Asianet Suvarna News Asianet Suvarna News

1 ಸುಳ್ಳಿನಿಂದಾಗಿ 6 ದಿನ ಲಾಕ್‌ಡೌನ್: ಕೊರೋನಾ ತೀವ್ರತೆ ಬಗ್ಗೆ ಬೆಚ್ಚಿಬಿದ್ದಿದ್ದ ಅಧಿಕಾರಿಗಳು!

ಕೊರೋನಾ ವಿರುದ್ಧ ಸಮರ ಸಾರಿರುವ ಆಸ್ಟ್ರೇಲಿಯಾ| ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣನೆ| ಸೌತ್ ಆಸ್ಟ್ರೇಲಿಯಾದಲ್ಲಿ 1 ಸುಳ್ಳಿನಿಂದಾಗಿ 6 ದಿನ ಲಾಕ್‌ಡೌನ್| ಕೊರೋನಾವೈರಸ್‌ ತೀವ್ರತೆ ಬಗ್ಗೆ ಬೆಚ್ಚಿಬಿದ್ದಿದ್ದ ಅಧಿಕಾರಿಗಳು| ಸುಳ್ಳು ಬಹಿರಂಗವಾದ ಬೆನ್ನಲ್ಲಿ ಪ್ರಕರಣ ಸುಖಾಂತ್ಯ

Man Lie At Pizza Bar Led To Drastic 6 Day South Australia Lockdown pod
Author
Bangalore, First Published Nov 21, 2020, 5:23 PM IST

ಕ್ಯಾನ್‌ಬೆರಾ(ನ.21): ಒಂದು  ಸುಳ್ಳು ಏನೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತೆ ಎಂಬುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದು ಇರ್ಲಿಕ್ಕಿಲ್ಲ.  ವ್ಯಕ್ತಿಯೊಬ್ಬನ ಸುಳ್ಳಿನಿಂದಾಗಿ ಇಡೀ ಸೌತ್ ಅಸ್ಟ್ರೇಲಿಯಾದಲ್ಲಿ 6 ದಿನಗಳ ಲಾಕ್‌ಡೌನ್‌ ವಿಧಿಸಲಾದ ಘಟನೆ ನಡೆದಿದೆ.

"

ಕೊರೋನಾವೈರಸ್‌ ವಿರುದ್ಧ ಆಸ್ಟ್ರೇಲಿಯಾ ಅಕ್ಷರಶ: ಸಮರವನ್ನೇ ಸಾರಿದೆ. ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್‌ಗೆ ಈಗಲೂ ಬಹಳ ಒತ್ತುಕೊಟ್ಟು ಕ್ರಮಕೈಗೊಳ್ಳಲಾಗುತ್ತಿದೆ. ಕಾಂಟಾಕ್ಟ್ ಟ್ರೇಸಿಂಗ್ ತಂಡಕ್ಕೆ ವ್ಯಕ್ತಿಯೊಬ್ಬ ನೀಡಿದ ಸುಳ್ಳು ಮಾಹಿತಿ ಲಾಕ್‌ಡೌನ್‌ಗೆ ಕಾರಣವಾಗಿದೆ.

ಸೌತ್ ಆಸ್ಟ್ರೇಲಿಯಾದಲ್ಲಿರುವ ಪಿಝ್ಝಾ ಔಟ್‌ಲೆಟ್‌ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿತ್ತು. ತಾನು  ಕೂಡಾ ಆ ಶಾಪ್‌ಗೆ ಒಮ್ಮೆ ಸಣ್ಣ ಭೇಟಿ ಕೊಟ್ಟಿದ್ದೆ, ಎಂದು ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬ ಹೇಳಿದ್ದ.   

ಒಂದು ಸಣ್ಣ ಭೇಟಿಯಿಂದಾಗಿ ಕೊರೋನಾ ಹರಡಿದೆ, ಈ ಕೊರೋನಾ ಅಷ್ಟೊಂದು ಡೇಂಜರಸ್ ಸ್ವರೂಪ ಪಡೆದುಕೊಂಡಿದೆ ಎಂದು ಭಾವಿಸಿದ ಅಧಿಕಾರಿಗಳು 6 ದಿನಗಳ ಲಾಕ್‌ಡೌನ್ ಘೋಷಿಸಿದ್ದರು.

ಆದರೆ ಮತ್ತಷ್ಟು ವಿಚಾರಣೆ ಬಳಿಕ, ಆ ವ್ಯಕ್ತಿ ಆ ಪಿಝ್ಝಾ ಶಾಪ್‌ನಲ್ಲೇ ಕೆಲ ದಿನ ಕೆಲಸ ಮಾಡಿದ್ದ, ಹಾಗಾಗಿ ಕೊರೋನಾ ತಗುಲಿದೆ ಎಂದು ತಿಳಿದುಬಂದಿದೆ. ಒಂದು ಸುಳ್ಳು, ಇಡೀ ಸೌತ್‌ ಆಸ್ಟ್ರೇಲಿಯಾ ಜನರ  ವ್ಯಾಪಾರ-ವಹಿವಾಟು, ನೆಮ್ಮದಿಯನ್ನು ಕಂಗೆಡಿಸಿದ್ದು ಸುಳ್ಳಲ್ಲ.

Follow Us:
Download App:
  • android
  • ios