Asianet Suvarna News Asianet Suvarna News

'ಮನೆಯಲ್ಲೆ ಕಲಿ-ಕನ್ನಡ ಕಲಿ'  ಸಿಂಗಾಪುರ ಕನ್ನಡ ಸಂಘದ ಅದ್ಭುತ ಕಾರ್ಯಕ್ರಮ

ಕನ್ನಡ ಕಟ್ಟುವ ಹೊಸತನದ ಯತ್ನ/ ಅನಿವಾಸಿ ಕನ್ನಡಿಗರ ಸಂಭ್ರಮ/ ಆನ್ ಲೈನ್ ಕನ್ನಡ ಕಲಿಕೆಯ ತರಗತಿಗಳು/ ಸುಮಾರು 2 ಗಂಟೆಗಳ ಕಾಲ ನಾಡಿನ ದಿಗ್ಗಜರೊಂದಿಗೆ ಸಂವಾದ

maneyalle kali kannada kali class kick started Singapore mah
Author
Bengaluru, First Published May 1, 2021, 12:14 AM IST

ಸಿಂಗಾಪುರ(ಏ. 30):  ಕನ್ನಡ ಸಂಘ (ಸಿಂಗಪುರ) ಆಯೋಜಿಸಿದ 'ಹೊಂಗೆ ಹೂವ ತೊಂಗಲಲ್ಲಿ' ಕಾರ್ಯಕ್ರಮಕ್ಕೆ  ಅಭೂತ ಪೂರ್ವವಾದ ಪ್ರತಿಕ್ರಿಯೆ ದೊರೆತಿದೆ ಕನ್ನಡ ಸಂಘ (ಸಿಂಗಾಪುರ) ದ ಮಹಾದಾಸೆಯ ಚಟುವಟಿಕೆ  "ಮನೆಯಲ್ಲೇ ಕಲಿ - ಕನ್ನಡ ಕಲಿ"ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿರ್ದೇಶಕ ಟಿಎಸ್ ನಾಗಾಭರಣ,  ಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್, ಲೇಖಕ ಡುಂಡಿರಾಜ್ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಯನ್ನು ಮಾಡಲಾಯಿತು . 

ಇದೇ ಸಂದರ್ಭದಲ್ಲಿ ಕನ್ನಡ ಕಲಿಕೆ, ಭಾಷೆಯ ಸ್ಥಿತಿ ಗತಿಗಳ ಬಗ್ಗೆ ನಡೆದ ಅರ್ಥಪೂರ್ಣ ಸಂವಾದದಲ್ಲಿ ಸಿಂಗಾಪುರ ಕನ್ನಡಿಗರು ಭಾಗವಹಿಸಿದ್ದರು. ಸುಮಾರು 2 ಗಂಟೆಗಳ ಕಾಲ ನಾಡಿನ ದಿಗ್ಗಜರೊಂದಿಗೆ  ನಡೆದ ಅರ್ಥಪೂರ್ಣವಾದ  ಚರ್ಚೆ ನಿಜಕ್ಕೂ ಒಂದಷ್ಟು ಹೊಸತನಗಳನ್ನು ನೀಡಿತು.

ಸಿಂಗಾಪುರ ಕನ್ನಡ ಸಂಘದಿಂದ ಯುಗಾದಿ ಸಂಭ್ರಮ.. ಲೈವ್ ನೋಡುವ ಅವಕಾಶ ಇದೆ 

ಮೇ 2 ರಿಂದ, ಪ್ರತೀ ಭಾನುವಾರ ಬೆಳಿಗ್ಗೆ, ಕನ್ನಡ ಕಲಿಯ ತರಗತಿಗಳು ಆರಂಭಗೊಳ್ಳಲಿವೆ.  ವಿದೇಶಗಳಲ್ಲಿ ಸಂಘ-ಸಂಸ್ಥೆಗಳು ಕನ್ನಡವನ್ನು ಮೊಳಗಿಸುತ್ತಲೇ ಬಂದಿವೆ. ಅನಿವಾಸಿ ಕನ್ನಡಿಗರ ನಾವಿಕ, ಅಕ್ಕ ಸಮ್ಮೇಳನಗಳು  ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಿವೆ

Follow Us:
Download App:
  • android
  • ios