ಊರು ಹೋಗು, ಕಾಡು ಬಾ ಅಂತಿರೋ ವಯಸ್ಸಿನ ಮುದುಕನಿಗೆ ಮಲಮಗಳನ್ನು ಮದುವೆಯಾಗಿ ಹೊಸ ಜೀವನ ಕಟ್ಟಿಕೊಳ್ಳುವ ಆಸೆಯಾಗಿತ್ತು. ಹಾಗಾಗಿ ಅಡ್ಡಿಯಾಗಿದ್ದ ಪತ್ನಿಯ ಮದ್ಯದಲ್ಲಿ 12 ಬಾರಿ ಮಾದಕ ಪದಾರ್ಥ, ವಿಷ ಸೇರಿಸಿದ್ದನು.
ವಾಷಿಂಗಟನ್ ಡಿಸಿ: ಅಮೆರಿಕದ ಇಂಡಿಯಾನಾ ರಾಜ್ಯದ ಮುದುಕ ಮಲಮಗಳನ್ನು ಮದುವೆಯಾಗಲು ಹೆಂಡತಿಯ ಮದ್ಯದಲ್ಲಿ 12 ಬಾರಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಪತ್ನಿ ಕುಡಿಯುತ್ತಿದ್ದ ಮದ್ಯದಲ್ಲಿ ಕೊಕೆನ್, ಎಂಡಿಎಂಎ ಮಾದಕ ಪದಾರ್ಥದ ಜೊತೆ ವಿಷ ಸೇರಿಸಿ ಕೊಟ್ಟಿದ್ದಾನೆ. ವರದಿಗಳ ಪ್ರಕಾರ, ಮಲಮಗಳನ್ನು ಮದುವೆಯಾಗಿ ಬೇರೊಂದು ಪ್ರದೇಶಕ್ಕೆ ತೆರಳಿ ಅಲ್ಲಿ ವಾಸವಾಗಲು ಈ ವ್ಯಕ್ತಿ ಪ್ಲಾನ್ ಮಾಡಿಕೊಂಡಿದ್ದನು. ಆದರೆ ಇದಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದನು. ಪತ್ನಿಯನ್ನು ಕೊಂದು ಮಗಳ ಜೊತೆ ಸಂಸಾರ ಮಾಡಲು ಮುಂದಾಗಿದ್ದ ಆರೋಪಿ ಹೆಸರು 71 ವರ್ಷದ ಅಲ್ಫ್ರೆಡ್ ಡಬ್ಲೂ ರೂಫ್. ಗೋರಿಗೆ ಹೋಗುವ ಸಮಯದಲ್ಲಿ ಹೊಸ ಜೀವನದ ಕನಸು ಕಂಡಿದ್ದನು.
ಆರೋಪಿ ಅಲ್ಫ್ರೆಡ್ ರೂಫ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. 2021ರಲ್ಲಿ ಪತ್ನಿಯನ್ನು ಕೊಲ್ಲಲು ಆಕೆಯ ಮದ್ಯದಲ್ಲಿ 12 ಬಾರಿ ವಿಷ ಹಾಗೂ ಮಾದಕ ಪದಾರ್ಥ ಬೆರೆಸಿರುವ ಸತ್ಯ ಬಾಯಿಬಿಟ್ಟಿದ್ದಾನೆ. ಅಲ್ಫ್ರೆಡ್ ರೂಫ್ ಸೋಮವಾರ ಅಮೆರಿಕದ ವೆನ್ ಕೌಂಟಿ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಫ್ರೆಡ್ ರೂಫ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಪತ್ನಿಯನ್ನು ಕೊಲ್ಲಲು ಮಗಳು ಸಹ ಸಹಾಯ ಮಾಡಿದ್ದಳು. ಮದ್ಯದಲ್ಲಿ ಮಿಕ್ಸ್ ಮಾಡಲು ಮಗಳೇ ಡ್ರಗ್ಸ್ ತಂದುಕೊಟ್ಟಿದ್ದಳು ಎಂದು ಹೇಳಿದ್ದಾನೆ. ತಾಯಿ ಸತ್ತರೇ ಅಲ್ಫ್ರೆಡ್ ರೂಫ್ ಜೊತೆ ಮದುವೆ ಆಗಬಹುದು ಹಾಗೂ ಅಮ್ಮನ ವಿಮೆ ಹಣವೆಲ್ಲಾ ತನಗೆ ಸಿಗುತ್ತೆ ಎಂದು ಮಗಳು ಖತರ್ನಾಕ್ ಐಡಿಯಾ ಮಾಡಿಕೊಂಡಿದ್ದಳು.
