ಅರ್ಜೆಂಟೀನಾ ನಗರವನ್ನು ಭಾದಿಸುತ್ತಿರುವ ಜೀರುಂಡೆ ಮನೆ, ಅಂಗಡಿ, ರಸ್ತೆ ಎಲ್ಲಿ ನೋಡಿದರಲ್ಲಿ ಜೀರುಂಡೆ ರಾಶಿ ಆತಂಕಕ್ಕೊಳಗಾದ ಜನ, ವಿಡಿಯೋ ವೈರಲ್

ಅರ್ಜೆಂಟೀನಾ: ಕೆಲವೊಮ್ಮ ಒಂದು ಜೀರುಂಡೆ ಮಾಡುವ ಸದ್ದನ್ನೇ ತಡೆಯಲಾಗದು ಅಂತಹದರಲ್ಲಿ ಲಕ್ಷಾಂತರ ಜೀರುಂಡೆಗಳು ಬಂದು ನಗರವನ್ನಾವರಿಸಿದರೆ ಪರಿಸ್ಥಿತಿ ಹೇಗಿರಬಹುದು ನೀವೇ ಊಹೆ ಮಾಡಿ. ಹೌದು ಅರ್ಜೆಂಟೀನಾದ ನಗರದಲ್ಲಿ ರಾಶಿ ರಾಶಿ ಜೀರುಂಡೆಗಳು ಬಂದು ಸೇರಿದ್ದು, ಇದರಿಂದ ಅಲ್ಲಿ ಕಾರುಗಳು ಸೇರಿದಂತೆ ಕೆಲ ಆಸ್ತಿಗಳಿಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ. ಅರ್ಜೆಂಟೀನಾದ ಮಧ್ಯ ಪ್ರಾಂತ್ಯದಲ್ಲಿರುವ ಲಾ ಪಂಪಾದಲ್ಲಿನ ಸುಮಾರು 2,500 ಪಟ್ಟಣಗಳನ್ನು ಕಳೆದೊಂದು ವಾರದಿಂದ ಜೀರುಂಡೆಗಳ ಹಿಂಡು ಬಾಧಿಸುತ್ತಿದೆ. ಜೇನುನೊಣಗಳಂತೆ ರಾಶಿ ಬಿದ್ದಿರುವ ಇವುಗಳನ್ನು ಮನೆಗಳಿಂದ ಹೊರ ಹಾಕಲು ಜನ ಹೆಣಗಾಡುತ್ತಿದ್ದಾರೆ. 

ಈ ಜೀರುಂಡೆಗಳು ಮನೆ, ಅಂಗಳ, ಅಂಗಡಿ ಸೇರಿದಂತೆ ಎಲ್ಲಾ ಕಡೆಯೂ ಸೇರಿಕೊಂಡಿದ್ದು, ಇದರಿಂದ ಅಲ್ಲಿನ ಜನ ಕಂಗೆಟ್ಟಿದ್ದಾರೆ ಎಂದು ಉಪ ಮೇಯರ್ ಕ್ರಿಸ್ಟಿಯನ್ ಎಚೆಗರೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

Scroll to load tweet…

ಈ ಜೀರುಂಡೆಗಳು ಪೋಲೀಸ್ ಠಾಣೆ, ವಸತಿ ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿ ಮಾಡುವುದರ ಜೊತೆಗೆ ಚರಂಡಿಗಳನ್ನು ಮುಚ್ಚುವುದು ಮತ್ತು ಇತರ ಅನಾನುಕೂಲತೆಗಳಿಗೆ ಕಾರಣವಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಜೀರುಂಡೆಗಳು ಇಲ್ಲಿ ವಿನಾಶಕ್ಕೆ ಕಾರಣವಾಗುತ್ತಿದ್ದಂತೆ, ಸ್ಥಳೀಯ ಅಧಿಕಾರಿಗಳು ಇವುಗಳ ಆಕ್ರಮಣವನ್ನು ನಿಲ್ಲಿಸಲು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವುಗಳ ಕಾಟದಿಂದಾಗಿ ಬೀದಿದೀಪಗಳು ಮತ್ತು ಸಾರ್ವಜನಿಕ ಕಟ್ಟಡದ ದೀಪಗಳನ್ನು ಆಫ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Scroll to load tweet…

ಈ ಜೀರುಂಡೆಗಳು ಕಚ್ಚುವುದಿಲ್ಲ ಅಥವಾ ಕುಟುಕುವುದಿಲ್ಲ, ಆದರೆ ಅವು ಗಟ್ಟಿಮುಟ್ಟಾದ ದೇಹದ ಮೇಲ್ಭಾಗವನ್ನು ಹೊಂದಿದ್ದು, ಅವು ಹಾರುವಾಗ ಎದುರು ಸಿಕ್ಕುವ ವಸ್ತುಗಳಿಗೆ ಡಿಕ್ಕಿ ಹೊಡೆಯುತ್ತವೆ. ಇದರಿಂದಾಗುವ ಗಾಯವನ್ನು ತಪ್ಪಿಸಲು ಸ್ಥಳೀಯರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವಂತೆ ಸ್ಥಳೀಯ ಅಧಿಕಾರಿಗಳು ಜನರಿಗೆ ಹೇಳಿದ್ದಾರೆ.

ಮಳೆಗಾಲ, ಅಕ್ಕೀಲಿ ಹುಳ ಆಗ್ತಿದ್ಯಾ? ಹೀಗ್ ಮಾಡಿ ನೋಡಿ

ಕೆಲವು ನಿವಾಸಿಗಳು ಈ ಜೀರುಂಡೆಗಳನ್ನು ದೊಡ್ಡದಾದ ಬಾಕ್ಸ್‌ಗಳಲ್ಲಿ ತುಂಬಿ ಅವುಗಳನ್ನು ನಗರದಾಚೆಗೆ ಎಸೆದು ಬರುತ್ತಿದ್ದಾರೆ. ಆದರೆ ಹೀಗೆ ಜೀರುಂಡೆಗಳು ಈ ಸಂಖ್ಯೆಯಲ್ಲಿ ನಗರವನ್ನು ವ್ಯಾಪಿಸಿರುವುದಕ್ಕೆ ಅಸಾಧಾರಣವಾದ ಭಾರೀ ಮಳೆ ಹಾಗೂ ಇತ್ತೀಚೆಗೆ ಅರ್ಜೆಂಟೀನಾದಲ್ಲಿ ಹೆಚ್ಚಾದ ತಾಪಮಾನ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿ ತಾಪಮಾನವು ಸುಮಾರು 40Cಗೆ ಏರಿಕೆಯಾಗಿತ್ತು. ಇದು ಜೀರುಂಡೆಗಳ ಸಂತಾನೋತ್ಪತಿ ಏರಿಕೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

Gardening Tips: ಕೀಟಗಳಿಂದ ಗಿಡ ರಕ್ಷಿಸಲು ಇಲ್ಲಿವೆ ನೈಸರ್ಗಿಕ ಮದ್ದು!