ಮೋದಿಯಿಂದ ಆಸೀಸ್‌ ಪ್ರಧಾನಿ, ಅಮೆರಿಕಾ ಅಧ್ಯಕ್ಷರಿಗೆ ವಿಚಿತ್ರ ಸಮಸ್ಯೆ

ನೀವು ಭಾರೀ ಫೇಮಸ್‌. ನಿಮ್ಮಿಂದಾಗಿ ನಾವು ಸಾಕಷ್ಟು‘ತೊಂದರೆ’ ಅನುಭವಿಸಬೇಕಾಗಿ ಬಂದಿದೆ’ ಎಂದು ಉಭಯ ದೇಶಗಳ ನಾಯಕರು ಪ್ರಧಾನಿ ಮೋದಿ ಅವರಲ್ಲಿ ಲಘು ಚಟಾಕಿ ಹರಿಸಿದ ಪ್ರಸಂಗಕ್ಕೆ ಜಪಾನ್‌ನಲ್ಲಿ ನಡೆದ ನಾಲ್ಕು ದೇಶಗಳ ಕ್ವಾಡ್‌ ಒಕ್ಕೂಟದ ಸಭೆ ಸಾಕ್ಷಿಯಾಯ್ತು.

From Modi Australia PM an US president Joe Biden has a strange problem People clamor Biden, Antony for Modi Show tickets akb

ಹಿರೋಶಿಮಾ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇದೀಗ ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಅವರಿಗೂ ಬಿಸಿ ಮುಟ್ಟಿಸಿದೆ. ‘ನೀವು ಭಾರೀ ಫೇಮಸ್‌. ನಿಮ್ಮಿಂದಾಗಿ ನಾವು ಸಾಕಷ್ಟು‘ತೊಂದರೆ’ ಅನುಭವಿಸಬೇಕಾಗಿ ಬಂದಿದೆ’ ಎಂದು ಉಭಯ ದೇಶಗಳ ನಾಯಕರು ಪ್ರಧಾನಿ ಮೋದಿ ಅವರಲ್ಲಿ ಲಘು ಚಟಾಕಿ ಹರಿಸಿದ ಪ್ರಸಂಗಕ್ಕೆ ಜಪಾನ್‌ನಲ್ಲಿ ನಡೆದ ನಾಲ್ಕು ದೇಶಗಳ ಕ್ವಾಡ್‌ ಒಕ್ಕೂಟದ ಸಭೆ ಸಾಕ್ಷಿಯಾಯ್ತು.

ಜಪಾನ್‌, ಅಮೆರಿಕ, ಆಸ್ಪ್ರೇಲಿಯಾ ಮತ್ತು ಭಾರತ ಸದಸ್ಯರಾಗಿರುವ ಕ್ವಾಡ್‌ ದೇಶಗಳ (Quad union) ಸಭೆ ಭಾನುವಾರ ಹಿರೋಶಿಮಾದಲ್ಲಿ ನಡೆಯಿತು. ಈ ವೇಳೆ ಮೋದಿ ಅವರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ಪ್ರಜಾಪ್ರಭುತ್ವ ಎಷ್ಟು ಮಹತ್ವ ಹೊಂದಿದೆ ಎಂಬುದನ್ನು ನೀವು ಮತ್ತೊಮ್ಮೆ ಸಾಬೀತು ಪಡಿಸಿದ್ದೀರಿ. ನೀವು ನನಗೆ ಸಾಕಷ್ಟು ತೊಂದರೆ ಕೊಡುತ್ತಿದ್ದೀರಿ. ಮುಂದಿನ ತಿಂಗಳು ನಾವು ನಿಮಗೆ ವಾಷಿಂಗ್ಟನ್‌ನಲ್ಲಿ ಔತಣ ಕೂಟ ಆಯೋಜಿಸಿದ್ದೇವೆ. ಇದರಲ್ಲಿ ಭಾಗಿಯಾಗಲು ದೇಶದ ಎಲ್ಲಾ ಜನರು ಕಾತರರಾಗಿದ್ದಾರೆ. ನಟರಿಂದ ಹಿಡಿದು, ಉದ್ಯಮಿಗಳು, ಬಂಧುಗಳಿಂದ ಹಿಡಿದು ಭಾರೀ ಪ್ರಮಾಣದಲ್ಲಿ ಜನರು ತಮಗೂ ಟಿಕೆಟ್‌ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ನಾನೇನು ತಮಾಷೆ ಮಾಡುತ್ತಿಲ್ಲ, ಬೇಕಿದ್ದರೆ ತನ್ನ ತಂಡವನ್ನು ಕೇಳಿ ನೋಡಿ ಎಂದರು.

ನಿಮ್ಮ ಬಳಿ ಆಟೋಗ್ರಾಫ್‌ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌!

ಈ ವೇಳೆ ಮಧ್ಯ ಪ್ರವೇಶಿಸಿದ ಆಸ್ಪ್ರೇಲಿಯಾ ಪ್ರಧಾನಿ (Australian Prime Minister) ಆಲ್ಬನೀಸ್‌ (Anthony Albanese), ತಾವು ಕೂಡಾ ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದರು. ಸಿಡ್ನಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ 20 ಸಾವಿರ ಜನರಿಗೆ ಅವಕಾಶವಿದೆ. ಆದರೂ ಇನ್ನೂ ಸಾವಿರಾರು ಜನರಿಂದ ಟಿಕೆಟ್‌ಗಾಗಿ ಬೇಡಿಕೆ ವ್ಯಕ್ತವಾಗಿದೆ. ಇದನ್ನು ನಿರ್ವಹಿಸುವುದು ಕಷ್ಟವಾಗಿದೆ’ ಎಂದರು. ಈ ವೇಳೆ ನಾನೂ ನಿಮ್ಮ ಆಟೋಗ್ರಾಫ್‌ ಪಡೆಯಬೇಕಿದೆ ಎಂದು ಮೋದಿ ಅವರಲ್ಲಿ ಬೈಡೆನ್‌ ಚಟಾಕಿ ಹಾರಿಸಿದರು.

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ

Latest Videos
Follow Us:
Download App:
  • android
  • ios