Asianet Suvarna News Asianet Suvarna News

ಹಿಂದೂ ಹಾಗೂ ಭಾರತೀಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಅಮೆರಿಕ ವ್ಯಕ್ತಿಯ ವಿಡಿಯೋ ವೈರಲ್!

ಗೂ ಮೂತ್ರದಲ್ಲಿ ಸ್ನಾನ ಮಾಡುವ ಹಿಂದೂಗಳು, ಭಾರತೀಯರು ಮೂರ್ಖರು, ಭಾರತೀಯರು ಜೋಕರ್ಸ್, ನಾನು ಬೀಫ್ ತಿನ್ನುತ್ತೇನೆ, ಬೀಫ್ ಆರ್ಡರ್ ಮಾಡಿದ್ದೇನೆ. ಹಿಂದೂಗಳು ಅಮರಿಕದಲ್ಲಿ ಬಂದು ತೆಲೆ ಎತ್ತುವಿರಾ ಎಂದು ಅಮರಿಕ ವ್ಯಕ್ತಿ ಹಿಂದೂ ವಿರೋಧಿ ಹಾಗೂ ಭಾರತೀಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
 

Man attacks hindu and Indians with offensive blasphemous words in california video goes viral ckm
Author
Bengaluru, First Published Aug 28, 2022, 5:00 PM IST

ಕ್ಯಾಲಿಫೋರ್ನಿಯಾ(ಆ.28):  ಹಿಂದೂ ವಿರೋಧಿ ಹೇಳಿಕೆ, ಭಾರತೀಯರ ನಿಂದನೆ ಮಾಡಿದ ಅಮೆರಿಕ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. ರೆಸ್ಟೋರೆಂಟ್ ಒಂದರಲ್ಲಿ ಫುಡ್ ಪಡೆಯಲು ಕ್ಯೂ ನಿಂತಿದ್ದ ವೇಳೆ ಅಮೆರಿಕ ವ್ಯಕ್ತಿ ಭಾರತೀಯ ನೋಡಿ ಕೆರಳಿ ಕೆಂಡವಾಗಿದ್ದಾನೆ. ಇಷ್ಟೇ ಅಲ್ಲ ಭಾರತೀಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಿಂದೂ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಕ್ಯಾಲಿಫೋರ್ನಿಯಾ ನಿವಾಸಿ ಕೃಷ್ಣನ್ ಜಯರಾಮನ್ ವಿಡಿಯೋ ಮಾಡಿದ್ದಾರೆ. ಇದೀಗ ಈ ವಿಡಿಯೋ ಅಮೆರಿಕಕದಲ್ಲಿ ಗಂಭೀರ ಸ್ವರೂಪ ಪಡೆದಿದೆ. ಈತನ ವಿರುದ್ದ ಕ್ರಮ ಕೈಗೊಳ್ಳಲು ಭಾರತೀಯ ಸಮುದಾಯ ಆಗ್ರಹಿಸಿದೆ. ವ್ಯಕ್ತಿಗಳನ್ನು ಸಮುದಾಯವನ್ನು ನಿಂದಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನಿಡಿಯಲ್ಲಿ ಕ್ರಮ ಕೈಗೊಳ್ಳಲು ಭಾರತೀಯ ಸಮುದಾಯ ಒತ್ತಾಯಿಸಿದೆ.

ಕ್ಯಾಲಿಫೋರ್ನಿಯಾದ ಟ್ಯಾಕೋ ಬೆಲ್ ರೆಸ್ಟೋರೆಂಟ್‌ನಲ್ಲಿ ಬುಕಿಂಗ್ ಮಾಡಿದ್ದ ಫುಡ್ ಪಾರ್ಸೆಲ್ ಪಡೆಯಲು ಹೋದ ಭಾರತ ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ಕೃಷ್ಣನ್ ಜಯರಾಮನ್‌ಗೆ ಆಚ್ಚರಿ ಎದುರಾಗಿದೆ. ಫುಡ್ ಪಾರ್ಸೆಲ್ ಪಡೆಯಲು ಕ್ಯೂನಲ್ಲಿ ನಿಂತಿದ್ದ ವೇಳೆ ಮುಂದೆ ಇದ್ದ ಅಮೆರಿಕ ವ್ಯಕ್ತಿ ಭಾರತೀಯರನ್ನು ನಿಂದಿಸಲು ಆರಂಭಿಸಿದ್ದಾರೆ. ಭಾರತೀಯರೆಲ್ಲಾ ಮೂರ್ಖರು. ಇದೇ ಕಾರಣಕ್ಕೆ ಬ್ರಿಟೀಷರ ಮುಂದೆ ತಲೆ ಬಾಗಿ ನಿಂತಿದ್ದ ನೀವು ಇದೀಗ ಅಮೆರಿಕದಲ್ಲಿ ತಲೆ ಎತ್ತಲು ಆರಂಭಿಸಿದ್ದೀರಾ? ಎಂದು ಭಾರತೀಯರ ವಿರುದ್ಧ ನಿಂದನೆ ಆರಂಭಿಸಿದ್ದಾನೆ.

