ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್ ಒಬ್ಬರು ಬೆನ್ನಿಗೆ ಬೆಂಕಿ ಹತ್ತಿಸಿಕೊಂಡು ರಾಂಪ್ (Ramp) ಮೇಲೆ ಹೆಜ್ಜೆ ಹಾಕಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ಪ್ಯಾರಿಸ್: ಫ್ಯಾಷನ್ ಶೋದಲ್ಲಿ ಭಿನ್ನ ವಿಭಿನ್ನ ಧಿರಿಸುಗಳೊಂದಿಗೆ ಮಾಡೆಲ್‌ಗಳು ರಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವುದನ್ನು ನೀವು ಆಗಾಗ ನೋಡುತ್ತಿರುತ್ತಿರಿ. ಮಾಡೆಲ್‌ಗಳು ಧರಿಸುವ ಧಿರಿಸುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ನೋಡುಗರನ್ನು ಸೆಳೆಯುತ್ತಿರುತ್ತದೆ. ಒಬ್ಬೊಬ್ಬ ಡಿಸೈನರ್‌ಗಳು ಒಂದೊಂದು ವಿಭಿನ್ನವಾದ ಧಿರಿಸುಗಳೊಂದಿಗೆ ಮಾಡೆಲ್‌ಗಳನ್ನು ರಾಂಪ್ ಮೇಲೆ ತರುತ್ತಾರೆ. ಇವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ನೋಡುಗರ ಸೆಳೆತವನ್ನೇ ಡಿಸೈನರ್‌ಗಳು ಬಯಸುವುದರಿಂದ ಅವರು ಒಂದಕ್ಕಿಂತ ಒಂದು ವಿಭಿನ್ನವಾದ ನೋಡುಗರನ್ನು ಸೆಳೆಯುವ ರೀತಿಯಲ್ಲೇ ವಸ್ತ್ರ ವಿನ್ಯಾಸ ಮಾಡುತ್ತಾರೆ. ಅದೇ ರೀತಿ ಈಗ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್ ಒಬ್ಬರು ಬೆನ್ನಿಗೆ ಬೆಂಕಿ ಹತ್ತಿಸಿಕೊಂಡು ರಾಂಪ್ (Ramp) ಮೇಲೆ ಹೆಜ್ಜೆ ಹಾಕಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ಮಾಡೆಲ್ ಒಬ್ಬರು ಹೊರಭಾಗದಿಂದ ಬೆಂಕಿಯ ಜ್ವಾಲೆ ಧಗಧಗಿಸುತ್ತಿರುವ ಲಾಂಗ್ ಕೋಟೊಂದನ್ನು ಧರಿಸಿ ರಾಂಪ್ ಮೇಲೆ ಬೆಂಕಿಯಂತೆ ಬಂದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ(Instagram) 1 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

21 ವರ್ಷಗಳ ನಂತರ ಭಾರತಕ್ಕೆ Mrs World ಕಿರೀಟ ತಂದ ಸರ್ಗಮ್ ಕೌಶಲ್ ಯಾರು?

