Asianet Suvarna News Asianet Suvarna News

Shinzo Abe State Funeral: ಜಪಾನ್‌ ಸರ್ಕಾರದಿಂದ 910 ಕೋಟಿ ಖರ್ಚು, ಪ್ರತಿಭಟನೆಗಾಗಿ ಬೀದಿಗಿಳಿದ ಜನ!

ಭಾರತದಲ್ಲಿ ಸಣ್ಣ ರಾಜಕೀಯ ನಾಯಕ ಸತ್ತಾಗ ಅದಕ್ಕೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದನ್ನು ನೋಡುತ್ತೇವೆ. ಆದರೆ, 20ನೇ ಶತಮಾನದಲ್ಲಿ ಜಪಾನ್‌ ದೇಶ ಕಂಡ ಶ್ರೇಷ್ಠ ನಾಯಕ ಶಿಂಜೋ ಅಬೆಯ ಅಂತ್ಯಸಂಸ್ಕಾರಕ್ಕೆ ಜಪಾನ್‌ ಸರ್ಕಾರ ಮಾಡುತ್ತಿರುವ ಖರ್ಚಿಗೆ ಸ್ವತಃ ಜಪಾನ್‌ ಜನತೆಯೇ ತಿರುಗಿಬಿದ್ದಿದೆ. ಅಂತ್ಯಸಂಸ್ಕಾರಕ್ಕೆ ಅಷ್ಟೆಲ್ಲಾ ಖರ್ಚು ಮಾಡುವ ಅಗತ್ಯವಿಲ್ಲ ಎನ್ನುವ ಪ್ರತಿಭಟನೆ ತೀವ್ರವಾಗಿದ್ದು, ಹಿರಿಯ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾರೆ.

Man Sets Himself On Fire after Protesting Japan Shinzo Abe State Funeral san
Author
First Published Sep 21, 2022, 1:52 PM IST

ಟೋಕಿಯೋ (ಸೆ. 21): ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿದೆ. ಅದಕ್ಕೆ ಕಾರಣ ಸೆ. 27 ರಂದು ಸರ್ಕಾರಿ ಗೌರವದೊಂದಿಗೆ ನಡೆಯಲಿರುವ ದೇಶದ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಸಂಸ್ಕಾರ. ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆ ಟೋಕಿಯೊದಲ್ಲಿ ನಡೆಯಲಿದೆ. ಆದರೆ, ಸರ್ಕಾರಿ ಗೌರವದ ವಿವಾದ ಟೋಕಿಯೋದಲ್ಲಿ ತಲ್ಲಣ ಸೃಷ್ಟಿಸಿದೆ. ರಾಜ್ಯದ ಶೋಕಾಚರಣೆಯನ್ನು ಆಚರಿಸಲು ಸಾರ್ವಜನಿಕರೂ ನಿರಾಕರಿಸಿದ್ದಾರೆ. ಸರ್ಕಾರಿ ಅಂತ್ಯಕ್ರಿಯೆ ವಿರೋಧಿಸಿ ಪ್ರಧಾನಿ ಕಚೇರಿ ಬಳಿ ವೃದ್ಧರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಯತ್ನ ನಡೆಸಿದೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ವ್ಯಕ್ತಿಯ ವಯಸ್ಸು ಸುಮಾರು 70 ವರ್ಷ ಆಗಿರಬಹುದು ಎಂದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು,  ಚಿಕಿತ್ಸೆ ಮುಂದುವರಿದಿದೆ. ಆತ ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಲ್ಲಿ ಒಂದು ಪತ್ರ ಪತ್ತೆಯಾಗಿದ್ದು, ಅದರಲ್ಲಿ ಆತ ಸರ್ಕಾರಿ ಗೌರವದೊಂದಿಗೆ ನಡೆಯುವ ಅಂತ್ಯಕ್ರಿಯೆಗೆ ತಮ್ಮ ವಿರೋಧವಿದೆ ಎಂದು ಬರೆದಿದ್ದಾರೆ. ಇನ್ನು ಖಾಸಗಿ ಸಂಸ್ಥೆಯೊಂದು ಈ ಕುರಿತಾಗಿ ಸಮೀಕ್ಷೆಯನ್ನೂ ಮಾಡಿದ್ದು, ಇದರಲ್ಲಿ ಶೇ.56ರಷ್ಟು ವ್ಯಕ್ತಿಗಳು ಶಿಂಜೋ ಅಬೆ ಸರ್ಕಾರಿ ಅಂತ್ಯಸಂಸ್ಕಾರಕ್ಕೆ ಸರ್ಕಾರ ಅಪಾರ ವೆಚ್ಚ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ.


