Asianet Suvarna News Asianet Suvarna News

ಬೈಕ್ ರಿವರ್ಸ್‌ ತೆಗೆಯುವಾಗ ಹೊಂಡಕ್ಕೆ ಬಿದ್ದ ಸವಾರ: ಭಯಾನಕ ದೃಶ್ಯ ಸಿಸಿಯಲ್ಲಿ ಸೆರೆ

ಯುವಕನೋರ್ವ ಬೈಕ್ ರಿವರ್ಸ್ ತೆಗೆಯಲು ಹೋಗಿ ಹಿಂದಿದ್ದ ಹೊಂಡಕ್ಕೆ ಬಿದ್ದಂತಹ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ.

Man fall into pit when he reversing his bike terrible video goes viral akb
Author
Bangalore, First Published Aug 10, 2022, 12:39 PM IST

ಅಪಘಾತ ಅನಾಹುತಗಳು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಹೇಳಲಾಗದು. ಧುತ್ತನೇ ಎದುರಾಗುವ ಹಲವು ಅನಾಹುತಗಳು ಜೀವವನ್ನು ಕ್ಷಣದಲ್ಲಿ ಎತ್ತಿಕೊಂಡು 
ಮನುಷ್ಯನನ್ನು ಶವವಾಗಿಸುತ್ತವೆ. ಅಂತಹ ಅನೇಕ ದೃಶ್ಯಗಳು ಇತ್ತೀಚೆಗೆ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಅದೇ ರೀತಿ ಈಗ ಯುವಕನೋರ್ವ ಬೈಕ್ ರಿವರ್ಸ್ ತೆಗೆಯಲು ಹೋಗಿ ಹಿಂದಿದ್ದ ಹೊಂಡಕ್ಕೆ ಬಿದ್ದಂತಹ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ. ಈ ವಿಡಿಯೋವನ್ನು 1.2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಆಘಾತ ವ್ಯಕ್ತಪಡಿಸಿದ್ದಾರೆ. 

ಕಟ್ಟಡವೊಂದರ ಮುಂಭಾಗದಲ್ಲಿ ವ್ಯಕ್ತಿಯೋರ್ವ ತನ್ನ ಬೈಕೊಂದನ್ನು ರಿವರ್ಸ್ ತೆಗೆಯುತ್ತಿದ್ದಾನೆ. ಈ ವೇಳೆ ಸಮೀಪದಲ್ಲೇ ದೊಡ್ಡದಾದ ಹೊಂಡವೊಂದಿದ್ದು, ಅದರೊಳಗೆ ಬೈಕ್‌ ಸಮೇತ ಚಾಲಕ ಅಚಾನಕ್ ಆಗಿ ಬಿದ್ದಿದ್ದು, ಈ ವಿಡಿಯೋ ನೋಡುಗರಲ್ಲಿ ಭಯ ಮೂಡಿಸುತ್ತಿದೆ. ಈ ವಿಡಿಯೋಗೆ 'ಭೂಮಿಯ ಕೇಂದ್ರಭಾಗಕ್ಕೆ ಪಯಣ' ಎಂದು ತಮಾಷೆಯಾಗಿ ಈ ವಿಡಿಯೋಗೆ ಕ್ಯಾಪ್ಷನ್‌ ನೀಡಲಾಗಿದೆ. 'ವೈ ಮೆನ್ ಲೀವ್‌ ಲೆಸ್' ಎಂಬ ಹೆಸರಿನ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 

 

ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾಕೆ ಆತ ಬೈಕ್ ಅನ್ನು ರಿವರ್ಸ್ ತೆಗೆಯುತ್ತಿದ್ದಾನೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದು ತಮಾಷಿ ಮಾಡುವ ವಿಷಯವಂತೂ ಅಲ್ಲ ಆತನಿಗೆ ಖಂಡಿತವಾಗಿ ಗಾಯಗಳಾಗಿವೆ. ಮೋಟಾರ್‌ ಸೈಕಲ್‌ಗಳು ಭಾರವಾಗಿರುತ್ತವೆ. ಈತ ಹೇಗೆ ಹೊರಗೆ ಬರುತ್ತಾನೆ ಎಂಬುದೇ ಅಚ್ಚರಿ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಕ್ಯಾಪ್ಷನ್ ನೀಡಿದಂತೆ ಈತ ಭೂಮಿಯ ಕೇಂದ್ರಭಾಗವನ್ನು ತಲುಪಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಎಲ್ಲಿಯದು ಎಂಬ ಉಲ್ಲೇಖವಿಲ್ಲ. ಅಲ್ಲದೇ ಹೊಂಡಕ್ಕೆ ಬಿದ್ದವನ ರಕ್ಷಿಸುತ್ತಿರುವ ದೃಶ್ಯಗಳು ಅಲ್ಲಿಲ್ಲ.

