Asianet Suvarna News Asianet Suvarna News

ಡ್ರಗ್ ಪೆಡ್ಲರ್‌ಗಳ ಜೊತೆ ತಾನು ಪೊಲೀಸರಿಗೆ ಶರಣಾದ ಶ್ವಾನ..!

ಶ್ವಾನವೊಂದು ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿ ತನ್ನ ಮಾಲೀಕರಂತೆ ತಾನು ಪೊಲೀಸರಿಗೆ ಶರಣಾಗಿದೆ. ನಾಯಿ ಏಕೆ ಪೊಲೀಸರಿಗೆ ಶರಣಾಯ್ತು, ಅಂತ ತಪ್ಪು ಏನಾಯ್ತು ಎಂಬ ಕುತೂಹಲನಾ ಹಾಗಿದ್ರೆ ಈ ಸ್ಟೋರಿ ಓದಿ.

drug gangs guard dog failed at its job surrender police in brazil akb
Author
Brazil, First Published Jul 31, 2022, 9:51 PM IST

ಶ್ವಾನವೊಂದು ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿ ತನ್ನ ಮಾಲೀಕರಂತೆ ತಾನು ಪೊಲೀಸರಿಗೆ ಶರಣಾಗಿದೆ. ನಾಯಿ ಏಕೆ ಪೊಲೀಸರಿಗೆ ಶರಣಾಯ್ತು, ಅಂತ ತಪ್ಪು ಏನಾಯ್ತು ಎಂಬ ಕುತೂಹಲನಾ ಹಾಗಿದ್ರೆ ಈ ಸ್ಟೋರಿ ಓದಿ. ಸಾಮಾನ್ಯವಾಗಿ ಶ್ವಾನಗಳನ್ನು ಮನೆಯನ್ನು ಕಾಯಲು, ಮನೆಗೆ ಯಾರಾದರೂ ಬಂದರೆ ಎಚ್ಚರಿಸುವ ಸಲುವಾಗಿ ಸಾಕುತ್ತಾರೆ. ಆದರೆ ಬ್ರೆಜಿಲ್‌ನಲ್ಲಿ ಶ್ವಾನವೊಂದು ನಿದ್ದೆಗೆ ಜಾರಿದ್ದು ಪರಿಣಾಮ ಮಾಲೀಕರು ಜೈಲು ಪಾಲಾಗುವಂತಾಗಿದೆ. 

ಈ ರಾಟ್‌ವಿಲ್ಹರ್ ತಳಿಯ ಶ್ವಾನವನ್ನು ಬ್ರೆಜಿಲ್‌ನ ಡ್ರಗ್‌ ಪೆಡ್ಲರ್‌ಗಳು ಸಾಕಿದ್ದರು. ಕಳ್ಳದಂಧೆಯಲ್ಲಿ ತೊಡಗಿದ್ದ ಕಾರಣ ಅವರು ಪೊಲೀಸರು ಬಂದಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಈ ಶ್ವಾನವನ್ನು ಸಾಕಿದ್ದರು. ಆದರೆ ಶ್ವಾನ ತನ್ನ ಮಾಲೀಕರೊಂದಿಗೆ ತಾನೂ ನಿದ್ರೆಗೆ ಜಾರಿದೆ. ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದ ಹೊರ್ಟೊಲಾಂಡಿಯಾದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮಾದಕ ವಸ್ತುಗಳ ವಿರುದ್ಧ ಬೃಹತ್ ಆದ ಕಾರ್ಯಾಚರಣೆಯನ್ನು ನಡೆಸಿ ಮೂವರು ಡ್ರಗ್ ಪೆಡ್ಲರ್‌ಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ 2 ವರ್ಷದ ಅಲೆಕ್ಸ್: ಸೇನಾ ಶ್ವಾನಕ್ಕೆ ಭಾವಪೂರ್ಣ ವಿದಾಯ

