ಜಿ7 ಸಭೆ ನಿಮಿತ್ತ ಜಪಾನ್‌ನಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಬ್ರೆಜಿಲ್‌ ಅಧ್ಯಕ್ಷ ಲುಲಾ ಡಿ ಸಿಲ್ವಾ ಜೊತೆ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಹಿರೋಶಿಮಾ: ಜಿ7 ಸಭೆ ನಿಮಿತ್ತ ಜಪಾನ್‌ನಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಬ್ರೆಜಿಲ್‌ ಅಧ್ಯಕ್ಷ ಲುಲಾ ಡಿ ಸಿಲ್ವಾ ಜೊತೆ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ರಿಷಿ ಹಾಗೂ ಮೋದಿ ಅವರು ಭಾರತ-ಬ್ರಿಟನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಫ್ರೀಟ್ರೇಡ್‌ ಅಗ್ರಿಮೆಂಟ್‌) ಕುರಿತು ಶೀಘ್ರ ಇತ್ಯರ್ಥ ಮಾಡುವ ಕುರಿತು ಸಮಾಲೋಚನೆ ನಡೆಸಿದರು.

ಬ್ರೆಜಿಲ್‌ ಅಧ್ಯಕ್ಷ ಲುಲಾ ಡಿ ಸಿಲ್ವಾ (Lulu D'silva) ವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ (PM Narendra Modi) ಅವರು, ಉಭಯ ದೇಶಗಳ ನಡುವಿನ ವ್ಯಾಪಾರ, ಜೈವಿಕ ಇಂಧನ, ಔಷಧ, ರಕ್ಷಣಾ ಉತ್ಪನ್ನ, ಕೃಷಿ, ಕ್ಷೀರೋತ್ಪನ್ನ ಹಾಗೂ ಇನ್ನಿತರ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವರ್ಷದ ಕುರಿತು ಮಾತುಕತೆ ನಡೆಸಿದರು.

ಚೀನಾ, ರಷ್ಯಾಗೆ ಮೋದಿ ಪರೋಕ್ಷ ಚಾಟಿ

ನಿಮ್ಮ ಬಳಿ ಆಟೋಗ್ರಾಫ್‌ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌!