ಜಕಾರ್ತ[ಜ.13]: ಹಿಂದು ಹಾಗೂ ಬೌದ್ಧ ಧರ್ಮದ ಪಾರಂಪರಿಕ ಕ್ಷೇತ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಸೆಂಟ್ರಲ್‌ ಜಾವಾದಲ್ಲಿ ಬೃಹತ್‌ ಗಾತ್ರದ ಗಣಪತಿ ವಿಗ್ರಹವೊಂದು ಪತ್ತೆಯಾಗಿದೆ.

ಸಾಂಸ್ಕೃತಿಕ ಪಾರಂಪರಿಕ ಕ್ಷೇತ್ರಗಳ ರಕ್ಷಣಾ ಸಂಸ್ಥೆ(ಬಿಪಿಸಿಬಿ)ಯು ಸೆಂಟ್ರಲ್‌ ಜಾವಾದ ವೊನೊಸೊಬೊ ಜಿಲ್ಲೆಯ ಡೀಂಗ್‌ ವೆಟನ್‌ ಗ್ರಾಮದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಭೂಮಿಯೊಳಗೆ ಹೂತು ಹೋಗಿದ್ದ ಈ ಭಾರೀ ದೊಡ್ಡದಾದ ಗಣೇಶನ ಪ್ರತಿಮೆ ಪತ್ತೆಯಾಗಿದೆ.

ಹಿಂದುಗಳೇ ಹೆಚ್ಚಿರುವ ಗ್ರಾ.ಪಂ. ಮುಸ್ಲಿಂ ಅಧ್ಯಕ್ಷ!

2019ರ ಡಿಸೆಂಬರ್‌ನಲ್ಲಿ ಜಮೀನಿನನ್ನು ಭತ್ತ ನಾಟಿ ಮಾಡಲು ನೇಗಿಲಿನಿಂದ ಹದಗೊಳಿಸುತ್ತಿದ್ದಾಗ, ಗಣೇಶ ಮೂರ್ತಿ ಇರುವ ಬಗ್ಗೆ ಗೊತ್ತಾಗಿತ್ತು. ಆ ನಂತರ, ಕೈಗೊಳ್ಳಲಾದ ಉತ್ಖನನದ ಮೂಲಕ 140 ಸೆಂ.ಮೀ ಎತ್ತರ ಹಾಗೂ 120 ಸೆಂ.ಮೀ ಅಗಲವಿರುವ ಭಾರೀ ದೊಡ್ಡದಾದ ಆದರೆ, ಕೈಗಳು ಮತ್ತು ತಲೆ ಇರದ ಗಣೇಶನ ಮೂರ್ತಿಯನ್ನು ಹೊರತೆಗೆಯಲಾಗಿದೆ.

ಆದಾಗ್ಯೂ, ಈ ಗಣೇಶ ಮೂರ್ತಿಯ ತಲೆ ಮತ್ತು ಕೈಗಳ ಪತ್ತೆಗೆ ಮುಂದಾಗಲಾಗುತ್ತದೆ ಎಂದು ಬಿಪಿಸಿಬಿ ಅಧಿಕಾರಿಗಳು ಹೇಳಿದ್ದಾರೆ.