಕೋಪಯೋಗಿ ಸಚಿವಾಲಯದ ಅಧಿಕಾರಿ ಹಫೀಜ್ ಮೊಹಮ್ಮದ್ ಯಾಕೋಬ್ ಹೇಳಿದ್ದಾರೆ. ಆದಾಗ್ಯೂ, ಸ್ಥಳೀಯ ಮಾಧ್ಯಮಗಳ ಪ್ರಕಾರ ಅವರಿಗೆ ತಕ್ಷಣವೇ ಸಹಾಯವನ್ನು ನೀಡಲಾಯಿತು. ವಿದೇಶಗಳು ಅಫ್ಘಾನಿಸ್ತಾನಕ್ಕೆ ಬೆಂಬಲವನ್ನು ನಿಲ್ಲಿಸಿದರೆ ಶೀಘ್ರದಲ್ಲೇ ಅಫ್ಘಾನಿಸ್ತಾನದಲ್ಲಿ ದೊಡ್ಡ ಮಾನವ ದುರಂತಕ್ಕೆ ಸಾಕ್ಷಿಯಾಗಲಿದೆ ಎಂದು ರಾಜಕೀಯ ವಿಶ್ಲೇಷಕ ಅಬ್ದುಲ್ ನಸೀರ್ ರಿಶ್ತಿಯಾ ಹೇಳಿದ್ದಾರೆ. ಅಫ್ಘಾನಿಸ್ತಾನದ ಶೀತಲ ಚಳಿಗಾಲದ ಉದ್ದಕ್ಕೂ, ಮಾನವೀಯ ಸಂಸ್ಥೆಗಳು ನಿಯಮಿತವಾಗಿ ಗಂಭೀರ ವಿಪತ್ತಿನ ಬಗ್ಗೆ ಎಚ್ಚರಿಕೆ ನೀಡುತ್ತವೆ. ಅಫ್ಘಾನ್ ಸಮಸ್ಯೆಗೆ ಸಹಾಯ ಮಾಡಲು 1.5 ಶತಕೋಟಿ USD ಸಂಗ್ರಹಿಸಿದೆ ಎಂದು ವಿಶ್ವಸಂಸ್ಥೆಯು ಈ ತಿಂಗಳ ಆರಂಭದಲ್ಲಿ ಹೇಳಿದೆ.

ಪೊಲೀಸ್‌ ವಾಹನದಿಂದ ಹಾರಿ ಎಸ್ಕೇಪ್‌ ಆದ ಕೈದಿ ... ವಿಡಿಯೋ ವೈರಲ್‌

ಈ ಮಧ್ಯೆ, ಅಫ್ಘಾನಿಸ್ತಾನಕ್ಕೆ ಚೀನಾದ ರಾಯಭಾರಿಯಾಗಿರುವ ವಾಂಗ್ ಯು ಕಳೆದ ವಾರ ಮುಲ್ಲಾ ಬರಾದರ್ ಅವರನ್ನು ಭೇಟಿ ಮಾಡಿ, ದೇಶಕ್ಕೆ ಸಹಾಯ ಮಾಡುವುದನ್ನು ಮುಂದುವರಿಸಲು ಮತ್ತು ಅದರ ಆರ್ಥಿಕ ಚೇತರಿಕೆಯಲ್ಲಿ ಸಹಾಯ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾ ಎಲ್ಲಾ ಆಫ್ಘನ್ನರ ಬಗ್ಗೆ ಸ್ನೇಹಪರ ನೀತಿಯನ್ನು ಹೊಂದಿದೆ ಮತ್ತು ಸ್ಥಿರತೆ ಮತ್ತು ಪುನರ್‌ನಿರ್ಮಾಣಕ್ಕಾಗಿ ಅವರ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ವಾಂಗ್  ಹೇಳಿದ್ದಾರೆ.

ತಾಲಿಬಾನ್ ಅಂತರಾಷ್ಟ್ರೀಯ ಸಮುದಾಯದಿಂದ ಮನ್ನಣೆ ಪಡೆಯುವುದನ್ನು ಮುಂದುವರೆಸಿದೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ, ದೇಶದ ಪರಿಸ್ಥಿತಿ ಹದಗೆಟ್ಟಿದೆ. ಅನೇಕ ದೇಶಗಳು ತಾಲಿಬಾನ್‌ಗೆ ಮನ್ನಣೆ ಬೇಕಾದರೆ ಮಹಿಳೆಯರನ್ನು ಗೌರವದಿಂದ ಕಾಣಲು ರಚನಾತ್ಮಕ ಸರ್ಕಾರವನ್ನು ಸ್ಥಾಪಿಸಲು ಕೇಳಿಕೊಂಡಿವೆ.

Follow Us:
Download App:
  • android
  • ios