ರೀಲ್ಸ್ ವಿಡಿಯೋ ಮಾಡಲು ಯುವಕನೊಬ್ಬ ಸಿಂಹದ ಬೋನಿಗೆ ನುಗ್ಗಿದ್ದಾನೆ. ಈತನ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಯುವಕ ಏನಾದ? ಮುಂದೇನಾಯ್ತು?

ಪಂಜಾಬ್(ಜ.21) ರೀಲ್ಸ್ ವಿಡಿಯೋಗಾಗಿ ಏನು ಬೇಕಾದರೂ ಮಾಡಬಲ್ಲ ಒಂದು ವರ್ಗವಿದೆ. ಈ ಸಮೂಹಕ್ಕೆ ಪ್ರಾಣದ ಭಯವಿಲ್ಲ ಅಥವಾ ಅರಿವಿಲ್ಲ. ಅಪಾಯಕಾರಿ ಸ್ಟಂಟ್ ಮಾಡಿ ರಾತ್ರೋರಾತ್ರಿ ಸ್ಟಾರ್ ಆಗಲು ಬಯಸುತ್ತಾರೆ. ಈ ದಾರಿಯಲ್ಲಿ ಹೊರಟವರು ದುರಂತ ಅಂತ್ಯ ಕಂಡಿದ್ದೇ ಹೆಚ್ಚು. ಇದೀಗ ಯುವಕನೊಬ್ಬ ರೀಲ್ಸ್ ವಿಡಿಯೋ ಶೂಟ್ ಮಾಡಲು ಸಿಂಹದ ಬೋನಿಗೆ ನುಗ್ಗಿದ್ದಾನೆ. ವಿಡಿಯೋ ಮಾಡುತ್ತಾ ಸಿಂಹದ ಪಕ್ಕ ತೆರಳಿದ್ದಾನೆ. ಆದರೆ ಸಿಂಹಕ್ಕೆ ಈತ ರೀಲ್ಸ್ ಮಾಡಿ ಹೊರಟು ಹೋಗುತ್ತಾನೆ ಅನ್ನದು ಎಲ್ಲಿ ಗೊತ್ತಾಗಬೇಕು? ಏಕಾಏಕಿ ದಾಳಿ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. 

ಮೊಹಮ್ಮದ್ ಅಜೀಮ್ ಅನ್ನೋ ಯುವಕ, ಪಂಜಾಬ್ ಪ್ರಾಂತ್ಯದಲ್ಲಿರುವ ಕಾಡು ಪ್ರಾಣಿಗಳ ಸಂತತಿ ಹೆಚ್ಚಳ ಕೇಂದ್ರಕ್ಕೆ ಬೇಟಿ ನೀಡಿದ್ದಾನೆ. ಮಾಲೀಕನ ಅನುಮತಿ ಪಡೆದು ಹುಲಿ, ಸಿಂಹ, ಚಿರತೆ ಸೇರಿದಂತೆ ಇತರ ಪ್ರಾಣಿಗಳ ವಿಡಿಯೋ ಶೂಟ್ ಮಾಡುವುದಾಗಿ ಹೇಳಿದ್ದಾನೆ. ಇತ್ತ ಮಾಲೀಕ ಕೂಡ ಒಕೆ ಎಂದಿದ್ದಾನೆ. ಸಾಮಾನ್ಯವಾಗಿ ವಿಡಿಯೋ ಶೂಟ್ ಮಾಡಬೇಕು ಎಂದಾಗ ಯಾರಾದರೂ ಬೋನಿನ ಒಳಗೆ ಹೊಕ್ಕಿ ಶೂಟ್ ಮಾಡುತ್ತಾರೆ ಅನ್ನೋ ಸಣ್ಮ ಕಲ್ಪನೆಯೂ ಮಾಲೀಕನಿಗೆ ಇರಲಿಲ್ಲ. 

ರೀಲ್ಸ್‌ಗಾಗಿ ಸೈಕಲ್‌ನಲ್ಲಿ ಸಾಗ್ತಿದ್ದ ವೃದ್ಧನ ಮುಖಕ್ಕೆ ಪೋಮ್ ಸ್ಪ್ರೆ ಮಾಡಿದ ಕಿಡಿಗೇಡಿಗಳು: ಆಮೇಲಾಗಿದ್ದೇನು?

ಅನುಮತಿ ಸಿಕ್ಕಿದ್ದೆ ತಡ, ನೇರವಾಗಿ ಸಿಂಹದ ಪಕ್ಕ ಬಂದಿದ್ದಾನೆ. ರೀಲ್ಸ್ ವಿಡಿಯೋ ರೆಕಾರ್ಡ್ ಮಾಡುತ್ತಾ, ಬೋನಿನ ಬಾಗಿಲು ತೆರೆದು ನೇರವಾಗಿ ಒಳಗೆ ಹೊಕ್ಕಿದ್ದಾನೆ. ಸಿಂಹದ ಹತ್ತಿರ ಬರುತ್ತಿದ್ದಂತೆ ಸಿಂಹ ಏಕಾಏಕಿ ದಾಳಿ ಮಾಡಿದೆ. ತಲೆ, ಮುಖ ಹಾಗೂ ಕುತ್ತಿಗೆ ಭಾಗಕ್ಕೆ ದಾಳಿ ಮಾಡಿದೆ. ಸಿಂಹ ದಾಳಿ ಮಾಡುತ್ತಿದ್ದಂತ ಯುವಕ ಕಿರುಚಾಡಿದ್ದಾನೆ. ಅತ್ತ ಕೇಂದ್ರದ ಮಾಲೀಕ ಓಡೋಡಿ ಬಂದು ಯುವಕನನ್ನು ಬೋನಿನಿಂದ ಹೊರಗೆಳೆದಿದ್ದಾನೆ. ಬಳಿಕ ಸ್ಛಳೀಯ ಆಸ್ಪತ್ರೆ ದಾಖಲಿಸಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಕಾರಣ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬೋನಿನ ಒಳಗಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಈ ವೇಳೆ ರೀಲ್ಸ್ ವಿಡಿಯೋ ಪತ್ತೆಯಾಗಿದೆ. ಸಿಂಹದ ಬೋನಿಗೆ ನುಗ್ಗಿ ಹತ್ತಿರ ಹೋಗುತ್ತಿರುವ ದೃಶ್ಯವಿದೆ. ಬಳಿಕ ದಾಳಿಯಾಗುತ್ತಿದ್ದಂತೆ ಮೊಬೈಲ್ ಕೆಳಕ್ಕೆ ಬಿದ್ದಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದೀಗ ಪೊಲೀಸರು ಪ್ರಾಣಿ ಕೇಂದ್ರದ ಪರವಾನಗೆ ರದ್ದುಗೊಳಿಸಿದ್ದಾರೆ.