Asianet Suvarna News Asianet Suvarna News

ನಕಲಿ ಕರೆ ಎಂದು 6 ತಿಂಗಳಿನಿಂದ ನಿರ್ಲಕ್ಷಿಸಿದ ವ್ಯಕ್ತಿಗೆ ಕಾದಿತ್ತು ಅಚ್ಚರಿ!

ಕಳೆದ 6 ತಿಂಗಳಿನಿಂದ ವ್ಯಕ್ತಿಗೆ ಪದೆ ಪದೇ ಕರೆಯೊಂದು ಬರುತ್ತಿತ್ತು. ನಕಲಿ ಕರೆ, ವಂಚನೆ ಕರೆ ಎಂದು ನಿರ್ಲಕ್ಷಿಸಲಾಗಿತ್ತು. 6 ತಿಂಗಳ ಬಳಿಕ ಅನುಮಾನಗೊಂಡು ಪರಿಶೀಲಿಸಿದಾಗ ವ್ಯಕ್ತಿಗೆ ಅಚ್ಚರಿಯಾಗಿತ್ತು.

Man ignore calls email due to scam suspect turns to be lottery jackpot rs 2 crore in michigan ckm
Author
First Published Aug 16, 2024, 10:47 AM IST | Last Updated Aug 16, 2024, 10:47 AM IST

ಮಿಚಿಗನ್(ಆ.16) ಪ್ರತಿದಿನ ಸೈಬರ್ ಕ್ರೈಮ್ ಕುರಿತು ಒಂದಲ್ಲೂ ಒಂದು ಸುದ್ದಿ ವರದಿಯಾಗುತ್ತಲೇ ಇದೆ. ಹೀಗಾಗಿ ಎಲ್ಲರೂ ಅತೀವ ಎಚ್ಚರಿಕೆ ವಹಿಸುತ್ತಾರೆ. ಅನಗತ್ಯ ಕರೆ, ಮೆಸೇಜ್, ಲಿಂಕ್‌ಗಳಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಹೀಗೆ ವ್ಯಕ್ತಿಯೊಬ್ಬರಿಗೆ ಮೊದಲು ಇಮೇಲ್ ಬಂದಿದೆ. ಇದು ಸ್ಪಾಮ್ ಎಂದು ಡಿಲೀಟ್ ಮಾಡಿದ್ದಾರೆ. ಇದಾದ ಬಳಿಕ ಕರೆ ಬರಲು ಆರಂಭಗೊಂಡಿದೆ. ನಕಲಿ ಕರೆಗಳ ಹಾವಳಿ ಎಂದು ಕರೆ ಸ್ವೀಕರಿಸಿ ಕೇಳಿಸಿಕೊಂಡು ಕಟ್ ಮಾಡಿದ್ದಾರೆ. ಬರು ಬರುತ್ತಾ ಕರೆ ಸ್ವೀಕರಿಸುವುದೇ ಬಿಟ್ಟಿದ್ದಾರೆ. ಬರೋಬ್ಬರಿ 6 ತಿಂಗಳಿನಿಂದ ಕರೆ ಹಾಗೂ ಇಮೇಲ್ ನಿರ್ಲಕ್ಷಿಸಿದ್ದಾರೆ. ಕೊನೆಗೆ ಅನುಮಾನಗೊಂಡ ವ್ಯಕ್ತಿ ಪರಿಶೀಲಿಸಿದಾಗ ಬರೋಬ್ಬರಿ 2 ಕೋಟಿ ರೂಪಾಯಿ ಜಾಕ್‌ಪಾಟ್ ಸಿಕ್ಕ ಘಟನೆ ಮಿಚಿಗನ್‌ನಲ್ಲಿ ನಡೆದಿದೆ.

ಅಮೆರಿಕದ ಈತ ಫೆಬ್ರವರಿ ತಿಂಗಳಲ್ಲಿ ಮಳಿಗೆಯೊಂದರಲ್ಲಿ ಕೆಲ ವಸ್ತುಗಳನ್ನು ಖರೀದಿಸಲು ತೆರಳಿದ್ದಾನೆ. ಈ ವೇಳೆ ಕೆಲ ಶಾಪ್‌ಗಳಲ್ಲಿ ರಿಜಿಸ್ಟ್ರೇಶನ್ ಮಾಡಿದ್ದಾನೆ. ಅರೆನಾಕ್ ಕೌಂಟ್ ಪ್ಲೇಯರ್ ಆಗಿರುವ ಈತ, ಗೇಮ್ಸ್ ಹಾಗೂ ಇತರ ಕೆಲ ಕ್ರೀಡಗಳಿಗೆ ನೋಂದಣಿ ಮಾಡಿದ್ದಾನೆ. ಹೀಗಿರುವಾಗ ಮಿಚಿಗನ್ ಲಾಟರಿಗೂ ಹಣ ಪಾವತಿ ಮಾಡಿದ್ದಾನೆ. ಆದರೆ ಇದರ ಬಗ್ಗೆ ಈ ವ್ಯಕ್ತಿಗೆ ಅರಿವೇ ಇರಲಿಲ್ಲ.

