Asianet Suvarna News Asianet Suvarna News

ಕೆಣಕಲು ಬಂದವನ ಓಡಿಸಿದ ಹಸುಗಳು: ನೋಡಿ ವೈರಲ್ ವಿಡಿಯೋ

ಹಸುಗಳು ಓಡಿಸಿಕೊಂಡು ಬಂದ ರಭಸಕ್ಕೆ ವ್ಯಕ್ತಿಯೊಬ್ಬ ಹೆದರಿ ಪಲಾಯನಗೈಯುವ ವೇಳೆ ಕೆರೆಯೊಂದಕ್ಕೆ ಎಗರಿ ಬಿದ್ದಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Man chassed by cattles watch viral video akb
Author
Bangalore, First Published Aug 7, 2022, 4:05 PM IST

ಸಾಮಾನ್ಯವಾಗಿ ಪ್ರಾಣಿಗಳು ಕೆಣಕದ ಹೊರತು ಅವುಗಳೇ ಆಗಿ ಯಾರಿಗೂ ಏನನ್ನೂ ಮಾಡುವುದಿಲ್ಲ. ಆದರೆ ಕೆಲವು ಸಾಧು ಪ್ರಾಣಿಗಳು ಕೆಣಕಿದರು ಸುಮ್ಮನಿರುತ್ತವೆ. ಮತ್ತೆ ಕೆಲವು ಸರಿಯಾಗಿ ಬುದ್ದಿ ಕಲಿಸುತ್ತವೆ. ಸಾಮಾನ್ಯವಾಗಿ ಹಸುಗಳು ಸಾಧು ಪ್ರಾಣಿಗಳು ತುಳಿಯುವುದು ಒದೆಯುವುದು ಓಡಿಸಿಕೊಂಡು ಹೋಗುವುದು ತುಂಬಾ ವಿರಳ. ಆದರೆ ಇಲ್ಲೊಬ್ಬನನ್ನು ಮಾತ್ರ ಹಸುಗಳು ಓಡಿಸಿಕೊಂಡು ಬಂದಿವೆ. ಹಸುಗಳು ಓಡಿಸಿಕೊಂಡು ಬಂದ ರಭಸಕ್ಕೆ ಆತ ಹೆದರಿ ಪಲಾಯನಗೈಯುವ ವೇಳೆ ಕೆರೆಯೊಂದಕ್ಕೆ ಎಗರಿ ಬಿದ್ದಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಹುಲ್ಲುಗಾವಲೊಂದರಲ್ಲಿ ಹಸುಗಳು ಆರಾಮವಾಗಿ ತಮ್ಮ ಪಾಡಿಗೆ ತಾವು ಹುಲ್ಲು ಮೇಯುತ್ತಿರುತ್ತವೆ. ಅಲ್ಲಿಗೆ ಹೋದ ವ್ಯಕ್ತಿಯೊಬ್ಬ ಕರ್ಕಶವಾಗಿ ಸದ್ದು ಮಾಡುತ್ತಾ ಹಸುಗಳನ್ನು ಕೆಣಕಲು ನೋಡಿದ್ದಾನೆ. ಸ್ವಲ್ಪ ಕಾಲ ಇವನನ್ನೇ ನೋಡಿದ ಹಸುಗಳು ಆತನನ್ನು ಓಡಿಸಿಕೊಂಡು ಬಂದಿದ್ದು, ಹಸುಗಳು ತನ್ನತ್ತ ಬರುತ್ತಿದ್ದಂತೆ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೀಗೆ ಹಸುಗಳಿಂದ ತಪ್ಪಿಸಿಕೊಂಡು ಓಡುವ ರಭಸದಲ್ಲಿ ಆತ ಆಯ ತಪ್ಪಿ ಸಮೀಪದ ಕೆರೆಗೆ ಬಿದ್ದಿದ್ದು, ಕೂಡಲೇ ಅಲ್ಲಿಂದ ಎದ್ದು ಬಂದು ಪಾರಾಗಿದ್ದಾನೆ. 

