ಏಳ್‌ನೀರ್, ಏಳ್‌ನೀರ್..ಬರಿ 50 ರೂಪಾಯಿ..ಇದು ಭಾರತದ ಬಹುತೇಕ ಕಡೆ ಕಾಣಸಿಗುವ ಮಾರಾಟದ ಶೈಲಿ. ಇದೀಗ ಇದೇ ಸೊಬಗು, ಭಾರತದ ಭಾಷೆ, ಆದರೆ ವ್ಯಾಪಾರಿ ಬ್ರಿಟಿಷ್, ಸ್ಥಳ ಪ್ರತಿಷ್ಠಿತ ಲಂಡನ್. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. 

ಲಂಡನ್(ಮೇ.21) ಕೆಆರ್ ಮಾರ್ಕೆಟ್ ಅಥವಾ ಇನ್ಯಾವುದೇ ಮಾರ್ಕೆಟ್‌, ಬೀದಿ ಬದಿ ವ್ಯಾಪಾರಿಗಳ ಮಾರಾಟ ಶೈಲಿ ಭಿನ್ನ. ವಸ್ತು ಯಾವುದೇ ಇರಲಿ ಕೂಗಿ ಕೂಗಿ ಕರೆದು ಮಾರಾಟ ಮಾಡುತ್ತಾರೆ. ಈ ಶೈಲಿ ನಿಮಗೆ ಪ್ರತಿಷ್ಠಿತ ಲಂಡನ್, ಅಮೆರಿಕದ ಹಾದಿ ಬೀದಿಗಳಲ್ಲಿ ಕಾಣಸಿಗುವುದಿಲ್ಲ ಎಂದುಕೊಂಡರೆ ತಪ್ಪು. ಇದೀಗ ಭಾರತದ ಪಾಪ್ಯುಲರ್ ಶೈಲಿ ಲಂಡನ್‌ನ ಪ್ರತಿಷ್ಠಿತ ಬೀದಿ ಬದಿಯಲ್ಲಿ ಕಾಣಿಸಿಗುತ್ತಿದೆ. ಏಳ್‌ನೀರ್, ಏಳ್‌ನೀರ್ ಅನ್ನೋ ಕೂಗು, ಗ್ರಾಹಕರ ಜೊತೆ ಚುರುಕಿನ ಮಾತು ಎಲ್ಲವೂ ಭಾರತದ ಶೈಲಿ, ಇಷ್ಟೇ ಅಲ್ಲ ವ್ಯಾಪಾರಿ ಬ್ರಿಟಿಷ್ ಆಗಿದ್ದರೂ ಭಾರತದ ಭಾಷೆಯ ಸೊಬಗು ಕೂಡ ಇದೆ. ಈ ಬ್ರಿಟಿಷ್ ವ್ಯಾಪಾರಿ ವೆಸ್ಟ್ ಲಂಡನ್‌ನಲ್ಲಿ ಏಳನೀರು ಮಾರಾಟ ಮಾಡುತ್ತಿದ್ದಾನೆ. ಈತನ ವಿಡಿಯೋ ಭಾರಿ ವೈರಲ್ ಆಗಿದೆ.

