Asianet Suvarna News Asianet Suvarna News

ಸಿಂಗಾಪುರ ಕನ್ನಡ ಸಂಘದಿಂದ ಯುಗಾದಿ ಸಂಭ್ರಮ.. ಲೈವ್ ನೋಡುವ ಅವಕಾಶ ಇದೆ

ಸಿಂಗಾಪುರದಲ್ಲಿ ಯುಗಾದಿ ಉತ್ಸವ/ ಮೇ  1 ರಂದು 'ಹೊಂಗೆ ಹೂವ ತೊಂಗಲಲ್ಲಿ' / ಕಲಿ-ಕನ್ನಡ ಕಲಿ online ತರಗತಿಗಳಿಗೆ ಚಾಲನೆ/ ಅಜಯ್ ವಾರಿಯರ್ ಮತ್ತು ಶಶಿಕಲಾ ಅವರಿಂದ ಸಂಗೀತ ರಸಸಂಜೆ.

Ugadi celebration in kannada Sangha Singapore on May 01 mah
Author
Bengaluru, First Published Apr 20, 2021, 3:57 PM IST

ಸಿಂಗಾಪುರ(ಏ. 20): ಕನ್ನಡ ಸಂಘ ಸಿಂಗಾಪುರ 25  ವರ್ಷಗಳ ಯುಗಾದಿ ಸಂಭ್ರಮವನ್ನು ಹಮ್ಮಿಕೊಂಡಿದೆ. ಮೇ 1 ರಂದು ಈ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಕೊರೋವಾ ವೈರಸ್ ಕಾರಣದಿಂದ ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮವನ್ನು ನೋಡಿ ಸಂಭ್ರಮಿಸಬಹುದು.

'ಹೊಂಗೆ ಹೂವ ತೊಂಗಲಲ್ಲಿ' ಎಂಬ ಈ ವಿಶೇಷ ಕಾರ್ಯಕ್ರಮವು ಮೇ  1  ರಂದು ಸಂಜೆ 6  ಗಂಟೆಗೆ ನಡೆಯಲಿದೆ. ಕಲಿ-ಕನ್ನಡ ಕಲಿ ಅನ್‌ಲೈನ್ ತರಗತಿಗಳಿಗೆ ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗರಭರಣ ಅವರು ಕನ್ನಡ ಕವಿಗಳ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ. 

ಯುಗಾದಿ ರಾಶಿ ಫಲ, ಮದುವೆ-ಮನೆ, ಸಮಸ್ಯೆ-ಪರಿಹಾರ? 

ಕನ್ನಡ ಚಿತ್ರ ನಿರ್ದೇಶಕರೂ ಆದ ಟಿ.ಎಸ್ ನಾಗಾಭರಣ, ಕವಿ ಬಿ.ಆರ್. ಲಕ್ಷ್ಮಣರಾವ್, ದುಂಡಿರಾಜ್ ಈ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೃಂಗದ ಸಂಗೀತ ಕೇಳಿಯಲ್ಲಿ ಅಜಯ್ ವಾರಿಯರ್ ಮತ್ತು ಶಶಿಕಲಾ  ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದೀಪಕ್, ಪ್ರಕಾಶ್ ಆಂಟೋನಿ ಪಾಲ್ಗೊಳ್ಳಲಿದ್ದಾರೆ. ಯುಟ್ಯೂಬ್ ಮೂಲಕ ನೇರ ಪ್ರಸಾರವನ್ನು ನೋಡಲು ಅವಕಾಶ ಇದೆ. 

ವಿದೇಶಗಳಲ್ಲಿ ಸಂಘ-ಸಂಸ್ಥೆಗಳು ಕನ್ನಡವನ್ನು ಮೊಳಗಿಸುತ್ತಲೇ ಬಂದಿವೆ. ಅನಿವಾಸಿ ಕನ್ನಡಿಗರ ನಾವಿಕ, ಅಕ್ಕ ಸಮ್ಮೇಳನಗಳು  ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಿವೆ. 

Ugadi celebration in kannada Sangha Singapore on May 01 mah

Follow Us:
Download App:
  • android
  • ios