Omicron UK Death Study: ಯುಕೆನಲ್ಲಿ ಒಮಿಕ್ರಾನ್ ಹಾವಳಿ, 75 ಸಾವಿರ ಬಲಿ ಸಾಧ್ಯತೆ!
- ಒಮಿಕ್ರಾನ್ ಬಗ್ಗೆ ಆತಂಕಕಾರಿ ವಿಚಾರ ಬಹಿರಂಗ ಪಡಿಸಿದ ಲಂಡನ್ ಮತ್ತು ದಕ್ಷಿಣ ಆಫ್ರಿಕಾ ಸಂಶೋಧಕರು
- ಮುಂದಿನ ಏಪ್ರಿಲ್‌ಗೆ ಯುಕೆನಲ್ಲಿ 75 ಸಾವಿರದಷ್ಟು ಜನ ಒಮಿಕ್ರಾನ್‌ಗೆ ಬಲಿ
- ಯುಕೆನಲ್ಲಿ ದಿನವೊಂದಕ್ಕೆ 500ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣ ಬೆಳಕಿಗೆ
ಯುಕೆ(ಡಿ.12): ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ (London School of Hygiene and Tropical Medicine)ಮತ್ತು ದಕ್ಷಿಣ ಆಫ್ರಿಕಾದ ಸ್ಟೆಲೆನ್ ಬೋಶ್ ವಿಶ್ವವಿದ್ಯಾಲಯದ (South Africa’s Stellenbosch University) ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಒಮಿಕ್ರಾನ್ (Omicron) ಬಗ್ಗೆ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಮುಂದಿನ ದಿನಗಳಲ್ಲಿ ಯುಕೆನಲ್ಲಿ ರೂಪಾಂತರ ಒಮಿಕ್ರಾನ್ ಹಾವಳಿ ಹೆಚ್ಚುವ ಲಕ್ಷಣ ಇದೆ. ಮಾತ್ರವಲ್ಲ ಮುಂದಿನ ಏಪ್ರಿಲ್ ಒಳಗಾಗಿ 25 ಸಾವಿರದಿಂದ 75 ಸಾವಿರದಷ್ಟು ಜನರು ಇದಕ್ಕೆ ಬಲಿಯಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಯುಕೆನಲ್ಲಿ ದಿನವೊಂದಕ್ಕೆ 500ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣ ಬೆಳಕಿಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಅಧ್ಯಯನ ತಿಳಿಸಿದೆ.
ಸದ್ಯದ ಪರಿಸ್ಥಿತಿ ನೋಡಿದರೆ ಈ ಸೋಂಕಿನಿಂದ ಗಂಭೀರ ಪರಿಣಾಮ ಬೀರಿರುವ ಪ್ರಕರಣ ದಾಖಲಾಗಿಲ್ಲ. ಆದರೂ ಇದರ ಬಗ್ಗೆ ಅಸಡ್ಡೆ ತೋರಿಸುವುದು ಸರಿಯಲ್ಲ. ಆದರೂ ಇದರ ಬಗ್ಗೆ ಆತಂಕ ಮಾತ್ರ ಎಲ್ಲೆಡೆ ವ್ಯಕ್ತವಾಗುತ್ತಿದೆ. ಸದ್ಯ ಯುರೋಪ್ ಭಾಗದ ದೇಶಗಳಲ್ಲಿ ಅತ್ಯಂತ ವೇಗವಾಗಿ ಸೋಂಕು ಹರಿದಾಡುತ್ತಿದೆ.
ವಿಶ್ವಸಂಸ್ಥೆ ಹೇಳುವುದೇನು?: ಲಸಿಕೆಗೂ (Vaccine) ಬಗ್ಗದ ಭಯಾನಕ ಕೊರೋನಾ ವೈರಸ್ಸಿನ ರೂಪಾಂತರಿ ಒಮಿಕ್ರೋನ್ (Omicron) ಪ್ರಭೇದವು ಈ ಹಿಂದಿನ ತಳಿಗಳಿಗಿಂತಲೂ ಅತೀ ವೇಗವಾಗಿ ಹಬ್ಬಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧೋನಾಮ್ ಗೆಬ್ರಿಯೆಸಸ್ ಕೂಡ ಎಚ್ಚರಿಕೆ ನೀಡಿದ್ದಾರೆ.
