ಶ್ವಾನಪ್ರಿಯನ ಹೊಸ ಐಡಿಯಾಗೆ ಇಂಟರ್‌ನೆಟ್ ಫಿದಾ ದೃಷ್ಠಿಹೀನ ಶ್ವಾನಗಳು ಹಿಂಬಾಲಿಸಲು ಹೊಸ ಐಡಿಯಾ ಮಾಡಿದ ಯುವಕ ಶೂ ಅಡಿಭಾಗದಲ್ಲಿ ಸದ್ದು ಬರುವ ಉಪಕರಣ ಅಳವಡಿಕೆ
ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು, ತಮ್ಮ ಮಾಲೀಕನೊಂದಿಗೆ ಭಾವಾನಾತ್ಮಕವಾದ ನಂಟು ಹೊಂದಿರುವ ಶ್ವಾನಗಳು ಮನುಷ್ಯ ಹೋದಲೆಲ್ಲಾ ಜೊತೆಯಾಗಿ ಬಂದು ಕಷ್ಟ ಸುಖದಲ್ಲಿ ಜೊತೆ ಇರುತ್ತವೆ. ಆದರೆ ದೃಷ್ಠಿಹೀನ ಶ್ವಾನಗಳಿಗೆ ಹೀಗೆ ಹಿಂಬಾಲಿಸಲು ಸಾಧ್ಯವಿಲ್ಲ. ಇದನ್ನರಿತ ಶ್ವಾನದ ಮಾಲೀಕನೋರ್ವ ಹೊಸ ಐಡಿಯಾ ಮಾಡಿದ್ದು, ಆ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈತ ಸಣ್ಣ ಮಕ್ಕಳ ಶೂಗಳಲ್ಲಿ ಇರುವಂತಹ ಪೀ ಪೀ ಸೌಂಡ್ ಬರುವಂತಹ ಪೀಪೀಗಳನ್ನು ತನ್ನ ಚಪ್ಪಲಿ ಹಾಗೂ ಕೆಲವು ಆಟಿಕೆಗಳಿಗೆ ಅಳವಡಿಸಿದ್ದಾನೆ. ಈ ಸದ್ದನ್ನು ಕೇಳುವ ಶ್ವಾನ ಈತನನ್ನೇ ಹಿಂಬಾಲಿಸುತ್ತದೆ. ದೈಹಿಕವಾಗಿ ಅಸಮರ್ಥತೆ ಹೊಂದಿರುವ ಸಾಕು ಬೆಕ್ಕುಗಳು ಅಥವಾ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಜನರು ಖಂಡಿತವಾಗಿಯೂ ಬಂಗಾರದ ಹೃದಯವನ್ನು ಹೊಂದಿರುತ್ತಾರೆ. ನಟ ಮತ್ತು ವಕೀಲನಾಗಿರುವ ರಾಕಿ ಕನಕ (Rocky Kanaka) ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಮ್ಮ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದು ಅವರು ದೃಷ್ಟಿಹೀನ ನಾಯಿಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.
ಇದರಲ್ಲಿ ಅವರು ಬೂಟ್‌ನ ಅಡಿಭಾಗದಲ್ಲಿ ತೂತು ಮಾಡಿ ಅದರಲ್ಲಿ ಈ ಸದ್ದು ಮಾಡುವ ಪೀಪೀಗಳನ್ನು ಅಳವಡಿಸುತ್ತಾರೆ. ಇದನ್ನು ಮಾಡಲು ಅವರು ಚಾಕುವನ್ನು ಬಳಸುತ್ತಾರೆ. ಈ ವಿಡಿಯೋವನ್ನು ರೆಕಾರ್ಡ್ ಮಡುವ ವ್ಯಕ್ತಿ ಆತನಿಗೆ ನೀನು ಏನು ಮಾಡುತ್ತಿಯಾ ಎಂದು ಕೇಳುತ್ತಾನೆ. ಆದರೆ ಆತ ನಗುತ್ತಾ ಬೂಟಿನ ಅಡಿಭಾಗವನ್ನು ಕತ್ತರಿಸುವುದನ್ನು ಮುಂದುವರಿಸುತ್ತಾನೆ. ನಂತರ ಪೀ ಪೀ ಸದ್ದು ಮಾಡುವ ಪೀಪೀಯನ್ನು ಶೂನ ಅಡಿಭಾಗದಲ್ಲಿ ಇಟ್ಟು ಅದನ್ನು ಭದ್ರಪಡಿಸುತ್ತಾನೆ.
ನಂಗೂ ಬೇಕು... ಮಹಿಳೆ ತಿನ್ನೋದು ನೋಡಿ ತನ್ನ ತಟ್ಟೆ ತಂದು ಮುಂದಿಟ್ಟ ಶ್ವಾನ
ತನ್ನ ದೃಷ್ಟಿಹೀನ ನಾಯಿಗಳಿಗಾಗಿ ಈತ ಹೀಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಕೀರಲು ಧ್ವನಿ ಬರುವ ಶೂ ಧರಿಸಿ ತನ್ನ ಅಂಗಳದಲ್ಲಿ ಓಡುತ್ತಿರುವುದರೊಂದಿಗೆ ಈ ವಿಡಿಯೋ ಕೊನೆಯಾಗುತ್ತದೆ. ಆದರೆ ವೀಡಿಯೊದಲ್ಲಿರುವ ಖುಷಿಯ ವಿಚಾರವೆಂದರೆ ಈ ಸದ್ದು ಕೇಳುವ ಶ್ವಾನಗಳು ಮತ್ತಷ್ಟು ಖುಷಿಯಾಗಿ ಆತನ ಹಿಂದೆಯೇ ಓಡುತ್ತವೆ.
ನಾಯಿಗೆ ಬಣ್ಣ ಬಳಿದು ಕೆಂಪಗಾಗಿಸಿದ ಟಿಕ್‌ಟಾಕ್ ಸ್ಟಾರ್... ಜನರಿಂದ ಬೈಗುಳದ ಸುರಿಮಳೆ
ಇದೊಂದು ಒಳ್ಳೆಯ ಉಪಾಯ. ನಾನು Nike Air Squeakers ಅನ್ನು ತಯಾರಿಸಿದ್ದೇನೆ ಆದ್ದರಿಂದ ನನ್ನ ದೃಷ್ಠಿಹೀನ ನಾಯಿಗಳು ನನ್ನನ್ನು ಹಿಂಬಾಲಿಸುತ್ತವೆ. ಎಂದು ನಾಯಿ ಮತ್ತು ಸ್ನೀಕರ್ ಎಮೋಜಿಯೊಂದಿಗೆ ಈ ಮುದ್ದಾದ ನಾಯಿ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಅವರು ಬರೆದುಕೊಂಡಿದ್ದಾರೆ. ಈ ವೀಡಿಯೊವನ್ನು ಜನವರಿ 24 ರಂದು Instagram ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ ವೀಡಿಯೊವನ್ನು 29 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಅಲ್ಲದೇ ಎಂತಹ ಬುದ್ಧಿವಂತ ಕಲ್ಪನೆ ಎಂದು ಶ್ವಾನ ಪ್ರೇಮಿಗಳು ಕಾಮೆಂಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಪಾರ್ಕ್‌ನಲ್ಲಿ ಕುಸಿದು ಬಿದ್ದಿದ್ದ ಶ್ವಾನಕ್ಕೆ ವ್ಯಕ್ತಿಯೊಬ್ಬ ಸಿಪಿಆರ್ (cardiopulmonary resuscitation) ಮಾಡುವ ಮೂಲಕ ಶ್ವಾನದ ಜೀವ ಉಳಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು.ಮಹಿಳೆಯೊಬ್ಬರು ತಮ್ಮ ಸಾಕು ನಾಯಿ ಬಾಕ್ಸರ್ (boxer) ಹಾಗೂ ಸ್ಟೋನ್ (stone) ನನ್ನು ವಾಕಿಂಗ್ ಕರೆದುಕೊಂಡು ಪಾರ್ಕಿಗೆ ಬಂದಿದ್ದು, ಈ ವೇಳೆ 9 ವರ್ಷದ ಶ್ವಾನ ಸ್ಟೊನ್ ದಿಢೀರನೇ ಪಾರ್ಕ್‌ನಲ್ಲೇ ಕುಸಿದು ಬಿದ್ದಿದೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ.
ಮಹಿಳೆಯ ಸಂಕಟದ ಕರೆಯನ್ನು ಕೇಳಿದ, ಜೇ (Jay) ಎಂಬ ವ್ಯಕ್ತಿಯೊಬ್ಬರು ಅವರ ಬಳಿಗೆ ಧಾವಿಸಿದ್ದಾರೆ. ಈ ವೇಳೆ ಶ್ವಾನ ಉಸಿರಾಡುತ್ತಿಲ್ಲ ಎಂಬುದು ಅರಿವಿಗೆ ಬಂದಿದ್ದು, ಬಳಿಕ ನಾಯಿಯ ಹೃದಯದ ಮೇಲೆ ಗಟ್ಟಿಯಾಗಿ ಹಲವು ಸಲ ಒತ್ತಿದ ಅವರು ಅದಕ್ಕೆ ಉಸಿರು ನೀಡುವ ಪ್ರಯತ್ನ ಮಾಡಿದರು. ಬಳಿಕ ಹಲವಾರು ನಿಮಿಷಗಳ ನಂತರ, ನಾಯಿ ಸ್ವಲ್ಪ ಪ್ರತಿಕ್ರಿಯಿಸಲು ಶುರು ಮಾಡಿತ್ತು. ಮತ್ತೆ ಸ್ವಲ್ಪದರಲ್ಲೇ ಅದು ಎದ್ದು ಕುಳಿತಿದ್ದು, ಎಲ್ಲರೂ ಮತ್ತೊಮ್ಮೆ ಶ್ವಾನ ಸ್ಟೋನ್ ಉಸಿರಾಡುವುದನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.