ನವದೆಹಲಿ(ಫೆ.02): ಕರೋನಾ ವೈರಸ್ ಭೀತಿ ಎದುರಿಸುತ್ತಿರುವ ಚೀನಾದಿಂದ ಮಾಲ್ಡೀವ್ಸ್ ಪ್ರಜೆಗಳನ್ನು ಭಾರತ ರಕ್ಷಿಸಿದ್ದು, ಇದಕ್ಕಾಗಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹ್ಮದ್ ಸೋಲಿಹ್ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

ಚೀನಾದ ವುಹಾನ್’ನಿಂದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನದಲ್ಲಿ ನವದೆಹಲಿಗೆ ಬಂದಿಳಿದ  324 ಜನರ ಪೈಕಿ 7 ಜನ ಮಾಲ್ಡೀವ್ಸ್ ಪ್ರಜೆಗಳಾಗಿದ್ದಾರೆ.

ತನ್ನ ಪ್ರಜೆಗಳನ್ನು ರಕ್ಷಿಸಿದ ಭಾರತಕ್ಕೆ ಧನ್ಯವಾದ ಸಲ್ಲಿಸುವುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹ್ಮದ್ ಸೋಲಿಹ್ ಟ್ವೀಟ್ ಮಾಡಿದ್ದಾರೆ.

ಚೀನಿ ನಾಗರಿಕರಿಗೆ ತಾತ್ಕಾಲಿಕವಾಗಿ ಆನ್‌ಲೈನ್ ವೀಸಾ ನಿರಾಕರಿಸಿದ ಭಾರತ!

ಕರೋನಾ ವೈರಸ್ ಪೀಡಿತ ಚೀನಾದ ವುಹಾನ್’ನಲ್ಲಿ ಅಪಾಯಕ್ಕೆ ಸಿಲುಕಿದ್ದ ಮಾಲ್ಡೀವ್ಸ್ ಪ್ರಜೆಗಳನ್ನು ಸುರಕ್ಷಿತ ಸ್ಶಳಕ್ಕೆ ರವಾನಿಸಿರುವ ಭಾರತಕ್ಕೆ ಧನ್ಯವಾದ ೆಂಧು ಸೋಲಿಹ್ ಟ್ವೀಟ್ ಮಾಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಸೋಲಿಹ್ ಹೇಳಿದ್ದಾರೆ.

ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!

ಭಾರತದ ಈ ಕಾರ್ಯ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸೌಹಾರ್ಧ ಸಂಬಂಧಕ್ಕೆ ಉದಾಹರಣೆಯಾಗಿದೆ ಎಂದು ಸೋಲಿಹ್ ಸಂತಸ ವ್ಯಕ್ತಪಡಿಸಿದ್ದಾರೆ.