ಕೆಲಸ ಕಳೆದುಕೊಂಡ ಎರಡೇ ದಿನದಲ್ಲಿ ಜಾಕ್‌ಪಾಟ್: 2.5 ಕೋಟಿ ರೂ ಲಾಟರಿ ಗೆದ್ದ ಮಹಿಳೆ!

ಫೆಬ್ರವರಿ ತಿಂಗಳಲ್ಲಿ ಈ ಲಾಟರಿ ಅದೃಷ್ಠಶಾಲಿಗಳನ್ನು ಪ್ರಕಟಿಸಿದೆ. ಈ ಪೈಕಿ ಅರೆನಾಕ್ ಕೌಂಟಿ ಪ್ಲೇಯರ್ 2ನೇ ಬಹುಮಾನ ಗೆದ್ದಿದ್ದಾರೆ. 2 ಕೋಟಿ ರೂಪಾಯಿ ಬಹುಮಾನ ಮೊತ್ತ ವಿತರಿಸಲು ಮಿಚಿಗನ್ ಲಾಟರಿ, ಮೊದಲು ಇಮೇಲ್ ಕಳುಹಿಸಿದೆ. ಆದರೆ ಈ ಇಮೇಲ್ ವಂಚನೆ ಇರಬಹದು ಎಂದು ಡಿಲೀಟ್ ಮಾಡಲಾಗಿದೆ.

ಇಮೇಲ್‌ಗೆ ಉತ್ತರವಿಲ್ಲದ ಕಾರಣ ಬಳಿಕ ಫೋನ್ ಕರೆ ಮಾಡಲಾಗಿದೆ. ಆದರೆ ಫೋನ್ ಮೂಲಕ ವಂಚನೆ ಹೆಚ್ಚಾಗಿರುವ ಕಾರಣ ನಿರ್ಲಕ್ಷಿಸಲಾಗಿದೆ. ಅದೆಷ್ಟೆ ಕರೆ ಮಾಡಿದರೂ ಈತ ಮಾತ್ರ ಸ್ಪಂದನೆ ನೀಡಲಿಲ್ಲ. ಬರೋಬ್ಬರಿ 6 ತಿಂಗಳು ಪದೇ ಪದೇ ಈ ಕರೆ ಬಂದಿದೆ. ಹೀಗಿರುವಾಗ ಈತನಿಗೆ ಅನುಮಾನ ಶುರುವಾಗಿದೆ. ಇಷ್ಟೊಂದು ಕರೆ ಮಾಡುತ್ತಿರುವುದೇಕೆ ಎಂದು ಪರಶೀಲಿಸಲು ಮಿಚಿಗನ್ ಲಾಟರಿ ಔಟ್‌ಲೆಟ್‌ಗೆ ತೆರಳಿದ್ದಾನೆ.

ಈ ವೇಳೆ ಅಚ್ಚರಿಯಾಗಿದೆ. ಇಮೇಲ್ ಹಾಗೂ ಕರೆಯಲ್ಲಿ ತಿಳಿಸಿರುವಂತೆ ಲಾಟರಿ ಬಹುಮಾನ ಬಂದಿದೆ. 2 ಕೋಟಿ ರೂಪಾಯಿ ಮೊತ್ತ ಸ್ವೀಕರಿಸಿದ್ದಾನೆ. ಈ ಕುರಿತು ಸಂತಸ ಹಂಚಿಕೊಂಡಿರುವ ಈತ, ನಾನು ಸ್ಪಾಮ್ ಕಾಲ್ ಎಂದು ಕಡೆಗಣಿಸಿದ್ದೆ. ಆದರೆ 2 ಕೋಟಿ ರೂಪಾಯಿ ಬಹುಮಾನ ಬಂದಿದೆ. ಇದು ನನ್ನ ಜೀವನವನ್ನೇ ಬದಲಿಸಿದೆ ಎಂದಿದ್ದಾನೆ.

33 ಕೋಟಿ ಗೆದ್ದವನಿಗೆ ಒಂದು ರೂ ಅನುಭವಿಸೋ ಯೋಗ ಇಲ್ಲ: ಲಾಟರಿ ಗೆಲ್ಲುತ್ತಿದ್ದಂತೆ ಎಳೆದೊಯ್ದ ಜವರಾಯ
 

Latest Videos
Follow Us:
Download App:
  • android
  • ios