ಡ್ರಗ್ ಪೆಡ್ಲರ್‌ಗಳ ಜೊತೆ ತಾನು ಪೊಲೀಸರಿಗೆ ಶರಣಾದ ಶ್ವಾನ..!

ಈ ಮಧ್ಯೆ ಎಲ್ಲೋ ಇದ್ದ ಪುಟ್ಟ ನಾಯಿಯೂ ಕೂಡ ಈತನೊಂದಿಗೆ ಪುಟ್ಟ ಹೆದರಿ ಓಡಿಕೊಂಡು ಬಂದಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಹಗ್‌ ಎಂಬ ಪೇಜ್‌ನಿಂದ ಪೋಸ್ಟ್‌ ಮಾಡಲಾಗಿದೆ. ಆತನ ಕಾಲಿಗಿಂತ ಮೊದಲು ದೇಹ ಓಡಲು ಶುರು ಮಾಡಿದಾಗ ಎಂದು ಈ ವಿಡಿಯೋಗೆ ಕ್ಯಾಪ್ಷನ್‌ ನೀಡಲಾಗಿದೆ. ಈ ವಿಡಿಯೋವನ್ನು 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ವಿಡಿಯೋ ನೋಡಿದವರು ಕೂಡ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಈತ ಹಸುಗಳಿಗೆ ಏನು ಹೇಳಿರಬಹುದು ಎಂದು ನೋಡುಗರು ಕೇಳುತ್ತಿದ್ದಾರೆ. ಅಲ್ಲದೇ ನಡುವಿನಲ್ಲಿ ಬಂದ ನಾಯಿ ಮರಿ ಅಷ್ಟೊತ್ತು ಎಲ್ಲಿತ್ತು ಎಂದು ಜನ ಪ್ರಶ್ನಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by ViralHog (@viralhog)

 

ಸಿಪಿಆರ್ ಮಾಡುವ ಶ್ವಾನ  

ಶ್ವಾನಗಳ ಹಲವು ಮುದ್ದಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಇತ್ತೀಚೆಗೆ ಶ್ವಾನಗಳನ್ನು ಸಾಕುವುದು ದೊಡ್ಡ ಟ್ರೆಂಡ್ ಆಗಿದೆ. ನಗರಗಳಲ್ಲಿರುವ ಯುವ ಸಮುದಾಯ ನಾಯಿಯ ಒಡನಾಟಕ್ಕೆ ಫಿದಾ ಆಗುತ್ತಿದ್ದು, ಹಲವು ಉತ್ತಮ ತಳಿಯ ಶ್ವಾನಗಳನ್ನು ಮನೆ ಮಕ್ಕಳಂತೆ ಸಾಕುತ್ತಿದ್ದಾರೆ. ಶ್ವಾನಗಳು ಆಟವಾಡುವ, ಮುದ್ದಾಡುವ ಹೇಳಿದ ಕೆಲಸ ಮಾಡುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೀವು ನೋಡಿರುತ್ತೀರಿ. ಶ್ವಾನಗಳಿಗೆ ಕೆಲಸ ಮಾಡಲು, ಆಟವಾಡಲು ಕಲಿಸುವುದು ಒಂದು ಕಲೆ. ಇತ್ತೀಚೆಗೆ ಭಾರತದಲ್ಲೂ ಪ್ರಮುಖ ನಗರಗಳಲ್ಲಿ ಶ್ವಾನಗಳದ್ದೇ ವಿಶೇಷ ತರಬೇತಿ ಕೇಂದ್ರಗಳಿವೆ. ಮರಿಗಳಿರುವಾಗಲೇ ಒಮ್ಮೆ ಶ್ವಾನಗಳಿಗೆ ತರಬೇತಿ ನೀಡಿದಲ್ಲಿ ಸಾಯುವವರೆಗೆ ಮರೆಯುವುದಿಲ್ಲ. 