ಹೆಲಿಯೆಟ್ ಇಮಿಲ್ ಬ್ರಾಂಡ್ ಪ್ಯಾರಿಸ್ ಫ್ಯಾಷನ್ ವೀಕ್ (Paris Fashion Week) ಚಳಿಗಾಲದ ಧಿರಿಸುಗಳ ಪ್ರದರ್ಶನ 2023ರಲ್ಲಿ ಮಡೆಲ್ ಹುಡ್ಡೆಡ್ ಜಾಕೆಟ್, ಬಗ್ಗಿ ಪ್ಯಾಂಟ್, ಜೊತೆ ಬೂಟ್ ಧರಿಸಿ ವಾಕ್ ಮಾಡಿದ್ದು, ಇದು ನೋಡುಗರ ಎದೆಗೆ ಕಿಚ್ಚು ಹಚ್ಚುವಂತೆ ಮಾಡಿದೆ. ಇದು ಉಳಿದೆಲ್ಲಾ ಧಿರಿಸುಗಳಿಗಿಂತ ಹೆಚ್ಚು ಜನರನ್ನು ಸೆಳೆದಿದ್ದು, ಜನ ಒಂದು ಕ್ಷಣ ಮೂಕ ವಿಸ್ಮಿತರಾಗಿದ್ದಾರೆ. ಇದರಲ್ಲಿ ಮಾಡೆಲ್ ಮುಖವನ್ನು ಸಂಪೂರ್ಣವಾಗಿ ಕಾಣದಂತೆ ಕೋಟ್‌ ಮೇಲಿನ ಟೋಪಿಯಿಂದ ಮುಚ್ಚಲಾಗಿತ್ತು. ಮಾಡೆಲ್ ಯಾರು ಎಂಬುದೇ ಈ ವಿಡಿಯೋದಲ್ಲಿ ಕಾಣಿಸುವುದಿಲ್ಲ. ಅಲ್ಲದೇ ಕೋಟಿನ ಹೊರಭಾಗದಲ್ಲಿ ಎಲ್ಲಾ ಕಡೆಯಿಂದಲೂ ಬೆಂಕಿಯ ಜ್ವಾಲೆ ಕಾಣಿಸುತ್ತಿತ್ತು. ಈ ವಿಡಿಯೋವನ್ನು ಹೆಲಿಯೆಟ್ ಇಮಿಲ್ ಬ್ರಾಂಡ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ. 

ಹಾಗಂತ ಫ್ಯಾಷನ್ ಶೋದಲ್ಲಿ ಈ ರೀತಿಯ ವಿಭಿನ್ನ ಪ್ರಯೋಗ ಇದೇ ಮೊದಲೇನಲ್ಲ. ಅಮೆರಿಕಾದ ಸೂಪರ್ ಮಾಡೆಲ್ (American supermodel) ಬೆಲ್ಲಾ ಹಡಿಡ್( Bella Hadid) ಅವರು ಕೆಲ ತಿಂಗಳ ಹಿಂದೆ ಅಂದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಇಡೀ ದೇಹದ ಮೇಲೆ ಕೇವಲ ಪೈಂಟ್‌ನ ಧಿರಿಸು ಧರಿಸಿ ಆಕೆ ರಾಂಪ್ ಮೇಲೆ ನಡೆದಾಡಿದ್ದಳು. ವಿಡಿಯೋದಲ್ಲಿ ಮಾಡೆಲ್ ಹಡಿಡ್ ಟಾಪ್‌ಲೆಸ್ ಆಗಿ, ಎದೆಭಾಗವನ್ನು ಕೈಗಳಿಂದ ಮುಚ್ಚಿಕೊಂಡು ವೇದಿಕೆ ಮೇಲೆ ಬಂದಿದ್ದು, ಆಕೆ ಕೇವಲ ಪಾರದರ್ಶಕ ಥೋಂಗ್ಸ್ ಎಂದು ಕರೆಯಲ್ಪಡುವ ಒಳ ಉಡುಪು ಹಾಗೂ ಹೈ ಹೀಲ್ಡ್ ಚಪ್ಪಲ್ ಅನ್ನು ಧರಿಸಿದ್ದಳು, ಬೆತ್ತಲಾಗಿ ವೇದಿಕೆಗೆ ಬಂದ ಆಕೆಗೆ ಇಬ್ಬರು ಕಲಾವಿದರು ಬಿಳಿ ಬಣ್ಣದ ಸ್ಪೇಯಿಂದ ಆಕೆಯ ದೇಹವನ್ನು ಬಟ್ಟೆ ಧರಿಸಿದಂತೆ ಕಾಣುವಂತೆ ಮಾಡಿದ್ದರು.

ಖಡಕ್‌ ಪೊಲೀಸ್‌ ಕಂ ಸೂಪರ್ ಮಾಡೆಲ್‌, ಲ್ಯಾಕ್‌ಮಿ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಐಎಎಸ್ ಅಧಿಕಾರಿ

View post on Instagram
View post on Instagram