ಅತೀಯಾದ ಬೆವರುವಿಕೆಯಿಂದ ಬೇಸತ್ತ ತಾರೆಯಿಂದ ಸರ್ಜರಿಚಿಕಿತ್ಸೆಯಲ್ಲಿ ಎಡವಟ್ಟು 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವುಬೆವರಿನ ಗ್ರಂಥಿಗಳನ್ನು ತೆಗೆಯಲು ಸರ್ಜರಿ, ಆರೋಗ್ಯದಲ್ಲಿ ಏರುಪೇರಾಗಿ ಸಾವು 

ಮೆಕ್ಸಿಕೋ(ಜು.15): ಪ್ರತಿಯೊಬ್ಬರ ದೇಹದಲ್ಲಿನ ಅಂಗಾಂಗ ಕಾರ್ಯನಿರ್ವಹಣೆ, ಚಟುವಟಿಕೆಗಳು ಅವರ ಆರೋಗ್ಯ, ಹಾರ್ಮೋನ್‌ಗೆ ತಕ್ಕಂತೆ ಇರುತ್ತದೆ. ಸಹಜವಾಗಿರುವ ಈ ಹಾರ್ಮೋನ್‌, ಗ್ರಂಥಿಗಳನ್ನು ನಿಮಗೆ ಬೇಕಾದಂತೆ ಬದಲಾಯಿಸಲು ಹೊರಟರೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಮೆಕ್ಸಿಕೋದ ಬಾಡಿಬಿಲ್ಡರ್, ಇನ್‌ಸ್ಟಾಗ್ರಾಂ ತಾರೆ ಒಡಾಲಿಸ್ ಸ್ಯಾಂಟೊಸ್ ಮೆನಾ ಉದಾಹರಣೆ. ತನಗಿರುವ ಅತೀಯಾದ ಬೆವರುವಿಕೆಯನ್ನು ಸರಿಪಡಿಸಲು ಹೋದ ಒಡಾಲಿಸ್ ಸಾವನ್ನಪ್ಪಿದ್ದಾಳೆ.

View post on Instagram

ಅದೊಂದು ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಪ್ರಾಣವನ್ನೇ ಕಳಕೊಂಡ ಮೆಕ್ಸಿಕನ್ ಸುಂದರಿ!

23 ವರ್ಷದ ಒಡಾಲಿಸ್ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಸ್ವತಃ ಬಾಡಿ ಬಿಲ್ಡರ್ ಆಗಿರುವ ಒಡಾಲಿಸಾ ಬಾಡಿ ಬಿಲ್ಡಿಂಗ್ ಟಿಪ್ಸ್ ನೀಡುತ್ತಿದ್ದರು. ಒಡಾಲಿಸ್ ಮಾತನ್ನು ಮೆಕ್ಸಿಕೋದಲ್ಲಿ ಜನ ಚಾಚು ತಪ್ಪದೆ ಪಾಲಿಸುತ್ತಿದ್ದರು. ಆದರೆ ಈಕೆಗೆ ಕಂಕುಳದಲ್ಲಿ ಅತೀಯಾದ ಬೆವರುವಿಕೆಯಾಗುತ್ತಿತ್ತು. ಇದರಿಂದ ಹಲವು ಬಾರಿ ಮುಜುಗರಕ್ಕೂ ಒಳಗಾಗಿದ್ದಾಳೆ. ಈ ಬೆವರುವಿಕೆಯನ್ನು ಸರಿಪಡಿಸಲು ಸರ್ಜರಿ ಮಾಡಿಸಿದ್ದಾಳೆ. ಸರ್ಜರಿ ಮಾಡಿದ 7 ದಿನಕ್ಕೆ ಒಡಾಲಿಸ್ ಸಾವನ್ನಪ್ಪಿದ್ದಾಳೆ.

View post on Instagram

ಮಿರಾಡ್ರೈ ಎಂಬ ಕಂಕುಳ ಬೆವರುವಿಕೆಯನ್ನು ಕಡಿಮೆ ಮಾಡುವ ಚಿಕಿತ್ಸೆಯನ್ನು ಮೆಕ್ಸಿಕೋದ ಗ್ವಾಡಲಜರಾದ ಸ್ಕಿನ್‌ಪೀಲ್ ಕ್ಲೀನಿಕ್ ಮಾಡುತ್ತಿದೆ. ಈ ಚಿಕಿತ್ಸೆಗೆ ಒಡಾಸಿಲ್ ಅವರ ಅನುಮತಿ ಮೇರೆಗೆ ಸೇರಿಸಲಾಗಿತ್ತು. ಈ ಸರ್ಜರಿಯಲ್ಲಿ ಶಾಖ ಶಕ್ತಿಯನ್ನು ಬಳಸಿಕೊಂಡು ಕಂಕುಳ ಕೆಳಗಿನ ಬೆವರು ಗ್ರಂಥಿಯನ್ನು ತೆಗೆದು ಹಾಕಲಾಗುತ್ತದೆ. ಈ ಚಿಕಿಕ್ಸೆ ದೇಹದ ಬೆವರು, ವಾಸನೆ ಹಾಗೂ ಕಂಕುಳ ಕೆಳಗಿನ ಕೂದಲನ್ನು ಕಡಿಮೆ ಮಾಡಲಿದೆ.

ಸುಂದರಿಯಾಗಲು 2 ವರ್ಷದಲ್ಲಿ 20 ಸರ್ಜರಿ: 22ರ ಯುವತಿ ಮುಖವೀಗ ವಿಕಾರ!

ಅರಿವಳಿಕೆ ಮದ್ದು ನೀಡಿ ಈ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಚಿಕಿತ್ಸೆ ಬೆನ್ನಲ್ಲೇ ಹೃದಯಾಘಾತಕ್ಕೊಳಗಾದ ಒಡಾಲಿಸ್ ಸಾವನ್ನಪ್ಪಿದ್ದಾಳೆ. ಇದೀಗ ಮೆಕ್ಸಿಕೋ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬೆವರುವಿಕೆ ಗ್ರಂಥಿಗಳನ್ನು ತೆಗೆದ ಕಾರಣ ಅಥವಾ ಕೆಲಸಕ್ಕಾಗಿ ತರಬೇತಿ ಪಡೆಯದ ವ್ಯಕ್ತಿಯಿಂದ ಅರಿವಳಿಕೆ ನೀಡುವುದರಿಂದ ಓಡಾಲಿಸ್ ಸಾವು ಸಂಭವಿಸಿರಹುದು ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.