ಸೆಪ್ಟೆಂಬರ್‌ನಲ್ಲಿ ನಡೆಸಿದ ಶಿಂಬುನ್ ಸಮೀಕ್ಷೆಯಲ್ಲಿ 56% ಜನರು, ಸರ್ಕಾರಿ ವೆಚ್ಚದಲ್ಲಿ ಶವಸಂಸ್ಕಾರ (State Funeral ) ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಅದರ ವಿರುದ್ಧವಾಗಿದ್ದೇವೆ. ಅಬೆ ಅವರ ಅಂತ್ಯಕ್ರಿಯೆಗೆ ಸುಮಾರು 910 ಕೋಟಿ ರೂಪಾಯಿ ವೆಚ್ಚವಾಗಲಿದೆ. ಟೋಕಿಯೊ ಕೋರ್ಟ್‌ನಲ್ಲಿ ರಾಜ್ಯ ಗೌರವವನ್ನು ನಿಷೇಧಿಸುವಂತೆ ಒತ್ತಾಯಿಸಿ ಅರ್ಜಿ ಕೂಡ ಬಂದಿದೆ. ಇದು ಸಾರ್ವಜನಿಕರ ಹಣ ಪೋಲು ಎಂದು ಬಣ್ಣಿಸಿದ್ದಾರೆ.

ಇದು ಜಪಾನ್‌ನ ಸಂಪ್ರದಾಯವಲ್ಲ: ಎಲ್ಲಾ ಅಂತ್ಯಕ್ರಿಯೆಯ ಸಮಾರಂಭಗಳು ಖಾಸಗಿಯಾಗಿ ನಡೆಯಬೇಕು. ಇದೇ ಕಾರಣಕ್ಕೆ ಅಬೆ (Shinzo Abe) ಪ್ರಕರಣದಲ್ಲೂ ವಿರೋಧ ವ್ಯಕ್ತವಾಗಿದೆ. ವಾಸ್ತವವಾಗಿ, ಮಾಜಿ ಪ್ರಧಾನಿ ಶಿಗೆರು ಯೋಶಿದಾ ಅವರ ಅಂತ್ಯಕ್ರಿಯೆಯನ್ನು 1967 ರಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಇಲ್ಲಿ, ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ (Fumio Kishida) ಅವರು ಸೆಪ್ಟೆಂಬರ್ 8 ರಂದು ಸಂಸತ್ತಿನ ಚರ್ಚೆಯಲ್ಲಿ ಶಿಂಜೋ ಅಬೆ ಅಂತ್ಯ ಸಂಸ್ಕಾರಕ್ಕೆ 910 ಕೋಟಿ ರೂಪಾಯಿಯನ್ನು ಯಾವ ಕಾರಣಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎನ್ನುವುದನ್ನು ವಿವರಿಸಿದರು. ಸಾಮಾನ್ಯವಾಗಿ, ಜಪಾನ್‌ನಲ್ಲಿ (Japan) ರಾಜಮನೆತನದ ಮತ್ತು ಪ್ರಧಾನ ಮಂತ್ರಿಗಳ ಅಂತ್ಯಕ್ರಿಯೆಗಳನ್ನು ಸರ್ಕಾರಿ ಗೌರವಗಳೊಂದಿಗೆ ಅಥವಾ ಸರ್ಕಾರಿ ವೆಚ್ಚದಲ್ಲಿ ನಡೆಸಲಾಗುವುದಿಲ್ಲ. ಇದು ಸಂಪ್ರದಾಯವಾಗಿದೆ.

