Asianet Suvarna News Asianet Suvarna News

ಆಸ್ಪ್ರೇಲಿಯಾದಲ್ಲಿ ಮೋದಿಗೆ ಭರ್ಜರಿ ಸ್ವಾಗತ: ಅಮೆರಿಕದಲ್ಲೂ ಭಾರಿ ಸಿದ್ಧತೆ

3 ದೇಶಗಳ ಪ್ರವಾಸದ ಕೊನೆಯ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮೇ.22) ರಾತ್ರಿ ಆಸ್ಪ್ರೇಲಿಯಾಗೆ ಅಗಮಿಸಿದರು. ಅವರಿಗೆ ಭಾರತೀಯ ಸಮುದಾಯದಿಂದ ಭರ್ಜರಿ ಸ್ವಾಗತ ದೊರಕಿತು.

Massive welcome for Modi in Australi Huge preparations in America too akb
Author
First Published May 23, 2023, 7:02 AM IST

ಸಿಡ್ನಿ: 3 ದೇಶಗಳ ಪ್ರವಾಸದ ಕೊನೆಯ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮೇ.22) ರಾತ್ರಿ ಆಸ್ಪ್ರೇಲಿಯಾಗೆ ಅಗಮಿಸಿದರು. ಅವರಿಗೆ ಭಾರತೀಯ ಸಮುದಾಯದಿಂದ ಭರ್ಜರಿ ಸ್ವಾಗತ ದೊರಕಿತು. ಮೇ 24ರ ವರೆಗೆ ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಮೋದಿ, 24ರಂದು ಆಸ್ಪ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್‌ (Anthony Albanese) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಅದಕ್ಕೂ ಮುನ್ನ ಮಂಗಳವಾರ ಸಿಡ್ನಿಯಲ್ಲಿ ಆಸ್ಪ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಅತ್ಯಂತ ಆತ್ಮೀಯ ಸ್ವಾಗತ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಅವರನ್ನು ಆಸ್ಪ್ರೇಲಿಯಾಕ್ಕೆ ಅಧಿಕೃತವಾಗಿ ಆಹ್ವಾನಿಸಲು ನನಗೆ ಹೆಮ್ಮೆಯಾಗುತ್ತಿದೆ ಭಾರತ ಮತ್ತುಆಸ್ಪ್ರೇಲಿಯಾ (Australia) ಸ್ಥಿರ, ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಫೆಸಿಫಿಕ್‌ (Indo-Pacific commitment) ಬದ್ಧತೆಯನ್ನು ಹಂಚಿಕೊಳ್ಳುತ್ತವೆ. ಈ ಗುರಿಯನ್ನು ಸಾಧಿಸುವಲ್ಲಿ ನಾವು ಪ್ರಮುಖ ಪಾತ್ರವನ್ನು ಹೊಂದಿದ್ದೇವೆ ಎಂದು ಆಲ್ಬನೀಸ್‌ ಹೇಳಿದ್ದಾರೆ.

ಮೋದಿಯಿಂದ ಆಸೀಸ್‌ ಪ್ರಧಾನಿ, ಅಮೆರಿಕಾ ಅಧ್ಯಕ್ಷರಿಗೆ ವಿಚಿತ್ರ ಸಮಸ್ಯೆ

ಇನ್ನುಮೇ 24ರಂದು ಆಲ್ಬನೀಸ್‌ರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಸಿಡ್ನಿಯಲ್ಲಿ (Sydney) ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿವಿಧ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಮೆರಿಕದಲ್ಲೂ ಭರ್ಜರಿ ಸಿದ್ಧತೆ

ವಾಷಿಂಗ್ಟನ್‌: ಮುಂದಿನ ತಿಂಗಳು ಅಮೆರಿಕ ಪ್ರವಾಸಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿರುವ ಭಾರತೀಯರು ಅಮೆರಿಕದ ಪ್ರಮುಖ 20 ನಗರಗಳಲ್ಲಿ ಜೂನ್‌ 18 ರಂದು ‘ಭಾರತೀಯ ಏಕತಾ ದಿವಸ’ ಪಥಸಂಚಲನದ ಮೂಲಕ ಐತಿಹಾಸಿಕವಾಗಿ ಸ್ವಾಗತಿಸಲು ಯೋಜಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಆಹ್ವಾನದ ಮೇರೆಗೆ ಮೋದಿ ಜೂನ್‌ 22 ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಮೋದಿ ಬೈಡೆನ್‌ ದಂಪತಿಗಳು ತಮಗಾಗಿ ಆಯೋಜಿಸಿರುವ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಮೋದಿ ಬರುವಿಕೆಗೆ ಹೆಚ್ಚು ಉತ್ಸುಕರಾಗಿರುವ ಅಲ್ಲಿನ ಭಾರತೀಯ ಸಮುದಾಯವು ಜೂ.18 ರಂದು ವಾಷಿಂಗ್ಟನ್‌ ಡಿಸಿಯಲ್ಲಿ (Washington DC) ಒಗ್ಗೂಡಿ ಅಲ್ಲಿನ ರಾಷ್ಟ್ರೀಯ ಸ್ಮಾರಕದಿಂದ (National Monument) ಲಿಂಕನ್‌ ಸ್ಮಾರಕದವರೆಗೆ ‘ಭಾರತೀಯ ಏಕತಾ ದಿವಸ’ (Bharatiya Ekta Divas) ಎಂಬ ಆಚರಣೆಯೊಂದಿಗೆ ಪಥಸಂಚಲನ ಸಾಗುವ ಮೂಲಕ ಮೋದಿಗೆ ವಿನೂತನ ಸ್ವಾಗತ ಕೋರಲಿದೆ ಎಂದು ಭಾರತೀಯ ಹಾಗೂ ಆಮರಿಕದ ಬಿಜೆಪಿ ವಿಭಾಗದ ಅಧ್ಯಕ್ಷರಾಗಿರುವ ಅಡಪ ಪ್ರಸಾದ್‌ (Adapa Prasad) ತಿಳಿಸಿದ್ದಾರೆ.

ಸುನಕ್‌, ಬ್ರೆಜಿಲ್‌ ಅಧ್ಯಕ್ಷರ ಜತೆ ಮೋದಿ ಯಶಸ್ವಿ ದ್ವಿಪಕ್ಷೀಯ ಸಭೆ

ಹೀಗೆಯೇ ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್ (New York Times Square) , ಸ್ಯಾನ್‌ ಫ್ರಾನ್ಸಿಸ್ಕೊದ (San Francisco) ಗೋಲ್ಡನ್‌ ಬ್ರಿಡ್ಜ್‌, ಚಿಕಾಗೊ (Golden Bridge), ಡಲ್ಲಾಸ್‌, ಲಾಸ್‌ ಎಂಜಲೀಸ್‌, ಕೊಲಂಬಸ್‌, ಬಾಸ್ಟಾನ್‌, ಅಟ್ಲಾಂಟಾ, ಮಿಯಾಮಿ ಸೇರಿದಂತೆ ದೇಶದ 20 ಪ್ರಮುಖ ನಗರಗಳಲ್ಲಿ ಇದೇ ರೀತಿಯ ಪಥಸಂಚಲನ ನಡೆಯಲಿದೆ ಎಂದು ಅಡಪ ತಿಳಿಸಿದ್ದಾರೆ.

 

Follow Us:
Download App:
  • android
  • ios