ಚೀನಿ ನಾಗರಿಕರಿಗೆ ತಾತ್ಕಾಲಿಕವಾಗಿ ಆನ್‌ಲೈನ್ ವೀಸಾ ನಿರಾಕರಿಸಿದ ಭಾರತ!
ಕೊರೋನಾ ವೈರಸ್’ನಿಂದ ನಲುಗಿರುವ ಚೀನಾ| ಚೀನಾದ ನಾಗರಿಕರಿಗೆ ಆನ್’ಲೈನ್ ವೀಸಾ ಸೌಲಭ್ಯ ರದ್ದು| ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟನೆ| ತಾತ್ಕಾಲಿಕವಾಗಿ ಆನ್’ಲೈನ್ ವೀಸಾ ನಿರಾಕರಿಸಿದ ಭಾರತ| ಈಗಾಗಲೇ ಇ-ವೀಸಾ ಪಡೆದಿರುವ ಈ ನಾಗರಿಕರಿಗೂ ಭಾರತ ಪ್ರವೇಶ ನಿರಾಕರಣೆ|
ನವದೆಹಲಿ(ಫೆ.02): ಕೊರೋನಾ ವೈರಸ್’ನಿಂದ ನಲುಗಿರುವ ಚೀನಾದ ನಾಗರಿಕರಿಗೆ ಆನ್’ಲೈನ್ ವೀಸಾ ಸೌಲಭ್ಯವನ್ನು ಭಾರತ ತಾತ್ಕಾಲಿಕವಾಗಿ ರದ್ದಗೊಳಿಸಿದೆ.
ಚೀನಾದಲ್ಲಿ ಕೊರೋನಾ ವೈರಸ್ ಭೀತಿ ಕಡಿಮೆಯಾಗುವವರೆಗೂ ಚೀನಾದ ನಾಗರಿಕರಿಗೆ ಆನ್’ಲೈನ್ ವೀಸಾ ಸೌಲಭ್ಯ ರದ್ದುಗೊಳಿಸಲಾಗಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!
ವುಹಾನ್’ನಲ್ಲಿರುವ ಭಾರತೀಯರನ್ನು ಈಗಾಗಲೇ ಸ್ಥಳಾಂತರಿಸಲಾಗಿದ್ದು, ಅವರನ್ನು ಆರೋಗ್ಯ ಶಿಬಿರದಲ್ಲಿರಿಸಿ ತಪಾಸಣೆ ಮಾಡಲಾಗುತ್ತಿದೆ.
ಅದರಂತೆ ಕೊರೋನಾ ವೈರಸ್ ದೇಶಕ್ಕೆ ಹರಡದಿರುವಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಿರುವ ಭಾರತ, ಚೀನಿ ನಾಗರಿಕರಿಗೆ ತಾತ್ಕಾಲಿಕವಾಗಿ ಆನ್’ಲೈನ್ ವೀಸಾ ರದ್ದುಗೊಳಿಸಿದೆ.
ಚೀನಾದ ಪಾಸ್’ಪೋರ್ಟ್ ಹೊಂದಿರುವ ಹಾಗೂ ಚೀನಾದಲ್ಲಿ ವಾಸಿಸುತ್ತಿರುವ ಇತರ ವಿದೇಶಿ ಪ್ರಜೆಗಳಿಗೆ ತಾತ್ಕಾಲಿಕವಾಗಿ ಆನ್’ಲೈನ್ ವೀಸಾ ನಿರಾಕರಿಸಲಾಗಿದೆ.
20 ದೇಶಕ್ಕೆ ಹಬ್ಬಿದ ಕೊರೋನಾ ವೈರಸ್: ವಿಶ್ವಾದ್ಯಂತ ಆರೋಗ್ಯ ತುರ್ತು ಸ್ಥಿತಿ!
ಅಲ್ಲದೇ ಈಗಾಗಲೇ ಇ-ವೀಸಾ ಪಡೆದಿರುವ ಈ ನಾಗರಿಕರಿಗೂ ಭಾರತ ಪ್ರವೇಶ ನಿರಾಕರಿಸಲಾಗಿದೆ. ಕೊರೋನಾ ವೈರಸ್ ದೇಶಕ್ಕೆ ಹರಡದಿರುವಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.