Section 144 in Mumbai: ಮುಂಬೈನಲ್ಲಿ ಒಮಿಕ್ರಾನ್ ಕೇಸ್ ಹೆಚ್ಚಿದ ಬೆನ್ನಲ್ಲೇ 144 ಸೆಕ್ಷನ್ ಜಾರಿ
‘ವೈರಸ್ ಈಗಾಗಲೇ 57 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ನಿವಾರಣೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಭಾರತದಲ್ಲಿ 2ನೇ ಅಲೆಯ ಸೋಂಕಿಗೆ ಕಾರಣವಾದ ಡೆಲ್ಟಾ ಪ್ರಭೇದಕ್ಕಿಂತಲೂ ಒಮಿಕ್ರೋನ್ ಹೆಚ್ಚು ಅಪಾಯಕಾರಿಯಲ್ಲ. ಆದಾಗ್ಯೂ, ಈಗಾಗಲೇ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗವನ್ನು ಹೆಚ್ಚಿಸಿಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರಮೇಣವಾಗಿ ಆಸ್ಪತ್ರೆಗೆ ದಾಖಲಾಗುವವರ ಮತ್ತು ಸಾವಿಗೀಡಾಗುವವರ ಸಂಖ್ಯೆ ಏರಿಕೆಯಾಗಬಹುದು’ ಎಂದು ಹೇಳಿದ್ದಾರೆ.
Corona Crisis: ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು
ಇನ್ನು ಕೋವಿಡ್ ಸೋಂಕಿನಿಂದ (Covid 19) ರಕ್ಷಣೆ ಪಡೆಯಲು ಬೂಸ್ಟರ್ ಡೋಸ್‌ನ (Booster Dose) ಅಗತ್ಯದ ಬಗ್ಗೆ ವಿಶ್ವದಾದ್ಯಂತ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ರೋಗನಿರೋಧಕ ಶಕ್ತಿ (Immunity) ಕಡಿಮೆ ಇರುವವರು, ವೃದ್ಧರು ಮತ್ತು ನಿಷ್ಕ್ರಿಯಗೊಳಿಸಿದ ವೈರಸ್‌ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಮೂಲಕ ಬೂಸ್ಟರ್ ಡೋಸ್ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.
TMC Pre Poll Promise: ಗೋವಾಗೆ ದೇವರು ಒಳ್ಳೆಯದು ಮಾಡಲಿ! ಟಿಎಂಸಿ ನೇರ ನಗದು ಯೋಜನೆಗೆ
ಈಗಾಗಲೇ ವಿಶ್ವದಲ್ಲಿ ಹಲವಾರು ದೇಶಗಳು ವಯಸ್ಕರು ಮತ್ತು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಬೂಸ್ಟರ್ ಡೋಸ್ ನೀಡಲು ಆರಂಭಿಸಿವೆ. ಈಗ ಒಮಿಕ್ರೋನ್ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಬೂಸ್ಟರ್ ಡೋಸ್ ನೀಡಿಕೆಯನ್ನು ಇನ್ನಷ್ಟುವಿಸ್ತರಣೆ ಮಾಡುವ ಅಗತ್ಯವಿದೆ ಎಂದು ಹೇಳಿದೆ.
ಭಾರತದಲ್ಲಿ ಒಟ್ಟು ಪ್ರಕರಣಗಳು: ಭಾರತದಲ್ಲಿ ಈವರೆಗೆ 38 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆ ಶಿಸ್ತುಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ. ಮಾಸ್ಕ್ ಬಳಕೆ ಮತ್ತು ಸುರಕ್ಷತಾ ಮಾನದಂಡಗಳ ಪಾಲನೆಯು ಕಡಿಮೆ ಆಗುತ್ತಿರುವುದರ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ನವೆಂಬರ್ 24 ರವರೆಗೆ ಕೇವಲ 2 ದೇಶಗಳಲ್ಲಿ ಮಾತ್ರ ಒಮಿಕ್ರಾನ್ ಪ್ರಕರಣಗಳು ವರದಿಯಾಗಿತ್ತು, ಈಗ, 59 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.