ಮೋದಿಗೆ ಹಿರೋಶಿಮಾದಲ್ಲಿ ಭರ್ಜರಿ ಸ್ವಾಗತ: ಮೇ. 22ಕ್ಕೆ ಪಪುವಾ, ಆಸ್ಪ್ರೇಲಿಯಾಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ 6 ದಿನದ ವಿದೇಶ ಪ್ರವಾಸ ನಿನ್ನೆ ಆರಂಭವಾಗಿದ್ದು. ಮೋದಿ ಅವರು ಭಾರತೀಯ ಕಾಲಮಾನ ಶುಕ್ರವಾರ ಸಂಜೆ ಹಿರೋಶಿಮಾಗೆ ಬಂದಿಳಿದರು.

Modi receives grand welcome in Hiroshima 6 day 3country tour begins akb

ಹಿರೋಶಿಮಾ: ಪ್ರಧಾನಿ ನರೇಂದ್ರ ಮೋದಿ ಅವರ 6 ದಿನದ ವಿದೇಶ ಪ್ರವಾಸ ನಿನ್ನೆ ಆರಂಭವಾಗಿದ್ದು. ಮೋದಿ ಅವರು ಭಾರತೀಯ ಕಾಲಮಾನ ಶುಕ್ರವಾರ ಸಂಜೆ ಹಿರೋಶಿಮಾಗೆ ಬಂದಿಳಿದರು. ಇಲ್ಲಿ ಅವರು ಜಿ-7 ಶೃಂಗದಲ್ಲಿ ಭಾಗಿ ಆಗಲಿದ್ದು, ‘ಕ್ವಾಡ್‌’ (Quad) ದೇಶಗಳ ನಾಯಕರ ಜತೆಗೂ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಯುದ್ಧ ಹಾಗೂ ಹವಾಮಾನ ಬದಲಾವಣೆಯಂಥ ಜಾಗತಿಕ ಸಮಸ್ಯೆಗಳ ಬಗ್ಗೆ ವಿಶ್ವ ನಾಯಕರ ಜತೆ ಚರ್ಚಿಸಲಿದ್ದಾರೆ. ಒಟ್ಟಾರೆ ಮೋದಿ ಅವರ 40 ಸಭೆಗಳು 3 ದೇಶಗಳ ಪ್ರವಾಸದಲ್ಲಿ ಏರ್ಪಾಟಾಗಿವೆ. ಜಪಾನ್‌ ನಂತರ ಪಪುವಾ ನ್ಯೂಗಿನಿಯಾ ಹಾಗೂ ಆಸ್ಪ್ರೇಲಿಯಾಗೂ ಮೋದಿ ಭೇಟಿ ನೀಡಲಿದ್ದಾರೆ.

ಪ್ರವಾಸದ ಮೊದಲ ಭಾಗವಾಗಿ, ಹಿರೋಶಿಮಾಗೆ (Hiroshima) ಮೋದಿ ಬಂದಿಳಿಯುತ್ತಿದ್ದಂತೆಯೇ ಭರ್ಜರಿ ಸ್ವಾಗತ ದೊರಕಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಂಜಾತರು ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ತ್ರಿವರ್ಣಧ್ವಜ (tricolor Flag) ಹಿಡಿದು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿ ಅವರನ್ನು ಹತ್ತಿರದಿಂದ ನೋಡಿದ್ದಲ್ಲದೆ, ಅವರ ಕೈಕುಲುಕಿ ಸಂಭ್ರಮಿಸಿದರು.

ಶಿಂಜೋ ಅಬೆ ಬಳಿಕ ಜಪಾನ್‌ ಪ್ರಧಾನಿ ಹತ್ಯೆಗೂ ಯತ್ನ: ಕಿಶಿದಾ ಭಾಷಣ ಮಾಡ್ತಿದ್ದ ಸ್ಥಳದಲ್ಲಿ ಬಾಂಬ್‌ ಸ್ಫೋಟ

