ನಾಯಿಗೆ ಬಣ್ಣ ಬಳಿದ ಟಿಕ್‌ಟಾಕ್‌ ಸ್ಟಾರ್ ನೆಟ್ಟಿಗರಿಂದ ಬೈಗುಳದ ಸುರಿಮಳೆ ಕೃತ್ಯ ಸಮರ್ಥಿಸಿಕೊಂಡ ಟಿಕ್‌ಟಾಕರ್‌

ಕೆಲವು ಟಿಕ್‌ಟಾಕ್ ಸ್ಟಾರ್‌ಗಳು ಪ್ರಚಾರಕ್ಕಾಗಿ ಏನ್‌ ಮಾಡ್ತಾರೆ ಏನ್‌ ಮಾಡಲ್ಲ ಅಂತ ಹೇಳೋದಿಕೆ ಆಗಲ್ಲ. ಅವರ ಚಿತ್ರ ವಿಚಿತ್ರ ಅವತಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದನ್ನು ನೀವು ಈಗಾಗಲೇ ನೋಡಿರಬಹುದು. ಅದಿರಲಿ ಈಗ ಇಲ್ಲೊಬ್ಬ ಟಿಕ್‌ಟಾಕ್‌ ಸ್ಟಾರ್‌ ತನ್ನ ಶ್ವಾನಕ್ಕೆ ಕೆಂಪು ಬಣ್ಣ ಬಳಿದಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಆಕೆ ಪ್ರಾಣಿ ಮೇಲೆ ದೌರ್ಜನ್ಯವೆಸಗಿದ್ದಾಳೆ ಎಂದು ಆರೋಪಿಸಿದ್ದಾರೆ. 

ಕೆಲಸವಿಲ್ಲದ ಬಡಗಿ ಮಗುವಿನ ... ಕೆತ್ತಿದ ಎಂಬ ಗಾದೆಯೊಂದಿದೆ. ಅದರಂತೆ ಈ ಕ್ಲೋಯ್ (Chloe) ಎಂಬಾಕೆ ತನ್ನ ಶ್ವಾನಕ್ಕೆ ಬಣ್ಣ ಹಚ್ಚಿ ಕೆಂಪಗಾಗಿಸಿದ್ದಾಳೆ. ಈ ಟಿಕ್‌ಟಾಕರ್‌ ತನ್ನ ಇನ್ಸ್ಟಾಗ್ರಾಮ್‌ ಖಾತೆ ( @danthebigreddog)ಯನ್ನು ಬಳಸಿಕೊಂಡು ತನ್ನ ಮುದ್ದಿನ ಶ್ವಾನದ ಹಲವು ವಿಡಿಯೋಗಳನ್ನು ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಹಾಕುತ್ತಾಳೆ. ಇತ್ತೀಚೆಗೆ ಆಕೆ ನನಗೆ ಬೀದಿಯಲ್ಲಿ ಕೆಂಪು ಬಣ್ಣದ ನಾಯಿಯೊಂದು ಸಿಕ್ಕಿದೆ. ಎಂದು ನಾಯಿಗೆ ಕೆಂಪು ಬಣ್ಣ ಹಚ್ಚಿ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದಳು. ಇದನ್ನು ನೋಡಿದ ನೆಟ್ಟಿಗರು ಆಕೆ ನಾಯಿಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆಕೆಗೆ ಚೆನ್ನಾಗಿ ಬೈದಿದ್ದಾರೆ. 