ಬೆಂಗಳೂರು: ವಕೀಲನ ಮೇಲೆ ಖಾಕಿ ದೌರ್ಜನ್ಯ, ಸಿಸಿಟಿವಿಯಲ್ಲಿ ಥಳಿತದ ದೃಶ್ಯ ಸೆರೆ

ತಲೆಮೇಲೆ ಬಿತ್ತು ತೆಂಗಿನಕಾಯಿ

ಬೈಕ್‌ ಮೇಲೆ ತೆರಳುತ್ತಿದ್ದ ಮಹಿಳೆ ಮೇಲೆ ತೆಂಗಿನಕಾಯಿ ಬಿದ್ದು, ಮಹಿಳೆ ಬೈಕ್‌ನಿಂದ ಕೆಳಗೆ ಬಿದ್ದ ಘಟನೆ ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದಿತ್ತು. ಈ ಆಘಾತಕಾರಿ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿ ಬಳಿಕ ವೈರಲ್ ಅಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ u/EmesZek ಎಂಬ ಖಾತೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಖಾಲಿ ರಸ್ತೆಯಲ್ಲಿ ವೇಗವಾಗಿ ಬೈಕ್ ಸಾಗುತ್ತಿದ್ದು, ಈ ವೇಳೆ ರಸ್ತೆ ಬದಿಯೇ ಇದ್ದ ತೆಂಗಿನ ಮರದಿಂದ ಕಾಯಿಯೊಂದು ಸೀದಾ ಬಂದು ಬೈಕ್‌ ಹಿಂಬದಿ ಕುಳಿತು ಚಲಿಸುತ್ತಿದ್ದ ಮಹಿಳೆಯ ತಲೆ ಮೇಲೆ ಬೀಳುತ್ತದೆ. ತೆಂಗಿನ ಕಾಯಿ ಬಿದ್ದ ರಭಸಕ್ಕೆ ಮಹಿಳೆ ಬೈಕ್‌ನಿಂದ ಕೆಳಗುರುಳಿದ್ದಾಳೆ. ಬೈಕ್ ಚಲಾಯಿಸುತ್ತಿದ್ದ ಮಹಿಳೆ ಸ್ವಲ್ಪ ಮುಂದೆ ಸಾಗಿ ಬೈಕ್ ನಿಲ್ಲಿಸಿ ಹಿಂದೆ ಬಂದು ಕೆಳಗೆ ಬಿದ್ದ ಮಹಿಳೆಯನ್ನು ಎಳಿಸಲು ಪ್ರಯತ್ನಿಸುತ್ತಾಳೆ. 

ಬೊಗಳಿತೆಂದು ನಾಯಿ ಹಾಗೂ ಮಾಲೀಕನ ಮೇಲೆ ಅಮಾನುಷ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ತೆಂಗಿನ ಕಾಯಿ ಬಿದ್ದ ರಭಸಕ್ಕೆ ಮಹಿಳೆ ಕೆಳಗೆ ಬಿದ್ದು ರಸ್ತೆಯಲ್ಲಿ ಉರುಳುತ್ತಿದ್ದರೆ, ಆಕೆಯ ತಲೆಯಲ್ಲಿದ್ದ ಹೆಲ್ಮೆಟ್ ಮತ್ತೊಂದು ಕಡೆ ಬಿದ್ದು ಉರುಳಿ ಹೋಗುತ್ತದೆ. ಈ ಬೈಕ್ ಹಿಂದೆಯೇ ಬಂದ ವಾಹನ ಸವಾರರು ಕೂಡಲೇ ತಮ್ಮ ವಾಹನಗಳನ್ನು ನಿಲ್ಲಿಸಿ ಮುಂದಾಗುತ್ತಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ತಮ್ಮ ವಾಹನವನ್ನು ನಿಲ್ಲಿಸಿ ಮಹಿಳೆಯ ನೆರವಿಗೆ ಧಾವಿಸುತ್ತಾರೆ. ಘಟನೆಯ ಬಳಿಕ ಮಹಿಳೆಯ ಪುತ್ರಿ ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ತೆಂಗಿನ ಕಾಯಿ ಬಿದ್ದು ಅಸ್ವಸ್ಥಳಾದ ಮಹಿಳೆಯ ಆರೋಗ್ಯ ಸ್ಥಿತಿಯ ವಿವರ ನೀಡಿದ್ದಾರೆ. ಮಹಿಳೆಯೂ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅನಾಹುತದಿಂದ ಪಾರಾಗಿದ್ದಾಳೆ ಎಂದು ಮಹಿಳೆಯ ಪುತ್ರಿ ಹೇಳಿದ್ದಾರೆ. 
 

Follow Us:
Download App:
  • android
  • ios