ಅಮೆರಿಕ ಮೂಲದ ಬ್ರಿಯಾನ್ ತನ್ನ ಗೆಳತಿ ಸ್ಟೆಫನಿಗೆ ಪ್ರಪೋಸ್‌ ಮಾಡಿದ್ದಾನೆ. ಅದೂ ವಿಮಾನದಲ್ಲಿ. ಇದಕ್ಕೆ ವಿಮಾನಯಾನ ಸಿಬ್ಬಂದಿ ಸಂಪೂರ್ಣ ನೆರವನ್ನೂ ನೀಡಿದ್ದಾರೆ. 

ಪ್ರೀತಿಸಿ ಮದುವೆಯಾಗೋದು (Love Marriage) ಈಗ ತುಂಬಾ ಕಾಮನ್‌ ಆಗಿದ್ರೂ, ಗರ್ಲ್‌ಫ್ರೆಂಡ್‌ಗೆ (Girlfriend) ಪ್ರಪೋಸ್‌ (Propose) ಮಾಡೋದು ಹೇಗೆ, ಯಾವಾಗ ಎಂಬ ಗೊಂದಲದಲ್ಲೇ ಇರ್ತಾರೆ ಹುಡುಗರು. ಗರ್ಲ್‌ಫ್ರೆಂಡ್‌ಗೆ ಉಂಗುರ ಹಾಕಲು ಹಾಗೂ ಆಕೆ ಒಪ್ಪಿಗೆ ನೀಡುವಂತೆ ಮಾಡಲು ಭಾರಿ ಕೆಲವರಂತೂ ಭಾರಿ ಸಾಹಸಗಳನ್ನೇ ಮಾಡ್ತಾರೆ. ಏಕೆಂದರೆ, ಹುಡುಗೀರು ಅಷ್ಟು ಸುಲಭವಾಗಿ ನಮ್ಮನ್ನು ಒಪ್ಪಿಕೊಳ್ಳಲ್ಲ ಅಂತ ಹಲವರು ಒಳ್ಳೆ ಸಮಯಕ್ಕಾಗಿ ಕಾಯ್ತಿರುತ್ತಾರೆ. ಇನ್ನು, ಕೆಲವರು ಏನಾದರೂ ವಿಶೇಷವಾಗಿ (Special) ಪ್ರಪೋಸ್‌ ಮಾಡ್ಬೇಕೆಂದು ನೋಡ್ತಾರೆ. ಅದಕ್ಕೆ ಹೇಳೋದು, ಒಬ್ಬರ ಸಂಗಾತಿಗೆ ಪ್ರಪೋಸ್‌ ಮಾಡೋದು ದಂಪತಿಗಳು ಪಾಲಿಸಬಹುದಾದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. 

ಈ ಹಿನ್ನೆಲೆ ರೊಮ್ಯಾಂಟಿಕ್ ಸೆಟಪ್, ಕ್ಯಾಂಡಲ್‌ಲೈಟ್‌ ಡಿನ್ನರ್‌ ಅಥವಾ ಪ್ರವಾಸಕ್ಕೆ ಹೋಗಲು ಒಲವು ತೋರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ವಿಮಾನದಲ್ಲಿ ತನ್ನ ಗೆಳತಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ನಿರ್ಧರಿಸಿದ. ಮತ್ತು ಅವನಿಗೆ ವಿಮಾನಯಾನ ಸಿಬ್ಬಂದಿ ಸಂಪೂರ್ಣ ಬೆಂಬಲವನ್ನು ನೀಡಿದರು!

ಇದನ್ನು ಓದಿ: ನಡು ರಸ್ತೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡ ವಿಜಯ್ ದೇವರಕೊಂಡ; ವಿಡಿಯೋ ವೈರಲ್!

ಅಮೆರಿಕ ಮೂಲದ ಯುನೈಟೆಡ್ ಏರ್‌ಲೈನ್ಸ್ (United Airlines) ನಿರ್ವಹಿಸುವ ವಿಮಾನದಲ್ಲೇ ಬ್ರಿಯಾನ್ (Brian) ತನ್ನ ಗೆಳತಿ ಸ್ಟೆಫನಿಗೆ ನನ್ನನ್ನು ಪ್ರೀತಿಸುತ್ತೀಯಾ. ಮತ್ತು ಆಕೆ ಯೆಸ್‌ ಎಂದಿದ್ದು, ಈ ಮೂಲಕ ಗೆಳೆಯನ ಪ್ರಪೋಸ್‌ ಅನ್ನು ಒಪ್ಪಿಕೊಂಡಿದ್ದಾಳೆ.

