ಪ್ಯಾರಿಸ್(ಏ.24): 36 ವರ್ಷದ ಇಸ್ಲಾಮಿಸ್ಟ್ ಉಗ್ರ ಮಹಿಳಾ ಪೊಲೀಸ್ ಅಧಿಕಾರಿಯನ್ನು ಇರಿದು ಕೊಂದಿರುವ ಘಟನೆ ಪ್ಯಾರಿಸ್‌ನಲ್ಲಿ ನಡೆದಿದೆ. ಫ್ರಾನ್ಸ್‌ನ ಪ್ಯಾರಿಸ್ ಕಮ್ಯೂಟರ್ ನಗರದಲ್ಲಿ ಘಟನೆ ನಡೆದಿದೆ.

ಇದೀಗ ಘಟನೆ ಬಗ್ಗೆ ಉಗ್ರಗಾಮಿ ವಿರೋಧಿ ತನಿಖಾ ಕಾರ್ಯಾಚರಣೆ ನಡೆಯುತ್ತಿದೆ. ಫ್ರಾನ್ಸ್ ಎಂದಿಗೂ ಇಸ್ಲಾಮಿಸ್ಟ್ ಉಗ್ರಗಾಮಿ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ತಿಳಿಸಿದ್ದಾರೆ. 

ಪಾಕ್‌ನಿಂದ ಭಾರತಕ್ಕೆ 50 ಆಂಬುಲೆನ್ಸ್ ನೆರವು..!

ಇಸ್ಲಾಮಿಸ್ಟ್ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ನಾವು ಎಂದಿಗೂ ಕೈಬಿಡುವುದಿಲ್ಲ ಎಂದು ಮ್ಯಾಕ್ರನ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ಸ್ಟೆಫನಿ ಎಂದು ಗುರುತಿಸಲಾಗಿದೆ. ರಾಷ್ಟ್ರವು ಅವರ ಕುಟುಂಬ, ಅವರ ಸಹೋದ್ಯೋಗಿಗಳು ಮತ್ತು ಭದ್ರತಾ ಪಡೆಗಳ ಪರವಾಗಿದೆ ಎಂದು ಅವರು ಹೇಳಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿದ್ದ 49 ವರ್ಷದ ಮಹಿಳಾ ಪೊಲೀಸ್ ಲಂಚ್‌ ಬ್ರೇಕ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಎರಡು ಬಾರಿ ಗಂಟಲಿಗೆ ಇರಿದಿದ್ದು, ಸ್ವಲ್ಪ ಸಮಯದ ನಂತರ ಆಕೆ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ದಾಳಿ ಮಾಡಿದಾತನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ. ದಾಳಿಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.