Asianet Suvarna News Asianet Suvarna News

ಸೆಕ್ಸ್‌ಗಾಗಿ 286 ಯುವತಿಯರಿಗೆ ಬ್ಲಾಕ್‌ಮೇಲ್ ಮಾಡಿದ್ದ ಯುಟ್ಯೂಬರ್‌ಗೆ ಪ್ರಕಟವಾಯ್ತು ಶಿಕ್ಷೆ!

ಸೋಶಿಯಲ್  ಮೀಡಿಯಾದಲ್ಲಿ ತನ್ನ  15 ವರ್ಷದ ಬಾಲಕ ಎಂದು ಪರಿಚಯ ಮಾಡಿಕೊಂಡು ವಿದೇಶಿ  ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ನಂತರ ಸಲುಗೆ  ಬೆಳೆಸಿಕೊಂಡು ಲೈಂಗಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು.

Man posing as teen YouTube star jailed for global sextortion and blackmail 286 girls
Author
First Published Aug 29, 2024, 1:10 PM IST | Last Updated Aug 29, 2024, 1:10 PM IST

ಸಿಡ್ನಿ: ಆಸ್ಟ್ರೇಲಿಯಾದ ನ್ಯಾಯಾಲಯವೊಂದು ಮೊಹ್ಮದ್ ಜೈನ್ ಉಲ್ ಅಬಿದಿನ್ ರಶೀದ್ ಎಂಬಾತನಿಗ 17 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ತಾನೋರ್ವ ಫೇಮಸ್ ಯುಟ್ಯೂಬರ್ ಎಂದು ಹೇಳಿಕೊಳ್ಳುತ್ತಿದ್ದ ಅಬಿದಿನ್ ರಶೀದ್, 286ಕ್ಕೂ ಅಧಿಕ ಯುವತಿಯರಿಗೆ ಸೆಕ್ಸ್‌ಗಾಗಿ ಬ್ಲಾಕ್‌ಮೇಲ್ ಮಾಡಿದ್ದನು. ಈ ಪ್ರಕರಣವನ್ನು ಇದುವರೆಗಿನ ಅತಿದೊಡ್ಡ sextortion ಕೇಸ್ ಎಂದು ವ್ಯಾಖ್ಯಾನಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಗುರುತನ್ನು ಮರೆಮಾಡಿದ್ದ ರಶೀದ್, ತಾನು ಅಮೆರಿಕ ಮೂಲದ 15 ವರ್ಷದ ಇಂಟರ್‌ನೆಟ್ ಸ್ಟಾರ್ ಎಂದು ಹೇಳಿಕೊಳ್ಳುತ್ತಿದ್ದನು. 

ಇದೇ ಹೆಸರಿನ ಮೂಲಕ ಸೋಶಿಯಲ್ ಮೀಡಿಯಾ ಮೂಲಕ ಹಲವು ಅಮೆರಿಕಾ,  ಇಂಗ್ಲೆಂಡ್ ಮತ್ತು ಫ್ರಾನ್ಸ್ ಸೇರಿದಂತ ಹಲವು ದೇಶದ ಯುವತಿಯರ ಜೊತೆ ಸಂಪರ್ಕ ಹೊಂದಿದ್ದನು. ರಶೀದ್ ಯುವತಿಯರಿಗೆ ಹತ್ತಿರವಾಗುತ್ತಿದ್ದಂತೆ ಲೈಂಗಿಕ ವಿಷಯಗಳ ಕುರಿತು ಚರ್ಚಿಸಲು ಪ್ರೇರೆಪಿಸುತ್ತಿದ್ದನು. ನಂತರ ಯುವತಿಯರ ಜೊತೆಗೆ ಮಾತನಾಡಿದ ಆಡಿಯೋ ಮತ್ತು ವಿಡಿಯೋ ಸಂಗ್ರಹಿಸಿ ಅವರನ್ನು ಬ್ಲಾಕ್‌ಮೇಲ್ ಮಾಡಲು ಆರಂಭಿಸುತ್ತಿದ್ದನು. 

ತಾನು ಹೇಳಿದಂತೆ ಕೇಳದಿದ್ದರೆ ಖಾಸಗಿ ಮಾತುಗಳ ಆಡಿಯೋ ಮತ್ತು  ನನ್ನೊಂದಿಗೆ ಹಂಚಿಕೊಂಡಿರುವ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ನಿಮ್ಮ ಕುಟುಂಬ ಹಾಗೂ ಗೆಳೆಯರಿಗೆ ಕಳುಹಿಸೋದಾಗಿ ಬೆದರಿಕೆ ಹಾಕುತ್ತಿದ್ದನು. ಈ ಸಮಯದಲ್ಲಿ ಅವರ ಅಸಹಾಯಕತೆಯನ್ನು ದುರಪಯೋಗಪಡಿಸಿಕೊಂಡಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದನು. ಈ ಕೃತ್ಯಕ್ಕೆ  ಕುಟುಂಬದ ಸಾಕುಪ್ರಾಣಿಗಳು ಮತ್ತು ಮನೆಯಲ್ಲಿರವ ಇತರ ಮಕ್ಕಳನ್ನು ಸಹ ಬಳಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದನು.