ಈ ಬಗ್ಗೆ ಫೇಸ್‌ಬುಕ್‌ ಪೇಜ್‌ನಲ್ಲಿ (Facebook Page) ಏರ್‌ಲೈನ್ಸ್‌ ಬರೆದುಕೊಂಡಿದ್ದು, ಫೋಟೋಗಳನ್ನೂ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, ‘’ದಯವಿಟ್ಟು ಈ ವಿಮಾನದೊಳಗಿನ ಪ್ರೇಮಕಥೆಯತ್ತ ನಿಮ್ಮ ಗಮನವನ್ನು ನಿರ್ದೇಶಿಸಿ: ಅಲ್ಟಿಮೇಟ್‌ ಸರ್‌ಪ್ರೈಸ್‌ ಮಾಡಲು ಬ್ರಿಯಾನ್‌ ಪ್ರಪೋಸ್‌ ಮಾಡಿದಾಗ ನಾವು ಹೌದು ಎಂದು ಹೇಳಿದೆವು. ಮತ್ತು ಸ್ಟೆಫನಿ (Stephany) ಕೂಡ ಹೌದು ಎಂದು ಹೇಳಿದರು! ನಂತರ ಅವರು ತಮ್ಮ ಸಂತೋಷದಿಂದ ಎಂದೆಂದಿಗೂ ಹೊರಟರು.. ಮತ್ತು ಅವರ ಸಂಪರ್ಕ ವಿಮಾನದ ಕಡೆಗೆ ಹೋದರು” ಎಂದು ಏರ್‌ಲೈನ್ಸ್‌ ಉತ್ತಮ ಕ್ಯಾಪ್ಷನ್‌ ಅನ್ನೂ ಬರೆದುಕೊಂಡಿದೆ.

ಇದನ್ನೂ ಓದಿ: ಪತಿಗಿಂತ ನಾನೇ ಜಾಸ್ತಿ ರೊಮ್ಯಾಂಟಿಕ್; ಶ್ವೇತಾ ಚಂಗಪ್ಪಗೆ ವೇದಿಕೆ ಮೇಲೆ ಪ್ರಪೋಸ್‌ ಮಾಡಿದ ಕಿರಣ್!

ಈ ಪೋಸ್ಟ್‌, ಫೋಟೋಗಳನ್ನು ನೀವೇ ಒಮ್ಮೆ ನೋಡಿ..

ಈ ಪೋಸ್ಟ್ ಅನ್ನು 5,400 ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ ಮತ್ತು 300 ಕ್ಕೂ ಅಧಿಕ ನೆಟ್ಟಿಗರು ಕಮೆಂಟ್‌ಗಳನ್ನು ಬರೆದಿದ್ದಾರೆ. ಜನರು ಸ್ವೀಟ್‌ ಪ್ರಪೋಸ್‌ ಕಲ್ಪನೆಗೆ ಖುಷಿ ಪಟ್ಟಿದ್ದು ಮತ್ತು ಬ್ರಿಯಾನ್‌ಗೆ ಸಹಾಯ ಮಾಡಿದ್ದಕ್ಕಾಗಿ ಕ್ಯಾಬಿನ್ ಸಿಬ್ಬಂದಿಗೆ ಸಹ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ಯುನೈಟೆಡ್‌ ಏರ್‌ಲೈನ್ಸ್‌ಗೆ ಸ್ವತ: ಬ್ರಿಯಾನ್‌ ಅನ್ನು ತನ್ನ ಬಾಯ್‌ಫ್ರೆಂಡ್‌ ಆಗಿ ಒಪ್ಪಿಕೊಂಡ ಸ್ಟೆಫನಿ ಸಹ ಕಮೆಂಟ್‌ ಮಾಡಿದ್ದು, ಧನ್ಯವಾದ ಹೇಳಿದ್ದಾಳೆ.

ಈ ಕ್ಯೂಟ್‌ ಲವ್‌ ಸ್ಟೋರಿ ಹಾಗೂ ವಿಮಾನಯಾನ, ಅವರ ಸಿಬ್ಬಂದಿಯ ಸಹಾಯವನ್ನು ನೋಡಿ ನಿಮಗೂ ಖುಷಿಯಾಯಿತಲ್ಲವೇ..!