ಟೆಕ್ಸಾಸ್‌ನಲ್ಲಿ ಭಾರತೀಯ ಮಹಿಳೆಯ ಮೇಲೆ ಜನಾಂಗೀಯ ನಿಂದನೆ, ಕಪಾಳಕ್ಕೆ ಬಾರಿಸಿ ಹಲ್ಲೆ!
ಜಗತ್ತಿನಲ್ಲಾಗುವ ಮಾನವ ಹಕ್ಕುಗಳು, ಯುದ್ಧ ಪರಿಸ್ಥಿತಿಯ ಮೇಲೆ ಮೂಗು ತೂರಿಸುವ ಅಮೆರಿಕ, ತನ್ನದೇ ನೆಲದಲ್ಲಾಗುವ ಜನಾಂಗೀಯ ನಿಂದನೆಗಳ ಘಟನೆಗಳ ಕುರಿತಾಗಿ ಕಣ್ಮುಚ್ಚಿ ಕುಳಿತುಕೊಂಡಿದೆ. ಬುಧವಾರ ಅಮೆರಿಕದ ಪ್ಲಾನೋದಲ್ಲಿ ಇಂಥದ್ದೆ ಪ್ರಕರಣ ವರದಿಯಾಗಿದ್ದು, ಭಾರತೀಯ ಮೂಲದ ಮಹಿಳೆಯ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಲ್ಲದೆ, ಕೆನ್ನೆಗೆ ಬಾರಿಸಿ ಹಲ್ಲೆಯನ್ನೂ ಮಾಡಿದ್ದಾಳೆ.
ವಾಷಿಂಗ್ಟನ್ (ಆ. 26): ಅಮೆರಿಕದ ಟೆಕ್ಸಾಸ್ ನಲ್ಲಿ ಭಾರತೀಯ-ಅಮೆರಿಕನ್ ಮಹಿಳೆಯರ ಮೇಲೆ ಜನಾಂಗೀಯ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ಲಾನೋ ಡೌನ್‌ಟೌನ್‌ನಲ್ಲಿರುವ ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‌ನ ಹೊರಗೆ ನಾಲ್ಕು ಮಹಿಳೆಯರು ಇಂಡಿಯನ್ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ, ಮೆಕ್ಸಿಕನ್-ಅಮೆರಿಕನ್ ಮೂಲದ ಮಹಿಳೆಯೊಬ್ಬರು ಇವರ ಮೇಲೆ ಜನಾಂಗೀಯ ಟೀಕೆಗಳನ್ನು ಮತ್ತು ನಿಂದನೆಗಳನ್ನು ಮಾಡಿದ್ದಾರೆ. ಅಲ್ಲದೆ, ಭಾರತೀಯ ಮೂಲದ ಮಹಿಳೆಯೊಬ್ಬಳಿಗೆ ಕಪಾಳಮೋಕ್ಷವನ್ನೂ ಮಾಡಿದ್ದಾರೆ. ಘಟನೆ ಆಗಸ್ಟ್ 24 ರಂದು ನಡೆದಿದ್ದು, ಮಹಿಳೆಯನ್ನು ತಕ್ಷಣವೇ ಬಂದನ ಮಾಡಲಾಗಿದೆ. ನಿಮ್ಮಿಂದ ಇಡೀ ದೇಶ ಹಾಳಾಗಿದೆ ಎಂದು ಮೆಕ್ಸಿಕನ್ ಮೂಲದ ಅಮೆರಿಕನ್ ಮಹಿಳೆ, ಭಾರತೀಯ ಮೂಲದ ಮಹಿಲೆಗೆ ಟೀಕೆ ಮಾಡಿದ್ದು, ನೀವೆಲ್ಲಾ ವಾಪಸ್ ಭಾರತಕ್ಕೆ ಹೋಗಿ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಮೆಕ್ಸಿಕನ್ ಮೂಲದ ಅಮೆರಿಕನ್ ಮಹಿಳೆಯ ಬಂಧನ ಮಾಡಲಾಗಿದೆ.ರೆಸ್ಟೋರೆಂಟ್‌ನ ಹೊರಗಡೆ ನಿಂತಿರುವ ಮಹಿಳೆಯರ ಬಳಿ ಬರುವ ಮೆಕ್ಸಿಕನ್ ಮೂಲದ ಮಹಿಳೆ, ನಿಮ್ಮಿಂದಾಗಿ ಇಡೀ ಅಮೆರಿಕ ದೇಶವೇ ಹಾಳಾಗಿದೆ ಎಂದು ಟೀಕೆ ಮಾಡುತ್ತಾರೆ ಇದನ್ನು ವಿಡಿಯೋದಲ್ಲಿ ಕೂಡ ಕಾಣಬಹುದಾಗಿದೆ.