ಆದರೆ ಡ್ರಗ್‌ ಪೆಡ್ಲರುಗಳು ತಮ್ಮ ರಕ್ಷಣೆಗಾಗಿ ಸಾಕಿದ್ದ ಶ್ವಾನ ಮಾತ್ರ ಪೊಲೀಸರು ಬರುವ ವೇಳೆ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿದೆ. ನಾಯಿ ಸುಮ್ಮನಿದ್ದ ಪರಿಣಾಮ ಪೊಲೀಸರ ಕೆಲಸ ಸುಲಭವಾಗಿದೆ. ಇಲ್ಲಿ ಪೊಲೀಸರು ದೊಡ್ಡ ತಿಮಿಂಗಿಲವನ್ನೇ ಬಲೆಗೆ ಕೆಡವಿದ್ದಾರೆ. ಪೆಡ್ಲರ್‌ಗಳ ಜೊತೆ ಶ್ವಾನವೂ ಮಲಗಿರುವ ಫೋಟೋ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. 

ಇಲ್ಲಿ ಮೂವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ ಪೊಲೀಸರು ಮನೆಯಲ್ಲಿದ್ದ ಸುಮಾರು 1.1 ಟನ್ ಗಾಂಜಾ ಹೊಂದಿದ್ದ ಸುಮಾರು 1,176 ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಡ್ರಗ್‌ ಪೆಡ್ಲರ್‌ಗಳಿಗೆ ಕೈಕೋಳ ಅಳವಡಿಸಲಾಗಿದ್ದು, ಅವರು ನೆಲದ ಮೇಲೆ ಬಿದ್ದುಕೊಂಡಿದ್ದಾರೆ. ಇವರ ಪಕ್ಕದಲ್ಲೇ ಇವರು ತಮ್ಮ ರಕ್ಷಣೆಗಾಗಿ ಸಾಕಿದ ಶ್ವಾನ ನಿದ್ರೆಗೆ ಜಾರಿದೆ. 

ಟ್ರಾಫಿಕ್‌ನಲ್ಲಿ ಮಕ್ಕಳ ರಸ್ತೆ ದಾಟಿಸುತ್ತೆ ಈ ಶ್ವಾನ... ನೋಡಿ ವೈರಲ್ ವಿಡಿಯೋ

ನಾರ್ಕೋಟಿಕ್ಸ್ ಪೊಲೀಸರ ಪ್ರಕಾರ, ಈ ಭಾರೀ ಪ್ರಮಾಣದ ಡ್ರಗ್ಸ್‌ನ್ನು ಮ್ಯಾಟೊ ಗ್ರೊಸೊ ಡೊ ಸುಲ್ ರಾಜ್ಯದ ಕ್ಯಾಂಪೊ ಗ್ರಾಂಡೆಯಿಂದ ಹೊರ್ಟೊಲಾಂಡಿಯಾದ ಮನೆಗೆ ತರಲಾಗಿತ್ತು. ಇದನ್ನು ಸಾವೊ ಪಾಲೊ ರಾಜ್ಯದ ಕ್ಯಾಂಪಿನಾಸ್‌ನಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿತರಣೆಗೆ ಈ ಡ್ರಗ್‌ ಪೆಡ್ಲರ್‌ಗಳು ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ. ಇಲ್ಲಿಗೆ ಹತ್ತಿರದ ಅಮೇರಿಕಾನಾದಲ್ಲಿರುವ ನಾರ್ಕೋಟಿಕ್ಸ್ ಪೋಲೀಸ್ ಪ್ರಧಾನ ಕಚೇರಿಗೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ವೇಳೆ ಶ್ವಾನವನ್ನು ಬಂಧಿಸಿಲ್ಲ ಎಂದು ಶ್ವಾನ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮನೆ ಸುತ್ತ ಇರುವ ಜಮೀನನ್ನು ಹೊಂದಿದ್ದ ಮಹಿಳೆ ಪ್ರಸ್ತುತ ಆ ಶ್ವಾನವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios