* ಲಂಡನ್‌ನಲ್ಲಿ ಪಶ್ಚಿಮ ಬಂಗಾಳದ ಕಂಪು* ಬಂಗಾಳಿ ಭಾಷೆಯಲ್ಲಿ ರಾರಾಜಿಸಿದ ಸೈನ್‌ಬೋರ್ಡ್‌* ಲಂಡನ್‌ನ ಟ್ಯೂಬ್ ರೈಲ್ ಪ್ರಾಜೆಕ್ಟ್‌ನ ವೈಟ್‌ಚಾಪಲ್ ನಿಲ್ದಾಣದ ಬೋರ್ಡ್ ನೋಡಿದ್ದೀರೇನು?

ಲಂಡನ್(ಮಾ.16): ಭಾರತದ ಜತೆಗೆ ಪಶ್ಚಿಮ ಬಂಗಾಳದ ಜಾದೂ ವಿದೇಶಗಳಲ್ಲೂ ಹಬ್ಬುತ್ತಿದೆ. ಲಂಡನ್‌ನ ಟ್ಯೂಬ್ ರೈಲ್ ಪ್ರಾಜೆಕ್ಟ್‌ನ ವೈಟ್‌ಚಾಪಲ್ ನಿಲ್ದಾಣವನ್ನು ಗುರುತಿಸುವ ಸಲುವಾಗಿ ಹಾಕಲಾದ ಸೈನ್‌ಬೋರ್ಡ್‌ನಲ್ಲಿ ಈಗ ನಿಲ್ದಾಣದ ಹೆಸರಿನ್ನು ಇಂಗ್ಲಿಷ್ ಭಾಷೆಯಲ್ಲಿ ಮತ್ತು ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ. ಈ ಸುದ್ದಿಯ ಚರ್ಚೆಗಳು ಈಗ ಭಾರತದಿಂದ ಬಾಂಗ್ಲಾದೇಶದವರೆಗೆ ನಡೆಯುತ್ತಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ರಾಜ್ಯ ಸಚಿವ ಜುನೈದ್ ಅಹ್ಮದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋದಲ್ಲಿ, ಯುನೈಟೆಡ್ ಕಿಂಗ್‌ಡಂನ ಲಂಡನ್‌ನ ವೈಟ್‌ಚಾಪೆಲ್ ಪ್ರದೇಶದ ವೈಟ್‌ಚಾಪಲ್ ರಸ್ತೆ ಮತ್ತು ಡರ್ವರ್ಡ್ ಸ್ಟ್ರೀಟ್‌ನಲ್ಲಿರುವ ಲಂಡನ್ ಅಂಡರ್‌ಗ್ರೌಂಡ್ ಮತ್ತು ಲಂಡನ್ ಓವರ್‌ಗ್ರೌಂಡ್ ಸ್ಟೇಷನ್‌ಗಳ ಸೈನ್‌ಬೋರ್ಡ್ ಬಂಗಾಳಿ ಭಾಷೆಯಲ್ಲಿರುವುದನ್ನು ನೋಡಬಹುದು.

ವೈಟ್‌ಚಾಪಲ್ ನಿಲ್ದಾಣವು ಅದೇ ಹೆಸರಿನ ರಸ್ತೆ ಮಾರುಕಟ್ಟೆಯ ಹಿಂದೆ ಮತ್ತು ರಾಯಲ್ ಲಂಡನ್ ಆಸ್ಪತ್ರೆಯ ಮುಂಭಾಗದಲ್ಲಿದೆ ಎಂಬುವುದು ಉಲ್ಲೇಖನೀಯ. ಇದು ಡಿಸ್ಟ್ರಿಕ್ಟ್ ಮತ್ತು ಹ್ಯಾಮರ್ಸ್ಮಿತ್ ಮತ್ತು ಸಿಟಿ ಲೈನ್‌ಗಳಲ್ಲಿ ಆಲ್ಡ್‌ಗೇಟ್ ಈಸ್ಟ್ ಮತ್ತು ಸ್ಟೆಪ್ನಿ ಗ್ರೀನ್ ಸ್ಟೇಷನ್‌ಗಳ ನಡುವೆ ಮತ್ತು ಪೂರ್ವ ಲಂಡನ್ ಲೈನ್‌ನಲ್ಲಿ ಶೋರೆಡಿಚ್ ಹೈ ಸ್ಟ್ರೀಟ್ ಮತ್ತು ಶಾಡ್‌ವೆಲ್ ನಿಲ್ದಾಣಗಳ ನಡುವೆ ಇದೆ.

