Asianet Suvarna News Asianet Suvarna News

ಹಸಿ ಈರುಳ್ಳಿ, ಬೆಳ್ಳುಳ್ಳಿ ತಿಂದ ಸೋಂಕಿತ ವ್ಯಕ್ತಿ: 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ!

ವಿಶ್ವವನ್ನೇ ಬಾಧಿಸಿದ ಕೊರೋನಾ| ಕೊರೋನಾ ತಗುಲಿದ್ರೆ ರುಚಿ, ವಾಸನೆ ಗ್ರಹಿಕೆ ಮಾಯ| ಕೊರೋನಾ ರುಚಿ ಗ್ರಹಿಕೆ ಹೇಗೆ ಕಸಿಯುತ್ತೆ? ಇಲ್ಲಿದೆ ವಿಡಿಯೋ

Man eats raw onion garlic and lime to show how COVID 19 affects sense of taste pod
Author
Bangalore, First Published Nov 17, 2020, 3:34 PM IST

ನವದೆಹಲಿ(ನ.17): ಕೊರೋನಾ ಮಹಾಮಾರಿ ವಿಶ್ವದೆಲ್ಲೆಡೆ ಲಕ್ಷಾಂತರ ಮಂದಿಯ ನಿದ್ದೆಗೆಡಿಸಿದೆ. ಕೆಲವರಿಗೆ ಇದು ಹೆಚ್ಚಿನ ಹಾನಿಯುಂಟು ಮಾಡದಿದ್ದರೂ, ಅನೇಕ ಮಂದಿ ಇದರಿಂದ ಭಾರೀ ಸಮಸ್ಯೆಗೀಡಾಗಿದ್ದರೆ. ಅನೇಕ ಮಂದಿ ಕೊರೋನಾ ಸೋಂಕು ತಗುಲಿದ ಬಳಿಕ ರುಚಿಯನ್ನೇ ಕಳೆದುಕೊಂಡಿದ್ದಾರೆ. ಸೋಂಕು ತಗುಲಿದ ಪರಿಣಾಮ ಏನೇ ತಿಂದರೂ ರುಚಿ ತಿಳಿಯುತ್ತಿಲ್ಲ, ಜೊತೆಗೆ ವಾಸನೆಯೂ ಸಿಗುತ್ತಿಲ್ಲ. ಹೀಗಿರುವಾಗ ವ್ಯಕ್ತಿಯೊಬ್ಬ ಹಸಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ತಿನ್ನುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಾಯ್ಲೆಟ್​ ನೀರಲ್ಲಿ ಪಾನಿ ಪೂರಿ ಮಾಡಿ ಮಾರುತ್ತಿದ್ದ ಭೂಪ ಸಿಕ್ಕಿಬಿದ್ದ..!

ಹೌದು ವ್ಯಕ್ತಿಯೊಬ್ಬನಿಗೆ ಕೊರೋನಾ ತಗುಲಿದ ಬಳಿಕ ಹೇಗೆ ಆತ ವಾಸನೆ ಹಾಗೂ ರುಚಿ ಗ್ರಹಿಕೆ ಕಳೆದುಕೊಳ್ಳುತ್ತಾನೆ ಎಂಬುವುದನ್ನು ವಿಡಿಯೋ ಮೂಲಕ ತೋರಿಸಲು ಯತ್ನಿಸಲಾಗಿದೆ. ಇದಕ್ಕಾಗಿ ಆತ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿಂದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.

30 ವರ್ಷದ ರಸೆಲ್ ಡಾನ್ಲಿ ಈರುಳ್ಳಿ, ಬೇಬಿ ಫುಡ್, ಸಾರ್ಡಿನ್(ಇದೊಂದು ಬಗೆಯ ಮೀನು) ಹಾಗೂ ಲಿಂಬೆ ಜ್ಯೂಸ್ ಕುಡಿದಿದ್ದಾನೆ. ಇವುಗಳ ರುಚಿ ಬಹಳಷ್ಟು ಸ್ಟ್ರಾಂಗ್ ಆಗಿರುತ್ತದೆ. ಹೀಗಿದ್ದರೂ ಇದನ್ನು ತಿಂದ ವ್ಯಕ್ತಿಯ ಮುಖದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಈ ಮೂಲಕ ಆತ ರುಚಿ ಗ್ರಹಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆಂಬುವುದು ಖಚಿತ. 

ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಿಸಲಾಗಿದೆ.  

Follow Us:
Download App:
  • android
  • ios