ಕೇಪ್‌ಟೌನ್[ಫೆ.05]: 'ದ ಲಯನ್ ಕಿಂಗ್' ಸಿನಿಮಾದಲ್ಲಿ, ಬೇಬಿ ಸಿಂಬಾನನ್ನು ರಾಕಿಫೀ ಹೆಸರಿನ ಲಂಗೂರ್ ಒಂದು ಅದರ ತಾಯಿಒ ಮಡಿಲಿನಿಂದ ಹೊತ್ತೊಯ್ದು ಬೆಟ್ಟದ ತುದಿಯಲ್ಲಿ ನಿಂತು ಕಾಡಿನ ಪ್ರಾಣಿಗಳಿಗೆ ಅದನ್ನು ಪರಿಚಯಿಸುವ ದೃಶ್ುಯ ನಿಮಗೆ ನೆನಪಿರಬಹುದು. ಇಂತಹುದೇ ರಿಯಲ್ ದೃಶ್ಯವೊಂದು ಸದ್ಯ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಂಡು ಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಕದ್ದಿದೆ.

ಹೌದು ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್‌ನಲ್ಲಿ ಕಂಡು ಬಂದ ನೈಜ ಘಟನೆಯ ವಿಡಿಯೋ ಇದಾಗಿದ್ದು, ಲಂಗೂರ್ ಒಂದು ಸಿಂಹದ ಮರಿಯನ್ನು ಹೊತ್ತು ಮರದಿಂದ ಮರಕ್ಕೆ ಜಿಗಿಯುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ. ಯೂ ಟ್ಯೂಬರ್ ಕರ್ಟ್ ಶುಲ್ಸ್ ಎಂಬವರಿ 2020ರ ಫೆಬ್ರವರಿ 1 ರಂದು ಶೇರ್ ಮಾಡಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಕರ್ಟ್ 'ಮೀಟಿಂಗ್‌ಗಿಂತ ಮೊದಲು ನಾನು ಫೋಟೋಗ್ರಫಿ ಮಾಡಲು ಕ್ರೂಗರ್ ಪಾರ್ಕ್‌ಗೆ ತೆರಳುವ ನಿರ್ಧಾರ ತೆಗೆದುಕೊಂಡೆ. ಇದು ನನ್ನ ಹವ್ಯಾಸ ಕೂಡಾ ಹೌದು' ಎಂದು ಬರೆದಿದ್ದಾರೆ.

ಇದೇ ವೇಳೆ ಅವರು ಈ ಘಟನೆ ಕುರಿತಾಗಿಯೂ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಸಿಂಬಾನನ್ನು ಜಿಗಿಯುತ್ತಿದ್ದ ಲಂಗೂರ್ ದೃಶ್ಯವನ್ನೇ ನೆನಪಿಸಿದೆ.