ಚಿಕನ್ ಲೆಗ್ ಪೀಸ್ ಅಲ್ಲ, ಭಾರತದ ಈ ತಾಣದಲ್ಲಿ ಕಪ್ಪೆ ಲೆಗ್ ಪೀಸ್ ಸಖತ್ ಫೇಮಸ್

ಹಾಗೆಯೇ ಇಲ್ಲೊಬ್ಬರು ಶ್ವಾನಕ್ಕೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಹಸ್ಕಿ ತಳಿಯ ಶ್ವಾನವೊಂದಕ್ಕೆ ಅದರ ಮಾಲಕಿ ಸಿಪಿಆರ್ ತರಬೇತಿ ನೀಡುತ್ತಿದ್ದು ಅದರ ವಿಡಿಯೋ ವೈರಲ್ ಆಗಿದೆ. ಸಿಪಿಆರ್ ಆಪತ್ಕಾಲದಲ್ಲಿ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸುತ್ತದೆ. ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಇತ್ತೀಚೆಗೆ ಕೆಲ ಯುವಕರು ಯುವತಿಯರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೀಗಾಗಿ ಸಿಪಿಆರ್ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದೆ.  ಈ ಕಾರಣಕ್ಕೆ ಇಲ್ಲೊಬ್ಬರು ಮಹಿಳೆ ಶ್ವಾನಕ್ಕೆ ಉತ್ತಮವಾಗಿ ಸಿಪಿಆರ್ ತರಬೇತಿ ನೀಡುತ್ತಿದ್ದಾರೆ. ಶ್ವಾನವೂ ಕೂಡ ತನ್ನ ಮಾಲಕಿ ಹೇಳಿದಂತೆ ಸಿಪಿಆರ್ ತರಬೇತಿ ಪಡೆಯುವುದನ್ನು ಕಾಣಬಹುದು.

ಮೊದಲಿಗೆ ಶ್ವಾನ ಸಿಪಿಆರ್ ಮಾಡು ಎಂದರೆ ಜೋರಾಗಿ ತನ್ನ ಎರಡು ಮುಂಭಾಗದ ಕಾಲುಗಳಲ್ಲಿ ಕೆದಕಲು ಶುರು ಮಾಡುತ್ತದೆ. ಆದರೆ ಮಾಲಕಿ ಈ ರೀತಿ ಅಲ್ಲ. ಎರಡು ಕೈಗಳ ಮೇಲೆ ಭಾರ ಹಾಕಿ ಒತ್ತಬೇಕು ಎಂದು ಹೇಳುತ್ತಾಳೆ. ಶ್ವಾನವೂ ಕೂಡ ಅದೇ ರೀತಿ ಮಾಡಲು ಹೋಗುತ್ತದೆ. ಆದರೆ ಕೈಗಳಲ್ಲಿ ಸೆರೆಯಲು ಮಾಡುತ್ತದೆ. ಆಗ ಶ್ವಾನದ ಮಾಲಕಿ ನೋ ಇದು ನೀನು ಕೆರೆಯುತ್ತಿದ್ದೀಯಾ ಅದಲ್ಲ ಕೈಗಳಿಂದ ಜೋರಾಗಿ ಒತ್ತಬೇಕು ಎಂದು ಇಂಗ್ಲೀಷ್‌ನಲ್ಲಿ ಹೇಳುತ್ತದೆ. ಮಾಲೀಕಳ ಭಾಷೆಯನ್ನು ಸೊಗಸಾಗಿ ಅರ್ಥ ಮಾಡಿಕೊಳ್ಳುವ ಶ್ವಾನ ಕೊನೆಗೂ ಸಿಪಿಆರ್ ಮಾಡುವುದನ್ನು ಕಲಿಯುವಲ್ಲಿ ಯಶಸ್ವಿಯಾಗುತ್ತದೆ. ಶ್ವಾನ ಫೆಂಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
 

Follow Us:
Download App:
  • android
  • ios