View post on Instagram
View post on Instagram

ಜನ ಬೈಯಲ್ಲು ಶುರು ಮಾಡಿದ ಬಳಿಕ ಈಕೆ ತಾನು ಏಕೆ ಶ್ವಾನಕ್ಕೆ ಬಣ್ಣ ಬಳಿದೆ ಎಂಬುದನ್ನು ಹೇಳಿಕೊಂಡಿದ್ದಾಳೆ. ಅಲ್ಲದೇ ನನ್ನ ಈ ಶ್ವಾನಕ್ಕೆ ಶ್ವಾನ ಸ್ನೇಹಿಯಾದ ಹೇರ್ ಡೈಯನ್ನೇ ನಾನು ಬಳಸಿದ್ದೇನೆ. ಈ ಡೈ ಶ್ವಾನ ಡ್ಯಾಂಡಿಯ ರೋಮವನ್ನು ಮೃದುವಾಗಿಸುತ್ತದೆ. ಅಲ್ಲದೇ ಇದನ್ನು ಯಾರೂ ಕದಿಯಲಾಗದು. ಒಂದು ವೇಳೆ ಕದ್ದರೂ ಇದನ್ನು ಸುಲಭವಾಗಿ ಗುರುತಿಸಬಹುದು ಈ ಕಾರಣಕ್ಕಾಗಿ ತಾನು ಶ್ವಾನಕ್ಕೆ ಬಣ್ಣ ಬಳಿದಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೇ ಕೆಂಪು ಬಣ್ಣವನ್ನು ಹೊಂದಿರುವುದರಿಂದ ಇದಕ್ಕೆ ಯಾರು ಡಿಕ್ಕಿ ಹೊಡೆಯಲಾರರು. ಇದು ತುಂಬಾ ಮುದ್ದಾಗಿದ್ದು ನಮ್ಮ ಏರಿಯಾದಲ್ಲಿರುವ ಅತ್ಯಂತ ವಿರಳವಾದ ತಳಿ ಇದು. ಇದು ಕಳೆದು ಹೋಗುವುದನ್ನು ತಡೆಯಲು ಹೀಗೆ ಮಾಡಿದ್ದೇನೆ ಎಂದು ಹೇಳಿ ಶ್ವಾನಕ್ಕೆ ಬಣ್ಣ ಹಚ್ಚಿದ ಆಕೆಯ ಕೃತ್ಯವನ್ನು ಅವಳು ಸಮರ್ಥಿಸಿಕೊಂಡಿದ್ದಾಳೆ.

View post on Instagram

ಈಕೆಯ ಸಮರ್ಥನೆಯನ್ನು ಕೆಲವರು ಹೌದು ಎಂದು ಒಪ್ಪಿಕೊಂಡರೆ ಮತ್ತೆ ಕೆಲವರು ಅದಕ್ಕೂ ಬೈದಾಡಿದ್ದಾರೆ. ನೀವು ನಾಯಿಗೆ ಕೆಂಪು ಬಣ್ಣ ನೀಡುವುದಕ್ಕೂ ನಿಮ್ಮ ನಾಯಿಯ ಬಗ್ಗೆ ನೀವು ಹೊಂದಿರುವ ಕಾಳಜಿಗೂ ಯಾವುದೇ ಸಂಬಂಧವಿಲ್ಲ. ನೀವು ನಿಮ್ಮ ನಾಯಿಯನ್ನು ಬಳಸಿಕೊಂಡು ಗಮನ ಸೆಳೆಯಲು ನಿಮ್ಮ ಸ್ವಂತ ಹಿತಾಸಕ್ತಿಗಾಗಿ ಇದನ್ನು ಮಾಡಿದ್ದೀರಿ. . ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಿದ್ಧರಾಗಲು ಅನೇಕರು ನಾಯಿಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಖಂಡಿತವಾಗಿಯೂ ಒಂದು ರೀತಿಯ ದೌರ್ಜನ್ಯ ಎಂದು ಒಬ್ಬರು ಇನ್ಸ್ಟಾಗ್ರಾಮ್‌ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

ನಂಗೂ ಬೇಕು... ಮಹಿಳೆ ತಿನ್ನೋದು ನೋಡಿ ತನ್ನ ತಟ್ಟೆ ತಂದು ಮುಂದಿಟ್ಟ ಶ್ವಾನ

ಪ್ರಾಣಿಗಳಾದರು ಯಾವುದೇ ರಾಸಾಯನಿಕ ಬಳಕೆ ಇಲ್ಲದೇ ಶುದ್ಧವಾಗಿದ್ದವು. ಈಗ ನಾಯಿಗಳಿಗೂ ಬಣ್ಣ ಬಳಿದು ಹಾಳು ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸ್ನಾನ ಮಾಡೋದು ಹೇಗೆ... ನನ್ನ ನೋಡಿ ಕಲಿ ಅಂತಿದೆ ಈ ಶ್ವಾನ