ದಿನಕ್ಕೆ10 ಬಾರಿ ಯಾರಾದ್ರೂ ಮಾಡ್ತಾರಾ? ಗಂಡನ ವರ್ತನೆಗೆ ಬೇಸತ್ತು ತವರು ಸೇರಿದ ಪತ್ನಿ!
ಮದ್ಯದಲ್ಲಿ ಡ್ರಗ್ಸ್ ಹಾಗೂ ಸ್ಲೋ ಪಾಯ್ಸನ್ ನೀಡಿದ್ರೆ ಪತ್ನಿ ಸಾಯುತ್ತಾಳೆ ಎಂಬವುದು ಅಲ್ಫ್ರೆಡ್ ರೂಫ್‌ಗೆ ಗೊತ್ತಿತ್ತು. ಅಲ್ಫ್ರೆಡ್ ರೂಫ್ ನೀಡಿದ ಮಾದಕ ಹಾಗೂ ವಿಷ ಮಿಶ್ರಿತ ಮದ್ಯ ಸೇವಿಸಿದ 13 ಗಂಟೆ ಬಳಿಕ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಂತರ ಮಗಳು ಮನೆಗೆ ತನ್ನ ಗೆಳೆಯನನ್ನು ಮನೆಗೆ ಕರೆಸಿಕೊಂಡು ಆತನೊಂದಿಗೆ ಸೆಕ್ಸ್ ಮಾಡಿದ್ದಾಳೆ. ಆರಂಭದಲ್ಲಿ ಮಹಿಳೆಗೆ ಏನಾಗಿದೆ ಎಂಬವುದು ಗೊತ್ತಾಗಿರಲಿಲ್ಲ. ಆಸ್ಪತ್ರೆಗೆ ದಾಖಲಾದ ನಂತರ ಮದ್ಯದಲ್ಲಿ ಮಾದಕ ವಿಷ ಬೆರೆತಿರುವ ಅಂಶ ವೈದ್ಯಕೀಯ ವರದಿಯಲ್ಲಿ ಗೊತ್ತಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಪೊಲೀಸರನ್ನು ಕರೆಸಿ ದೂರು ದಾಖಲಿಸಿದ್ದಾಳೆ. ಇದು ಆಗಿದ್ದು, 2022ರಲ್ಲಿ.
ಮಹಿಳೆಗೆ ಪದೇ ಪದೇ ತಲೆನೋವು, ನಿದ್ರಾಹೀನತೆ, ಅತಿಸಾರ ಸೇರಿದಂತೆ ಹಲವು ಆರೋಗ್ಯಕರ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗಿತ್ತು. ತಾನು ಕುಡಿಯುವ ಮದ್ಯ, ಕೋಕ್‌ನಲ್ಲಿ ಮಾದಕ ಪದಾರ್ಥ, ವಿಷ ಸೇರಿಸುತ್ತಿರುವ ವಿಷಯವೇ ಗೊತ್ತಿರಲಿಲ್ಲ. ವೈದ್ಯಕೀಯ ಪರೀಕ್ಷೆ ವೇಳೆ ದೇಹದಲ್ಲಿ ಕೊಕೇನ್ ಹಾಗೂ ವಿಷ ಇರೋದು ಪತ್ತೆಯಾಗಿದೆ. ಕೂಡಲೇ ಮಗಳು ಹಾಗೂ ಗಂಡನ ಮೇಲೆ ಅನುಮಾನಗೊಂಡ ಮಹಿಳೆ, ತಾನು ಮದ್ಯ ಸೇವಿಸಿದ್ದ ಗ್ಲಾಸ್ ಪೊಲೀಸರಿಗೆ ನೀಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ಪೊಲೀಸರು ಮಹಿಳೆಯ ಪತಿ ಅಲ್ಫ್ರೆಡ್ ರೂಫ್ ನನ್ನು ಬಂಧಿಸಿದ್ದಾರೆ. ಮಲಮಗಳು ಮತ್ತು ಆಕೆಯ ಸ್ನೇಹಿತ ಪರಾರಿಯಾಗಿದ್ದಾರೆ. ಇನ್ನು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವ ಅಲ್ಫ್ರೆಡ್ ರೂಫ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಮದುವೆಗೆ ಪ್ರಿಯಕರನ ಕಂಡೀಷನ್.. 3 ವರ್ಷದ ಮಗಳ ಉಸಿರು ನಿಲ್ಲಿಸಿ, ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಎಸೆದ ಕಟುಕಿ ತಾಯಿ
