Asianet Suvarna News Asianet Suvarna News

ಆಸಿಯಾನ್‌ ಶೃಂಗ: ಇಂಡಿಯಾ ಬದಲು ಭಾರತ ಎಂದ ಮೋದಿ

ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಡೆದ ಇಂಡೋ-ಅಸಿಯಾನ್‌ ಶೃಂಗದಲ್ಲಿ ಇಂಡಿಯಾ ಬದಲು ಭಾರತ ಎಂದು ತಮ್ಮ ಭಾಷಣದಲ್ಲಿ ಬಳಸಿ ಗಮನ ಸೆಳೆದರು

Modi said Bharat instead of India in his ASEAN Summit speech at Jakarta akb
Author
First Published Sep 8, 2023, 11:31 AM IST

ಜಕಾರ್ತಾ: ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಡೆದ ಇಂಡೋ-ಅಸಿಯಾನ್‌ ಶೃಂಗದಲ್ಲಿ ಇಂಡಿಯಾ ಬದಲು ಭಾರತ ಎಂದು ತಮ್ಮ ಭಾಷಣದಲ್ಲಿ ಬಳಸಿ ಗಮನ ಸೆಳೆದರು. 21ನೇ ಶತಮಾನ ನಮ್ಮದು ಎಂದ ಮೋದಿ, ಭಾರತ್‌ ಹಾಗೂ ಆಸಿಯಾನ್‌ ರಾಷ್ಟ್ರಗಳನ್ನು ಭೂಗೋಳ ಹಾಗೂ ಇತಿಹಾಸ ಒಂದುಗೂಡಿಸುತ್ತದೆ ಎಂದರು.

ಭಾರತ-ಆಸಿಯಾನ್‌ ಸಹಕಾರ ವಿಸ್ತರಣೆಗೆ ಮೋದಿ 12 ಅಂಶದ ಪ್ರಸ್ತಾಪ

ಭಾರತ ಮತ್ತು 10 ದೇಶಗಳ ಆಸಿಯಾನ್‌ ನಡುವಿನ ಸಹಕಾರ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು 12 ಅಂಶಗಳ ಪ್ರಸ್ತಾಪ ಮಂಡಿಸಿದ್ದಾರೆ. ಇವುಗಳಲ್ಲಿ ವ್ಯಾಪಾರ, ಡಿಜಿಟಲ್‌ ರೂಪಾಂತರ ಹಾಗೂ ಸಾರಿಗೆ ಸಂಪರ್ಕ ಸೇರಿವೆ. ಇಂಡೋನೇಷ್ಯಾದ (Indonesia) ಜಕಾರ್ತಾದಲ್ಲಿ ನಡೆದ ಆಸಿಯಾನ್‌ ಶೃಂಗದಲ್ಲಿ ಪ್ರಸ್ತಾವ ಮಂಡಿಸಿದ ಮೋದಿ, ‘ಕೋವಿಡ್‌ ನಂತರ ವಿಶ್ವದಲ್ಲಿ ಬದಲಾವಣೆಯ ಅಗತ್ಯ ಇರುವ ಕಾರಣ ಈ ಅಂಶಗಳು ಮಹತ್ವದ್ದಾಗಿವೆ. ಮುಕ್ತ ಇಂಡೋ-ಪೆಸಿಫಿಕ್‌ (Indo pecific)ವಲಯ ನಿರ್ಮಾಣವಾಗಬೇಕಿದೆ’ ಎನ್ನುವ ಮೂಲಕ ಈ ಸಮುದ್ರದಲ್ಲಿ ಏಕಸ್ವಾಮ್ಯಕ್ಕೆ ಯತ್ನಿಸುತ್ತಿರುವ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಜಿ20 ಆರಂಭಕ್ಕೂ ಮುನ್ನ ಮೋದಿ ಜಕರ್ತಾ ಪ್ರಯಾಣ, ಇಲ್ಲಿದೆ ಬಿಡುವಿಲ್ಲದ 3 ದಿನದ ವೇಳಾಪಟ್ಟಿ!

ಆಗ್ನೇಯ ಏಷ್ಯಾ, ಭಾರತ, ಪಶ್ಚಿಮ ಏಷ್ಯಾ (West Asia) ಮತ್ತು ಯುರೋಪ್‌ ಅನ್ನು ಸಂಪರ್ಕಿಸುವ ಬಹು-ಮಾದರಿ ಸಂಪರ್ಕ ಮತ್ತು ಆರ್ಥಿಕ ಕಾರಿಡಾರ್‌ ಸ್ಥಾಪನೆ ಮತ್ತು ದಿಲ್ಲಿಯಲ್ಲಿನ ಡಿಜಿಟ್ ಸಾರ್ವಜನಿಕ ಮೂಲಸೌಕರ್ಯ ದಾಸ್ತಾನನ್ನು ಆಸಿಯಾನ್‌ ದೇಶಗಳೊಂದಿಗೆ ಹಂಚಿಕೊಳ್ಳುವುದು, ಭಯೋತ್ಪಾದನೆ ನಿಗ್ರಹ, ಭಯೋತ್ಪಾದನೆ ಹಣಕಾಸು ನೆರವಿಗೆ ತಡೆ ಮತ್ತು ಸೈಬರ್‌ ತಪ್ಪು ಮಾಹಿತಿಯ ವಿರುದ್ಧ ಸಾಮೂಹಿಕ ಹೋರಾಟ- ಇವು 12 ಅಂಶದ ಪ್ರಸ್ತಾಪದಲ್ಲಿವೆ. ಇದೇ ವೇಳೆ, ಶೃಂಗಸಭೆಯಲ್ಲಿ ಎರಡು ಜಂಟಿ ಕಡಲ ಸಹಕಾರ ಮತ್ತು ಆಹಾರ ಭದ್ರತೆಯ 2 ಗೊತ್ತುವಳಿ ಅಂಗೀಕರಿಸಲಾಯಿತು.