ಇನ್ನೊಂದು ಆಘಾತಕಾರಿ ವಿಷಯವೆಂದ್ರೆ  ತನ್ನ ನೀಚ ಕೃತ್ಯವನ್ನು ಲೈವ್‌ ಸ್ಟ್ರೀಮಿಂಗ್ ಮಾಡುತ್ತಿದ್ದನು. ಒಂದು ಪ್ರಕರಣದಲ್ಲಿ ತನ್ನ ಈ ಕೃತ್ಯದ ನೀಚಕೃತ್ಯದ ಲೈವ್‌ ಸ್ಟ್ರೀಮಿಂಗ್‌ನಲ್ಲಿ 90 ಜನರನ್ನು ಸೇರ್ಪಡೆ ಮಾಡಿಕೊಂಡಿದ್ದನು. ಅಪರಾಧಿ ರಶೀದ್ ಮಹಿಳೆಯರ ವಿರುದ್ಧ ದ್ವೇಷ ಹರಡುವ 'ಇನ್‌ಸೇಲ್' ಎಂಬ ಸೋಶಿಯಲ್ ಮೀಡಿಯಾದ ಸದಸ್ಯನಾಗಿದ್ದನು ಎಂದು ವರದಿಯಾಗಿದೆ. 

ನನ್ನದು  ಅತ್ಯಂತ ಚಿಕ್ಕ ಪ್ರೈವೇಟ್ ಪಾರ್ಟ್: ಗಿನ್ನಿಸ್ ದಾಖಲೆಗೆ ಸೇರಿಸಿಕೊಳ್ಳಿ ಎಂದ ವ್ಯಕ್ತಿ

ಇದುವರೆಗಿನ ಆಸ್ಟ್ರೇಲಿಯಾ ಅತಿದೊಡ್ಡ ಮತ್ತು ಭಯಾನಕ ಆನ್‌ಲೈನ್ ಕಿರುಕುಳದ ಪ್ರಕರಣವಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಡೇವಿಡ್ ಮ್ಯಾಕ್‌ಲಿನ್ ಹೇಳಿದ್ದಾರೆ. ಲೈಂಗಿಕ ಪ್ರಕರಣದಲ್ಲಿ ಬಂಧನದಲ್ಲಿರುವ ಅಪರಾಧಿಗಳಿಗೆ ನೀಡಲಾಗುವ ಲೈಂಗಿಕ ಸಮಾಲೋಚನೆಯಲ್ಲಿ ಭಾಗಿಯಾಗಿದ್ದಾನೆ. ಆದರೂ ಆತ ಮತ್ತೆ ಅಪರಾಧ ಕೃತ್ಯ ಎಸಗಲ್ಲ ಎಂದು ಹೇಳಲು ಅಸಾಧ್ಯ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ಪ್ರಕಟಿಸಿದೆ. 

ನ್ಯಾಯಾಲಯ ಅಪರಾಧಿ ರಶೀದ್‌ಗೆ 17 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಅಪರಾಧಿಗೆ ಪೆರೋಲ್‌ಗಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕೂ ಮೊದಲು 14 ವರ್ಷದ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಶೀದ್ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನು. ಸೋಶಿಯಲ್ ಮೀಡಿಯಾ ಮತ್ತು ಇಂಟರ್‌ನೆಟ್ ದುರುಪಯೋಗಪಡಿಸಿಕೊಂಡು ಹೇಗೆ ಮಹಿಳೆಯರನ್ನು ಮೋಸಗೊಳಿಸಲಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹಾಗಾಗಿ ಪೋಷಕರು ಸೇರಿದಂತೆ ಎಲ್ಲರೂ ಎಚ್ಚರವಾಗಿರೋದು ಅತ್ಯವಶ್ಯಕವಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಡೇವಿಡ್ ಮ್ಯಾಕ್‌ಲಿನ್ ಎಂದು ಹೇಳಿದ್ದಾರೆ. 

ಮಗಳನ್ನ ಮದ್ವೆಯಾಗಲು ಹೆಂಡತಿ ಮದ್ಯದಲ್ಲಿ ಸ್ಲೋ ಪಾಯ್ಸನ್ ಹಾಕ್ತಿದ್ದ ಗಂಡ!

Latest Videos
Follow Us:
Download App:
  • android
  • ios