Asianet Suvarna News Asianet Suvarna News

ಉದ್ಯೋಗಿ ಎಡವಟ್ಟು: ಆಕಸ್ಮಿಕವಾಗಿ 32 ಟಿಬಿ ಮಾಹಿತಿ ಸೋರಿಕೆ ಮಾಡಿದ ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಒಡೆತನದ ‘ಗಿಟ್‌ಹಬ್‌’ನಲ್ಲಿ ಉದ್ಯೋಗಿಯೊಬ್ಬ ಮಾಡಿದ ತಪ್ಪಿನಿಂದಾಗಿ ಸುಮಾರು 32 ಟಿಬಿಯಷ್ಟು ಮಾಹಿತಿ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ ಎಂಬುದು ಬೆಳಕಿಗೆ ಬಂದಿದೆ.

Microsoft owned GitHub accidentally leaked 32 TB of data on internet akb
Author
First Published Sep 20, 2023, 7:23 AM IST

ನವದೆಹಲಿ: ಮೈಕ್ರೋಸಾಫ್ಟ್‌ ಒಡೆತನದ ‘ಗಿಟ್‌ಹಬ್‌’ನಲ್ಲಿ ಉದ್ಯೋಗಿಯೊಬ್ಬ ಮಾಡಿದ ತಪ್ಪಿನಿಂದಾಗಿ ಸುಮಾರು 32 ಟಿಬಿಯಷ್ಟು ಮಾಹಿತಿ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಇಂಟರ್ನೆಟ್‌ನಲ್ಲಿ ಕ್ಲೌಡ್‌ ಭದ್ರತೆಯನ್ನು (cloud security) ಒದಗಿಸುವ ‘ವಿಜ್’(Wiz) ಇದನ್ನು ಕಂಡುಹಿಡಿದಿದೆ. ‘ಗಿಟ್‌ಹಬ್‌’ (GitHub) ಎಂಬುದು ಫೇಸ್‌ ರೆಕಗ್ನಿಶನ್‌ಗಾಗಿ ಎಐ ಸೌಲಭ್ಯವನ್ನು ಒದಗಿಸುವ ಸಂಸ್ಥೆಯಾಗಿದ್ದು, ಉದ್ಯೋಗಿಯೊಬ್ಬ ತಪ್ಪಾದ ಯುಆರ್‌ಎಲ್‌ ಸೃಷ್ಟಿ ಮಾಡಿದ ಕಾರಣಕ್ಕಾಗಿ ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದವರಿಗೆ ನಿಗದಿತಕ್ಕಿಂತ ಹೆಚ್ಚು ಮಾಹಿತಿಗಳು ಕಂಪನಿಯ ಸರ್ವರ್‌ನಿಂದ (Server) ಲಭ್ಯವಾಗಿದೆ. ಸುಮಾರು 32 ಟಿಬಿಯಷ್ಟು ಡಾಟಾ ಸೋರಿಕೆಯಾಗಿದ್ದು, ಇದರಲ್ಲಿ ಮೈಕ್ರೋಸಾಫ್ಟ್‌ ಸೇವೆಗಳ (Microsoft service) ಖಾಸಗಿ ಕೀಗಳು ಮತ್ತು 30 ಸಾವಿರಕ್ಕೂ ಹೆಚ್ಚು ಮೈಕ್ರೋಸಾಫ್ಟ್‌ನ ಟೀಮ್‌ ಮೆಸೇಜ್‌ (Team Message)ಸೇರಿದಂತೆ ಸಾಕಷ್ಟು ಖಾಸಗಿ ಮಾಹಿತಿಯನ್ನು ಬಿಟ್ಟುಕೊಟ್ಟಿರುಬಹುದು ಎಂದು ವಿಜ್‌ ಹೇಳಿದೆ.

ಕಮೆಂಟ್ ಮಾಡಿದರೂ ಸಾಕು ನಿಮ್ಮ ಡೇಟಾ ಕದಿಯುತ್ತೆ ChatGPT, 300 ಬಿಲಿಯನ್ ಮಾಹಿತಿಗೆ ಕನ್ನ!

ಸಲ್ಮಾನ್‌ ಖಾನ್‌, ಸುಂದರ್‌ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್‌ ಗ್ರಾಹಕರ ಮಾಹಿತಿ ಸೋರಿಕೆ..!

Follow Us:
Download App:
  • android
  • ios