ಇಂದು ಪ್ರಧಾನಿ ಮೋದಿ ಅವರು ಜಿ-7 ಶೃಂಗದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು,'ಜಿ-7 ನಾಯಕರ ಜತೆಗೆ ಮಾತುಕತೆ ನಡೆಸಲು ಉತ್ಸುಕನಾಗಿದ್ದೇನೆ. ವಿಶ್ವ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರ ಜತೆ ಚರ್ಚಿಸಲಿದ್ದೇನೆ. ಇದೇ ವೇಳೆ ಕೆಲವು ನಾಯಕರ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸುತ್ತೇನೆ ಎಂದಿದ್ದಾರೆ.
ಶನಿವಾರದಿಂದ ಮೋದಿ ಮೇ 21ರವರೆಗೆ ಜಿ-7 ಶೃಂಗದಲ್ಲಿ ಭಾಗಿಯಾಗಲಿದ್ದಾರೆ. ಜಿ-7 ದೇಶಗಳಲ್ಲಿ ಜಪಾನ್‌ (tricolor), ಅಮೆರಿಕ (USA), ಬ್ರಿಟನ್‌ (UK), ಫ್ರಾನ್ಸ್‌ (France), ಜರ್ಮನಿ (Germany) , ಕೆನಡಾ (Canada) ಹಾಗೂ ಇಟಲಿ (Italy) ಇವೆ. ಶೃಂಗಕ್ಕೆ ಅತಿಥಿ ದೇಶವಾಗಿ ಭಾರತ ಪಾಲ್ಗೊಳ್ಳಲಿದೆ.

Health Tips: ಜಪಾನ್ ಮಂದಿ ಫಿಟ್ ಆ್ಯಂಡ್ ಫೈನ್ ಆಗಿರೋಕೆ ಕಾರಣವೇನು ಗೊತ್ತಾ?

ನಂತರ ಮೇ 22ರಂದು ಪಪುವಾ ನ್ಯೂಗಿನಿಯಾ (Papua New Guinea)ದೇಶಕ್ಕೆ ಮೋದಿ ಭೇಟಿ ನೀಡಿ, ಅಲ್ಲಿ ಭಾರತೀಯ ವೇದಿಕೆಯ 3ನೇ ಶೃಂಗದಲ್ಲಿ ಪಾಲ್ಗೊಂಡು, ಪಪುವಾ ಪ್ರಧಾನಿ ಜೇಮ್ಸ್‌ ಮಾರೇಪ್‌ ಅವರನ್ನು ಭೇಟಿ ಆಗಲಿದ್ದಾರೆ. ಪಪುವಾಗೆ ಭೇಟಿ ನೀಡುವ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಲಿದ್ದಾರೆ. ಪ್ರವಾಸದ 3ನೇ ಚರಣದಲ್ಲಿ ಅವರು ಆಸ್ಪ್ರೇಲಿಯಾಗೆ ಮೇ 22ರಿಂದ 24ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ಪ್ರಧಾನಿ ಅಂಥೋನಿ ಅಲ್ಬನೀಸ್‌ (Anthony Albanese) ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆಸ್ಪ್ರೇಲಿಯಾ ಉದ್ಯಮಿಗಳ ಜತೆ ಸಭೆ ನಡೆಸಲಿದ್ದಾರೆ ಹಾಗೂ ಸಿಡ್ನಿಯಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಲಿದ್ದಾರೆ.

ಜಪಾನ್‌ನಲ್ಲಿ ಮೋದಿ-ಜೆಲೆನ್‌ಸ್ಕಿ ಭೇಟಿ ಸಾಧ್ಯತೆ

ಜಪಾನ್‌ನಲ್ಲಿ ಜಿ-7 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದೇ ಶೃಂಗಕ್ಕೆ ಆಗಮಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಡಂತೆ ನಡೆದರೆ ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಲಿದೆ. ಜಪಾನ್‌ ಮನವಿ ಮೇರೆಗೆ ಜೆಲೆನ್‌ಸ್ಕಿ ಜಪಾನ್‌ಗೆ ಬಂದಿದ್ದಾರೆ. ಇದೇ ಸಂದರ್ಭದ ಸದ್ಬಳಕೆ ಮಾಡಿಕೊಂಡು ಮೋದಿ ಅವರು ಜೆಲೆನ್‌ಸ್ಕಿ ಜತೆ ಮಾತುಕತೆ ನಡೆಸಬಹುದು. ಈ ವೇಳೆ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚೆ ನಡೆಯಬಹುದು. ಆದರೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎಂದು ಮೂಲಗಳು ಹೇಳಿವೆ. ಉಕ್ರೇನ್‌-ರಷ್ಯಾ ಸಮರದ ನಂತರ ಮೋದಿ ಅವರು ಜೆಲೆನ್‌ಸ್ಕಿ ಜತೆ ಫೋನ್‌ನಲ್ಲಿ ಮಾತನಾಡಿ ಸಮರ ನಿಲ್ಲಿಸಲು ಮನವಿ ಮಾಡಿದ್ದರು. ಕಳೆದ ತಿಂಗಳು ಉಕ್ರೇನ್‌ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದರು.

Latest Videos
Follow Us:
Download App:
  • android
  • ios