ಚಿಕನ್ ಲೆಗ್ ಪೀಸ್ ಅಲ್ಲ, ಭಾರತದ ಈ ತಾಣದಲ್ಲಿ ಕಪ್ಪೆ ಲೆಗ್ ಪೀಸ್ ಸಖತ್ ಫೇಮಸ್
ನಮ್ಮ ದೇಶದಲ್ಲಿ ವಿವಿಧ ರೀತಿಯ ಆಹಾರಗಳಿವೆ. ದಕ್ಷಿಣದಲ್ಲಿ, ಇಡ್ಲಿ, ಸಾಂಬಾರ್, ದೋಸೆಗೆ ಆದ್ಯತೆ ನೀಡಲಾಗುತ್ತೆ, ಉತ್ತರ ಭಾರತದಲ್ಲಿ, ಚೋಲೆ, ಭತುರೆ ಮತ್ತು ಕುಲ್ಚ ತುಂಬಾನೇ ಫೇಮಸ್. ಹಾಗೆಯೇ ಭಾರತದ ದೂರದ ಪ್ರದೇಶಗಳಲ್ಲಿ, ಕೆಲವು ಬುಡಕಟ್ಟು ಜನಾಂಗದವರು ವಿಚಿತ್ರವಾದ ಆಹಾರ ಭಕ್ಷ್ಯಗಳನ್ನು ತಿನ್ನುತ್ತಾರೆ. ಅವುಗಳ ಬಗ್ಗೆ ಕೇಳಿದ್ರೆ ನಮಗೆ ವಾಕರಿಕೆ ಬರೋದು ಖಂಡಿತಾ. ಹಾಗಿದ್ರೆ ಅಂತಹ ಆಹಾರಗಳು ಯಾವುವು ನೋಡೋಣ.
ಕೆಲವೊಂದು ಆಹಾರಗಳನ್ನು ತಿನ್ನುವುದು, ಅದರ ಬಗ್ಗೆ ಕೇಳುವುದು, ನಮಗೆ ಅಯ್ಯೋ ಇದನ್ನೆಲ್ಲಾ ತಿಂತಾರಾ ಅನ್ನೋ ಭಾವನೆಯನ್ನು ಮೂಡಿಸುತ್ತೆ. ಆದ್ರೂ ಯಾರು ಏನು ಆಹಾರ ತಿನ್ನುತ್ತಾರೆ ಅನ್ನೋದನ್ನು ತಿಳ್ಕೊಳ್ಳುವ ಆಸಕ್ತಿ ಇದ್ದೆ ಇರುತ್ತೆ ಅಲ್ವಾ? ಇಂದು ನಾವು ಭಾರತದಲ್ಲಿ ಲಭ್ಯವಿರುವ ಅಂತಹ ಕೆಲವು ವಿಚಿತ್ರ ಭಕ್ಷ್ಯಗಳ ಬಗ್ಗೆ ನಿಮಗೆ ಹೇಳಲಿದ್ದೇವೆ. ಅವುಗಳ ಬಗ್ಗೆ ತಿಳಿಯೋಣ.
ಶಾರ್ಕ್ ಕರಿ
ಗೋವಾದಲ್ಲಿ ಸಾಕಷ್ಟು ವೈವಿಧ್ಯಮಯ ಸಮುದ್ರಾಹಾರಗಳು ಕಂಡುಬರುತ್ತವೆ. ಮೀನುಗಳಿಂದ ಸೀಗಡಿಗಳು ಮತ್ತು ಏಡಿಗಳನ್ನು ಸಹ ಇಲ್ಲಿ ತಿನ್ನಲಾಗುತ್ತದೆ. ಶಾರ್ಕ್ ಕರಿ (shark curry) ಸಹ ಗೋವಾದಲ್ಲಿ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ ? ಇದಕ್ಕಾಗಿ, ಶಾರ್ಕ್ ಮೀನಿನ ಮರಿಯನ್ನು ಬಳಸಲಾಗುತ್ತೆ ಮತ್ತು ಇದು ತುಂಬಾ ದುಬಾರಿ ಡಿಶ್ ಆಗಿದೆ ಮತ್ತು ಜನರು ಅದನ್ನು ತುಂಬಾನೆ ಎಂಜಾಯ್ ಮಾಡ್ತಾರೆ.
ಫ್ರಾಗ್ ಲೆಗ್ ಗ್ರೈಂಡಿಂಗ್
ಚಿಕನ್ ಲೆಗ್ ಪೀಸ್ ಗಳ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಜನರು ಚಿಕನ್ ನ ವಿವಿಧ ರೆಸಿಪಿ ಮಾಡಿ ತಿಂತಾರೆ. ಆದರೆ ಸಿಕ್ಕಿಂನಲ್ಲಿ, ಲೆಪ್ಚಾಸ್ ಸಮುದಾಯದ ಜನರು ಕಪ್ಪೆಯ ಲೆಗ್ ಹುರಿಯುವ ಮೂಲಕ ಅದನ್ನು ತಿನ್ನುತ್ತಾರೆ. ಇದು ಅತ್ಯಂತ ಟೇಸ್ಟಿ ಫುಡ್ ಎಂದು ಹೇಳಲಾಗುತ್ತೆ, ಇದು ಭೇದಿ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ತೊಡೆದುಹಾಕುತ್ತದೆ ಎನ್ನಲಾಗುತ್ತದೆ.
ಇರುವೆ ಚಟ್ನಿ
ಛತ್ತೀಸ್ ಗಢದಲ್ಲಿ, ಕೆಂಪು ಇರುವೆ ಮತ್ತು ಅದರ ಮೊಟ್ಟೆಗಳೊಂದಿಗೆ ಮಸಾಲೆಗಳನ್ನು ಸೇರಿಸುವ ಮೂಲಕ ಮಸಾಲೆಯುಕ್ತ ಚಟ್ನಿ ತಯಾರಿಸಲಾಗುತ್ತೆ ಮತ್ತು ಜನರು ಅದನ್ನು ತುಂಬಾನೆ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನು ಭಕ್ಷ್ಯವನ್ನು ಅಲಂಕರಿಸಲು ಸಹ ಬಳಸಲಾಗುತ್ತೆ.
ನಾಯಿ ಮಾಂಸ
ನಾಗಾಲ್ಯಾಂಡ್ ನಲ್ಲಿ, ನಾಯಿ ಮಾಂಸವನ್ನು (dog meat) ಅನೇಕ ಸ್ಥಳಗಳಲ್ಲಿ ಜನರು ಇಷ್ಟಪಟ್ಟು ಸೇವಿಸ್ತಾರೆ. ಇಷ್ಟೇ ಅಲ್ಲ, ಜೇಡ, ಹಂದಿಗಳು, ಗೋಮಾಂಸ ಮತ್ತು ಆನೆ ಮಾಂಸವನ್ನು ಸಹ ಇಲ್ಲಿ ತಿನ್ನಲಾಗುತ್ತೆ. ಇಲ್ಲಿನ ಬುಡಕಟ್ಟು ಜನಾಂಗದ ಜನರು ಸಹ ಅದನ್ನು ತಮ್ಮ ಮನೆಯಲ್ಲಿ ತಯಾರಿಸುತ್ತಾರೆ.
ಹಂದಿ ಸಲಾಡ್
ಹಂದಿಗಳನ್ನು ಹೆಚ್ಚಾಗಿ ವಿದೇಶದಲ್ಲಿ ತಿನ್ನಲಾಗುತ್ತದೆ. ಆದರೆ ಭಾರತದ ಮೇಘಾಲಯದಲ್ಲಿ, ದೋಹ್ ಖಲಿಹ್ ಎಂಬ ಹೆಸರಿನ ಈ ಭಕ್ಷ್ಯ ತುಂಬಾನೆ ಫೇಮಸ್ ಆಗಿದೆ ಮತ್ತು ಸಲಾಡ್ ಅನ್ನು ಹಂದಿಮಾಂಸ ಮತ್ತು ಈರುಳ್ಳಿಯಿಂದ ತಯಾರಿಸಲಾಗುತ್ತದೆ. ಅದೇ ಸಮಯದಲ್ಲಿ, ಅದರ ರುಚಿಯನ್ನು ಹೆಚ್ಚಿಸಲು ಜನರು ನಿಂಬೆ, ಟೊಮೆಟೊ ಮತ್ತು ಕ್ಯಾರೆಟ್ ಅನ್ನು ಸಹ ಬಳಸುತ್ತಾರೆ.
ರಕ್ತಸಿಕ್ತ ಅಕ್ಕಿ
ಹೌದು, ನೀವು ಯಾವಾಗಲೂ ನೀರಿನಲ್ಲಿ ಕುದಿಸಿದ ಅಕ್ಕಿಯನ್ನು ತಿಂದಿರಬೇಕು. ಆದರೆ ಮೇಘಾಲಯದ ಈಶಾನ್ಯ ಭಾಗದ ಜೈನ್ತಿಯಾ ಬುಡಕಟ್ಟು ಜನಾಂಗದಲ್ಲಿ, ಅಕ್ಕಿಯನ್ನು ಪ್ರಾಣಿಗಳ ರಕ್ತದಿಂದ ಬೇಯಿಸಲಾಗುತ್ತದೆ. ಅಲ್ಲದೆ, ಹಂದಿ ಮತ್ತು ಕೋಳಿ ಮಾಂಸವನ್ನು ಅದಕ್ಕೆ ಸೇರಿಸಲಾಗುತ್ತದೆ.