ಟೆಕ್ಸಾಸ್‌ನಲ್ಲಿ ಭಾರತೀಯ ಮಹಿಳೆಯ ಮೇಲೆ ಜನಾಂಗೀಯ ನಿಂದನೆ, ಕಪಾಳಕ್ಕೆ ಬಾರಿಸಿ ಹಲ್ಲೆ!

ಮಾತು ಮಾತಿಗೂ ಇಂಡಿಯನ್ಸ್ ಥೂ ಎಂದು ರೆಸ್ಟೋರೆಂಟ್ ತುಂಬೆಲ್ಲಾ ಉಗುಳಿದ್ದಾನೆ. ನೀವು ಹಿಂದೂಗಳು ದನದ ಮೂತ್ರದಲ್ಲಿ ಸ್ನಾನ ಮಾಡುತ್ತೀರಿ.  ಇದಕ್ಕಿಂತ ದೊಡ್ಡ ಮೂರ್ಖರು ಯಾರಿದ್ದಾರೆ. ನಾವಿಲ್ಲಿ ದನದ ಮಾಂಸ(ಬೀಫ್) ತಿನ್ನುತ್ತಿದ್ದೇವೆ. ನಾನು ಬೀಫ್ ಆರ್ಡರ್ ಮಾಡಿದ್ದೇನೆ. ಭಾರತೀಯರಿಗೆ ಉರಿಯುತ್ತಿದೆಯಾ ಎಂದು ಪದೇ ಪದೆ ಕೇಳಿದ್ದಾನೆ. 

ಭಾರತೀಯರು ಹಾಗೂ ಹಿಂದೂಗಳು ಜೋಕರ್ಸ್. ನಿಮಗೆ ಸ್ವಂತಿಕೆ ಇಲ್ಲ. ಏನೂ ಹೇಳಿದರೂ ಜೈ ಹಿಂದ್, ಜೈ ಹಿಂದ್ ಹೇಳುತ್ತೀರಿ. ಇದನ್ನು ಬಿಟ್ಟರೆ ಬೇರೇನೂ ಬರುವುದಿಲ್ಲವೇ ಎಂದು ಅಮೆರಿಕ ವ್ಯಕ್ತಿ ಪದೆ ಪದೇ ಹೀಯಾಳಿಸಿದ್ದಾನೆ. ಇಷ್ಟೇ ಸುಮ್ಮನಾಗ ವ್ಯಕ್ತಿ ಮತ್ತೆ ಹಿಂದೂಗಳ ವಿರುದ್ಧ ಮುಗಿಬಿದ್ದಿದ್ದಾನೆ. ಈತ ವರ್ತನೆ ಸಂಪೂರ್ಣವಾಗಿ ಕೃಷ್ಣನ್ ಜಯರಾಮನ್ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

ಅಮೆರಿಕ ಟೂರಿಸ್ಟ್‌ ವೀಸಾಕ್ಕೆ ಭಾರೀ ಕ್ಯೂ: 2024ರವರೆಗೆ ಕಾಯಲೇಬೇಕು

ವಿಡಿಯೋದ ಕೊನೆಯಲ್ಲಿ ಭಾರತದ F**** ಪ್ರಧಾನಿ ಎಂದಿದ್ದಾನೆ. ಈತನ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯ ಸಮುದಾಯದ ಆಕ್ರೋಶ ಹೆಚ್ಚಾಗಿದೆ. ಈತನ ವಿರುದ್ಧ ಕ್ರಮಕ್ಕೆ ಆಗ್ರಹ ಹೆಚ್ಚಾಗಿದೆ. ಅಮೆರಿಕದ ಆರ್ಥಿಕತೆಯಲ್ಲಿ ಭಾರತೀಯ ನಿವಾಸಿಗಳ ಕೊಡುಗೆ ಎಷ್ಟಿದೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ಎಲ್ಲರನ್ನು ಸಮಾನರಂತೆ ಕಾಣಬೇಕು. ಈ ರೀತಿಯ ವರ್ತನೆ ಭಾರತೀಯ ಸಮುದಾಯವನ್ನು ಕೆರಳಸಲಿದೆ. ಅಂತಾರಾಷ್ಟ್ರೀಯ ಮಟದಲ್ಲಿ ಅಮೆರಿಕದ ಮಾನ ಹರಜಾಗಲಿದೆ. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಲಾಗಿದೆ.

Follow Us:
Download App:
  • android
  • ios