Election Result ಗೋವಾದಲ್ಲಿ ಟಿಎಂಸಿ ಸ್ಥಾಪಿಸಿದ 3 ತಿಂಗಳಿಗೆ ಶೇ.6ರಷ್ಟು ಮತಗಳಿಕೆ, ನಮಗಿಷ್ಟು ಸಾಕು ಎಂದ ದೀದಿ!

Scroll to load tweet…

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ "ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ವಿಜಯ" ದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, ಲಂಡನ್ ಟ್ಯೂಬ್ ರೈಲು ವೈಟ್‌ಚಾಪಲ್ ನಿಲ್ದಾಣದಲ್ಲಿ ಸೈನ್‌ಬೋರ್ಡ್‌ಗಳಿಗೆ ಬೆಂಗಾಲಿಯನ್ನು ಭಾಷೆಯಾಗಿ ಸ್ವೀಕರಿಸಿದೆ ಎಂದಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದಿದ್ದು, "ಲಂಡನ್ ಟ್ಯೂಬ್ ರೈಲ್ ಬೆಂಗಾಲಿಯನ್ನು ವೈಟ್‌ಚಾಪಲ್ ನಿಲ್ದಾಣದಲ್ಲಿ ಸಂಕೇತಗಳ ಭಾಷೆಯಾಗಿ ಸ್ವೀಕರಿಸಿದೆ ಎಂದು ತಿಳಿಸಲು ಹೆಮ್ಮೆಪಡುತ್ತೇನೆ, ಇದು 1000 ವರ್ಷಗಳಷ್ಟು ಹಳೆಯ ಭಾಷೆಯಾದ ಬಂಗಾಳಿ (sic) ಯ ಜಾಗತಿಕ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ." ." "ಬಂಗಾಳಿ ಪ್ರಬುದ್ಧ ವರ್ಗವು ಹಂಚಿಕೊಂಡ ಸಾಂಸ್ಕೃತಿಕ ದಿಕ್ಕುಗಳಲ್ಲಿ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಅವರು ಹೇಳಿದ್ದಾರೆ. ಲಂಡನ್‌ನ ಆಡಳಿತಾಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರಕ್ಕೆ ಹೆಮ್ಮೆಯಾಗುತ್ತಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರಪಂಚದಲ್ಲಿ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ಭಾಷೆಯ ಸ್ಥಾನಮಾನ ಮತ್ತು ಪ್ರಾಮುಖ್ಯತೆ ಪ್ರಪಂಚದಾದ್ಯಂತ ಹೆಚ್ಚಿದೆ ಎಂಬುದನ್ನು ಇದು ತೋರಿಸುತ್ತದೆ.

Assembly Elections Result: ಇವಿಎಂ ದುರ್ಬಳಕೆಯಾಗಿದೆ: ವಿಧಿವಿಜ್ಞಾನ ಪರೀಕ್ಷೆ ನಡೆಯಲಿ: ಮಮತಾ ಬ್ಯಾನರ್ಜಿ!

Scroll to load tweet…

ಹೀಗಿರುವಾಗಲೇ ಅತ್ತ ಸಿಟಿ ಮೇಯರ್ ಜಾನ್ ಬಿಗ್ಸ್ ತಮ್ಮ ಟ್ವೀಟ್‌ನಲ್ಲಿ ವೈಟ್‌ಚಾಪೆಲ್ ನಿಲ್ದಾಣದಲ್ಲಿ ಈಗ ಇಂಗ್ಲಿಷ್ ಮತ್ತು ಬಂಗಾಳಿ ಹೀಗೆ ದ್ವಿಭಾಷಾ ಚಿಹ್ನೆಗಳನ್ನು ನೋಡಲು ಖುಷಿಯಾಗುತ್ತಿದೆ ಎಂದಿದ್ದಾರೆ.