ಜಪಾನ್ ಮಿಲಿಟರಿಯ ಮೇಲಿದ್ದ ಸಾಂವಿಧಾನಿಕ ನಿರ್ಬಂಧ ತೆರವು: ಶಿಂಜೋ ಅಬೆಗೆ ಸೂಕ್ತ ಶ್ರದ್ಧಾಂಜಲಿ!

ಈ ಮೊದಲು ಈ ವೆಚ್ಚವನ್ನು ಸುಮಾರು 95 ಕೋಟಿ ರೂ ಎಂದು ಅಂದಾಜಿಸಲಾಗಿತ್ತು, ಇದನ್ನು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಎಫ್) ಭರಿಸಬೇಕಿತ್ತು. 2011ರಲ್ಲಿ ಜಪಾನ್‌ಗೆ ಸುನಾಮಿ ಅಪ್ಪಳಿಸಿತ್ತು. ಈ ವೇಳೆ ಶಿಂಜೋ ಅಬೆ ಇಡೀ ದೇಶದ ಆರ್ಥಿಕತೆಗೆ ಒಂಚೂರು ಹಾನಿಯಾಗದಂತೆ ಕಾಪಾಡಿದ್ದರು. ಈ ಸಲುವಾಗಿ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ವಿಧಿ ವಿಧಾನದೊಂದಿಗೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ಜಗತ್ತನ್ನೇ ಬೆಚ್ಚಿ ಬೀಳಿಸಿದ 10 ಮಹಾ ನಾಯಕರ ಹತ್ಯೆಗಳು!

ಜುಲೈ 8 ರಂದು ಅಬೆ ಹತ್ಯೆಯಾದ ನಂತರ ಕುಟುಂಬವು ಜುಲೈ 15 ರಂದು ಅಂತ್ಯಕ್ರಿಯೆಗಳನ್ನು ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರಿ ಅಂತ್ಯಕ್ರಿಯೆಯ ಕಾರಣ ಇದು ವಿಳಂಬವಾಗಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ 190 ದೇಶಗಳ 6,400 ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜುಲೈ 8 ರಂದು ನಾರಾ ನಗರದಲ್ಲಿ ಶಿಂಜೋ ಅಬೆ ಅವರನ್ನು ಹತ್ಯೆ ಮಾಡಲಾಗಿತ್ತು. ಅಬೆ ಅವರ ಅಂತ್ಯಕ್ರಿಯೆ ಜುಲೈ 15 ರಂದು ಕುಟುಂಬದ ಪರವಾಗಿ ನಡೆದಿತ್ತು. ಜಪಾನ್ ಸರ್ಕಾರವು ಈಗ ಅಬೆಗೆ ರಾಜ್ಯ ಗೌರವಗಳೊಂದಿಗೆ ಅಂತಿಮ ವಿದಾಯವನ್ನು ನೀಡಲಿದೆ. ಸಾಂಕೇತಿಕ ವಿದಾಯಕ್ಕೆ ಕಾರಣವೆಂದರೆ ರಾಜ್ಯದ ಮುಖ್ಯಸ್ಥರು ಖಾಸಗಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿ ಮತ್ತು ಅಮೆರಿಕದ ಮಾಜಿ ಪ್ರಧಾನಿ ಬರಾಕ್ ಒಬಾಮಾ ಸೇರಿದಂತೆ ಹಲವು ದೊಡ್ಡ ವ್ಯಕ್ತಿಗಳು ಮತ್ತು ರಾಷ್ಟ್ರಗಳ ಮುಖ್ಯಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow Us:
Download App:
  • android
  • ios