ಹೆಸರು ಬದಲಿಗೆ ಕೋರಿಕೆ ಬಂದರೆ ಪರಿಶೀಲನೆ: ವಿಶ್ವಸಂಸ್ಥೆ

ನವದೆಹಲಿ: ಕೇಂದ್ರ ಸರ್ಕಾರವು (Central Govt)ದೇಶದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಿದೆ ಎಂಬ ವದಂತಿ ಬೆನ್ನಲ್ಲೇ ‘ದೇಶದ ಹೆಸರನ್ನು ಬದಲಾಯಿಸುವಂತೆ ಆಯಾ ಸರ್ಕಾರಗಳು ವಿನಂತಿಸಿದರೆ ಅದನ್ನು ವಿಶ್ವಸಂಸ್ಥೆ ಸ್ವೀಕರಿಸುತ್ತದೆ ಮತ್ತು ಹೆಸರನ್ನು ಬದಲಾವಣೆ ಮಾಡಲಿದೆ’ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಫರ್ಹಾನ್‌ ಹಕ್‌ ‘ಟರ್ಕಿಯು ತನ್ನ ದೇಶದ ಹೆಸರನ್ನು ಟರ್ಕಿಯೆ ಎಂದು ಬದಲಾಯಿಸುವುದಾಗಿ ನಮಗೆ ನೀಡಿದ ಔಪಚಾರಿಕ ವಿನಂತಿಯನ್ನು ಸ್ವೀಕರಿಸಿದೆವು. ನಮಗೆ ಅಂತಹ ವಿನಂತಿಗಳು ಬಂದರೆ ನಿಸ್ಸಂಶಯವಾಗಿ ನಾವು ಅದನ್ನು ಪರಿಗಣಿಸುತ್ತೇವೆ’ ಎಂದಿದ್ದಾರೆ.

ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದಲ್ಲಿ ಬೃಹತ್‌ ಗಣೇಶ ವಿಗ್ರಹ ಪತ್ತೆ!

ಅಖಂಡ ಭಾರತದ ಕನಸು ಶೀಘ್ರ ನನಸು

ನಾಗಪುರ: ವಸಾಹತುಶಾಹಿ ಇಂಡಿಯಾ ಪದವನ್ನು ಭಾರತವೆಂದು ಬದಲಾಯಿಸುವ ಕುರಿತು ಪ್ರಕ್ರಿಯೆಗಳು ಆರಂಭವಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಅಖಂಡ ಭಾರತದ ಕನಸು ಕೂಡಾ ನನಸಾಗಲಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭರವಸೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬ ಅಖಂಡ ಭಾರತ ಯಾವಾಗ ಅಸ್ತಿತ್ವಕ್ಕೆ ಬರಲಿದೆ ಎಂದು ಪ್ರಶ್ನಿಸಿದ್ದ. ಅದಕ್ಕೆ ಉತ್ತರಿಸಿದ ಭಾಗವತ್‌ ‘ಇಂಥದ್ದೇ ದಿನ ಅಖಂಡ ಭಾರತ ಅಸ್ತಿತ್ವಕ್ಕೆ ಬರಲಿದೆ ಎಂದು ನಾನು ಹೇಳಲಾರೆ. ಆದರೆ ಆ ಬಗ್ಗೆ ನೀವು ಕಾರ್ಯತತ್ಪರಾದರೆ ನೀವು ವೃದ್ಧರಾಗುವುದರೊಳಗೆ ಆ ಕನಸು ನನಸಾಗಲಿದೆ. ಏಕೆಂದರೆ, ಯಾರಾರ‍ಯರು ಭಾರತದಿಂದ ವಿಭಜನೆಯಾಗಿ ದೂರವಾದರೂ, ಅವರಿಗೆಲ್ಲಾ ನಾವು ತಪ್ಪು ಮಾಡಿದ್ದೇವೆ ಎಂಬ ಅರಿವಾಗುತ್ತಿದೆ. ಅವರೆಲ್ಲಾ ಮತ್ತೆ ನಾವು ಮತ್ತೆ ಭಾರತದೊಳಗೆ ವಿಲೀನವಾಗಬೇಕೆಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭೂಪಟದಲ್ಲಿನ ಗೆರೆಯನ್ನು ಅಳಿಸಿಹಾಕಿದಾಕ್ಷಣ ಅವರು ಭಾರತೀಯರಾಗಲು ಸಾಧ್ಯವಾಗದು. ಭಾರತೀಯರಾಗುವುದೆಂದರೆ ಭಾರತದ ಗುಣಲಕ್ಷಗಳನ್ನು ಸ್ವೀಕರಿಸುವುದು ಎಂದು ಹೇಳಿದರು.

Follow Us:
Download App:
  • android
  • ios