ಭಾರತೀಯ ಮೂಲದ ಮಹಿಳೆಯಯರ ಗುಂಪಿನ ಕಡೆ ಬರುವ ವಿದೇಶಿ ಮಹಿಳೆ, 'ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ದೇಶದಲ್ಲಿ ಎಲ್ಲೇ ಹೋದರು ನೀವು ಕಾಣುತ್ತೀರಿ. ನಿಮಗೆಲ್ಲ ಐಷಾರಾಮಿ ಜೀವನ ಬೇಕು ಅದಕ್ಕಾಗಿ ನೀವೆಲ್ಲಾ ಈ ದೇಶಕ್ಕೆ ಬಂದಿದ್ದೀರಿ. ನಿಮ್ಮಂಥ ಜನರಿಂದಲೇ ಇಂದು ಇಡೀ ಅಮೆರಿಕ ದೇಶ ಹಾಳಾಗಿದೆ. ನೀವೆಲ್ಲರೂ ವಾಪಾಸ್ ನಿಮ್ಮ ದೇಶವಾದ ಭಾರತಕ್ಕೆ ತೆರಳಿ, ಈ ದೇಶಕ್ಕೆ ನಿಮ್ಮ ಅಗತ್ಯವಿಲ್ಲ' ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ.
ಆಕೆಯ ಮಾತಿಗೆ ಭಾರತೀಯ ಮಹಿಳೆಯರು ಪ್ರತಿಕ್ರಿಯಿಸಿದಾಗ, ಆರೋಪಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಲಾಗಿದೆ. ವೀಡಿಯೊದ ಜೊತೆಗೆ, ಮಹಿಳೆ ಬರೆದುಕೊಂಡಿದ್ದು, 'ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಭೋಜನಕ್ಕೆ ತೆರಳಿದ್ದೆ. ಆದರೆ, ಇದು ಭಯಾನಕ ಅನುಭವದೊಂದಿಗೆ ಕೊನೆಯಾಗಿದೆ. ನಾವು ರೆಸ್ಟೋರೆಂಟ್‌ನಿಂದ ಹೊರಟು ನಮ್ಮ ಕಾರಿನ ಕಡೆಗೆ ಹೋಗುತ್ತಿರುವಾಗ, ಒಬ್ಬ ಪಾನಮತ್ತಳಾಗಿದ್ದ ಮಹಿಳೆ ನಮ್ಮ ಬಳಿಗೆ ಬಂದಿದ್ದಳು. ಅವಳು ಬಹಳ ಕೋಪದಲ್ಲಿದ್ದಳು. ಅವರು ನಮ್ಮ ಸ್ನೇಹಿತರ ಮೇಲೆ ಜಾತಿವಾದಿ ಟೀಕೆಗಳನ್ನು ಮಾಡಿದರು ಮತ್ತು ನಮ್ಮ ಮೇಲೆ ದೈಹಿಕವಾಗಿ ಹಲ್ಲೆಯನ್ನೂ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ಮಹಿಳೆಯನ್ನು ಬಂಧಿಸಿರುವ ಪೊಲೀಸರು: ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಮಹಿಳೆಯನ್ನು ಬಂದನ ಮಾಡಲಾಗಿದೆ. ಆಗಸ್ಟ್ 24 ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಪ್ಲಾನೋ ಪೊಲೀಸರು ಆರೋಪಿ ಮಹಿಳೆಯನ್ನು ಆಗಸ್ಟ್ 25 ರಂದು ಬಂಧಿಸಿದ್ದಾರೆ. ಮಹಿಳೆ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ. ಜಾಮೀನಿಗಾಗಿ ಅವರು 10,000 ಅಮೆರಿಕನ್ ಡಾಲರ್ ಬಾಂಡ್ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಪ್ಲಾನೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ರೀಮಾ ರಸೂಲ್ ಎನ್ನುವ ಮಹಿಳೆ, 'ಈ ಘಟನೆ ನಡೆದಿರುವುದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ. ನನ್ನ ತಾಯಿ ಹಾಗೂ ಆಕೆಯ ಮೂವರು ಸ್ನೇಹಿತೆಯರು ರೆಸ್ಟೋರೆಂಟ್‌ನಲ್ಲಿ ಭೋಜನಕ್ಕೆ ತೆರಳಿದ್ದರು' ಎಂದು ಬರೆದುಕೊಂಡಿದ್ದರು. ಮೆಕ್ಸಿಕನ್-ಅಮೆರಿಕನ್ ಮಹಿಳೆ ಮಾಡಿದ ವಾದಗಳನ್ನು ತಾಯಿ ವಿರೋಧಿಸುತ್ತಿದ್ದಾರೆ. ಜನಾಂಗೀಯ ನಿಂದನೆಗಳನ್ನು ಮಾಡದಂತೆ ದಾಳಿಕೋರನನ್ನು ವಿನಂತಿಸುತ್ತಿರುವುದನ್ನು ಕಾಣಬಹುದು. "ಇದು ತುಂಬಾ ಭಯಾನಕವಾಗಿದೆ. ಅವರು ನಿಜವಾಗಿಯೂ ಗನ್ ಹೊಂದಿದ್ದರು ಮತ್ತು ಶೂಟ್ ಮಾಡಲು ಬಯಸಿದ್ದರು ಏಕೆಂದರೆ ಈ ಭಾರತೀಯ-ಅಮೆರಿಕನ್ ಮಹಿಳೆಯರು ಇಂಗ್ಲಿಷ್ ಮಾತನಾಡುವಾಗ ಉಚ್ಚಾರಣೆಯನ್ನು ಹೊಂದಿದ್ದರು. ಅಸಹ್ಯಕರ. ಈ ಭೀಕರ ಮಹಿಳೆ ದ್ವೇಷದ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಬೇಕಾಗಿದೆ" ಎಂದು ರೀಮಾ ರಸೂಲ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.