ಅಮೆರಿಕ(ಜೂ.28): ಕೆರೆಯಲ್ಲಿ ತನ್ನ ಬೋಟ್ ಮುಳುಗಡೆಯಾಗುವುದನ್ನು ತಡೆಯಲು ಮಾಡಿದ ಎಡವಟ್ಟು ಐಡಿಯಾಗಳಿಂದ ಬೋಟ್ ಮಾತ್ರವಲ್ಲ ತನ್ನ ಎರಡು ವಾಹನ ಕೂಡ ನೀರುಪಾಲದ ಘಟನೆ ನಡೆದಿದೆ. ಅಮೆರಿಕಾಜ ಇಂಡಿಯಾನದಲ್ಲಿರುವ ಕೆಡಾರ್ ಲೇಕ್‌ನಲ್ಲಿ ಜೆಫ್ ಬೈನಿಚಿ ಅನ್ನೋ ವ್ಯಕ್ತಿಯ ಬೋಟ್ ಮುಳುಗಡೆಯಾಗಲು ಆರಂಭಿಸಿತು. ಮಾರ್ಚ್‌ನಲ್ಲಿ ಬರೋಬ್ಬರಿ 2.28 ಕೋಟಿ ರೂಪಾಯಿ ನೀಡಿ ಖರೀದಿಸಿದ ಈ ಬೋಟ್ ಕೆರೆಯಲ್ಲಿ ಮುಳುಗಲು ಆರಂಭಿಸಿತ್ತು.

ಸೂರ್ಯನ ಹತ್ತು ವರ್ಷದ ವಿಡಿಯೋ ಒಂದೇ ತಾಸಲ್ಲಿ ನೋಡಿ!...

ಈ ಕುರಿತು ಮಾಹಿತಿ ತಿಳಿದ ಮಾಲೀಕ ಜೆಫ್ ಬೈನಿಚ್, ಗಾರ್ಡ್ ಸಹಾಯ ಪಡೆಯಬೇಕಿತ್ತು. ಕೆಡಾರ್ ಕೆರೆಯ ಸೇಫ್ ಗಾರ್ಡ್ಸ್‌ಗೆ ಮಾಹಿತಿ ನೀಡಿದರೆ ಸುಲಭವಾಗಿ ಬೋಟ್ ಮೇಲೆತ್ತಬಹುದಿತ್ತು. ಆದರೆ ಜೆಫ್ ಹೀಗೆ ಮಾಡಲಿಲ್ಲ. ಬೋಟ್ ರಕ್ಷಿಸಲು ತನ್ನು ಜೀಪ್ ರ್ಯಾಂಗ್ಲರ್ ವಾಹನವನ್ನು ಕೆರೆಗೆ ಇಳಿಸಿ, ಈ ಮೂಲಕ ಬೋಟ್ ಮೇಲಕ್ಕೆತ್ತುವ ಐಡಿಯಾ ಮಾಡಿದ.

ವಿಶ್ವಸಂಸ್ಥೆ ಕಾರಲ್ಲಿ ಹಾಡಹಗಲೇ ಸೆಕ್ಸ್..! ಅಧಿಕಾರಿ ಕಾಮದಾಟ ವೈರಲ್.

ಜೀಪ್‌ಗೆ ಹಗ್ಗ ಕಟ್ಟಿ ಕೆರೆಗೆ ಇಳಿಸಿದ ಮಾಲೀಕನಿಗೆ ಮತ್ತೊಂದು ಶಾಕ್ ಕಾದಿತ್ತು. ಕೆರೆಯ ಆಳ ಅರಿಯದ ಜೆಫ್‌ಗೆ ಜೀಪ್ ಕೈಕೊಟ್ಟಿತು. ಕಾರಣ ಜೀಪ್ ಕೂಡ ನೀರಿನಲ್ಲಿ ತೇಲಲು ಆರಂಭಿಸಿತು. ಇತ್ತ ಬೋಟ್ ಬಾಗಶಃ ಮುಳುಗಡೆಯಾಗಿತ್ತು. ತಕ್ಷಣವೇ ಮತ್ತೊಂದು ಐಡಿಯಾ ಮಾಡಿದ್ದಾನೆ. ಫೋರ್ಡ್ ಫಿಕ್ ಅಪ್ ಎಂತಹ ಲೋಡ್ ಇದ್ದರೂ ಸಲೀಸಲಾಗಿ ಸಾಗಬಲ್ಲದು. ಫೋರ್ಡ್ ಪಿಕ್ ಅಪ್ ಶಕ್ತಿ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಹೀಗಾಗಿ ಬೋಟ್ ರಕ್ಷಿಸಲು ತನ್ನ ಫೋರ್ಡ್ ಪಿಕ್ಅಪ್‌ಗೆ ಮಾತ್ರ ಸಾಧ್ಯ ಎಂದು ಪಿಕ್‌ಅಪ್ ಕೂಡ ಕೆರೆಗೆ ಇಳಿಸಲಾಯಿತು..

 

ನೀರಿಗಿಳಿಯುತ್ತಿದ್ದ ಫೋರ್ಡ್ ಪಿಕ್ಅಪ್ ಕೂಡ ನೀರಿನಲ್ಲಿ ತೇಲಲು ಆರಂಭಿಸಿತು. ಪಿಕ್ ಒಳಭಾಗದಲ್ಲಿ ನೀರು ತುಂಬಿಕೊಳ್ಳುತ್ತಿದ್ದಂತೆ ಮುಳುಗಲು ಆರಂಭಿಸಿತು. ಈತನ ಬತ್ತಳಿಕೆಯ ಐಡಿಯಾಗಳೆಲ್ಲಾ ಮುಗಿದಾಗ ಅತ್ತ ಬೋಟ್ ಮುಳುಗಿತ್ತು. ಇತ್ತ ಎರಡು ವಾಹನಗಳು ನೀರಿನಲ್ಲಿ ತೇಲುತಿತ್ತು. ವಾಹನದ ಎಂಜಿನ್ ಒಳಗೆ ನೀರು ಸೇರಿಕೊಂಡು ಎರಡೂ ವಾಹನಗಳು ಕೆಟ್ಟು ನಿಂತಿತು. 

ಜೆಫ್ ಬೈನಿಚ್ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೃಷ್ಟ ಕೈಕೊಟ್ಟಾಗ ತಲೆ ಕೂಡ ಕೈಕೊಟ್ಟಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಗಳನ್ನು ಹರಿಬಿಡುತ್ತಿದ್ದಾರೆ.