ಲಂಡನ್ ಬೀದಿಯಲ್ಲಿ ಬ್ರಿಟಿಷ್ ಏಳನೀರು ವ್ಯಾಪಾರಿ
ಈ ಬ್ರಿಟಿಷ್ ವ್ಯಾಪಾರಿ ಹಿಂದಿಯಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾನೆ. ನಾರಿಯಲ್ ಪಾನಿ, ನಾರಿಯಲ್ ಪಾನಿ ಪಿಲೋ(ಏಳನೀರು ಕುಡಿಯಿರಿ) ಎಂದು ಕೂಗಿ ಕೂಗಿ ಹೇಳುತ್ತಿದ್ದಾನೆ. ಬಳಿಕ ತಳ್ಳೋ ಗಾಡಿಯಲ್ಲಿ ಏಳನೀರು ಇಟ್ಟುಕೊಂಡ ಬೇಕಾದವರಿಗೆ ಕೊಚ್ಚಿ ಕೊಚ್ಚಿ ಕೊಡುತ್ತಿದ್ದಾನೆ. ಕೊಚ್ಚೋ ಸ್ಟೈಲ್ ಸ್ವಲ್ಪ ಭಿನ್ನ. ಆದರೂ ಎಲ್ಲರಿಗೂ ಇಷ್ಟವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡತ್ತಿದೆ. ರೆಸ್ಟೋರೆಂಟ್ ಹೊರಗಡೆ ಈತನ ಟೇಬಲ್ ಮೇಲೆ ಸಣ್ಣ ತಳ್ಳೋಗಾಡಿ ತರದಲ್ಲಿ ಏಳನೀರು ಮಾರಾಟ ಮಾಡುತ್ತಿದ್ದಾನೆ. ಬ್ರಿಟಿಷ್ ಆ್ಯಕ್ಸೆಂಟ್ ಮೂಲಕ ನಾರಿಯಲ್ ಪಾನಿ ಎಂದು ಕೂಗಿ ಹೇಳುತ್ತಿದ್ದಾನೆ. ಬಂದವರಿಗೆ ಏಳನೀರು ಮಾರಾಟ ಮಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ನಮ್ಮ ಹಳ್ಳಿ ಶೈಲಿಯಲ್ಲಿ ರೈತ ಹೇಗೆ ಏಳನೀರು ಕೊಚ್ಚಿ ಕೊಡುತ್ತಾನೋ ಅದೇ ರೀತ ಈತ ಕೊಂಚ ಲಂಡನ್ ಸ್ಟೈಲ್‌ನಲ್ಲಿ ಏಳನೀರು ಕೊಚ್ಚಿ ಕೊಡುತ್ತಿದ್ದಾನೆ. 

ಲಂಡನ್‌ನಲ್ಲಿ ಏಳನೀರು ಹೊಸದಲ್ಲ, ಆದರೆ ಈ ಶೈಲಿ ಹೊಸದು
ಲಂಡನ್‌ನಲ್ಲಿ ಏಳನೀರು ಹೊಸದಲ್ಲ. ಆದರೆ ಭಾರತದ ರೀತಿಯ ಮಾರಾಟ ಹೊಸದು. ಲಂಡನ್ ಹಾದಿ ಬೀದಿಯಲ್ಲಿ ಭಾರತೀಯ ಶೈಲಿಯ ರೀತಿಯ ಮಾರಾಟ ಹೊಸದು. ಲಂಡನ್‌ನಲ್ಲಿ ಅತೀ ಹೆಚ್ಚು ಭಾರತೀಯರಿದ್ದಾರೆ. ಉದ್ಯೋಗ ಮಾಡುತ್ತಾ, ಅಲ್ಲೆ ನೆಲೆಸಿದವರಿದ್ದಾರೆ.ವಿದ್ಯಾಭ್ಯಾಸಕ್ಕಾಗಿ ತೆರಳಿದವರಿದ್ದಾರೆ. ಹಲವು ಕಾರಣಗಳಿಂದ ಲಂಡನ್‌ನಲ್ಲಿ ಭಾರತದ ಅತೀ ದೊಡ್ಡ ಸಮುದಾಯವಿದೆ. ಹೀಗಾಗಿ ಭಾರತೀಯರನ್ನೇ ಟಾರ್ಗೆಟ್ ಮಾಡಿ ಈ ಬ್ರಿಟಿಷ್ ವ್ಯಾಪಾರಿ ಹಿಂದಿಯಲ್ಲಿ ನಾರಿಯಲ್ ಪಾನಿ ಮಾರಾಟ ಮಾಡುತ್ತಿದ್ದಾನೆ. 

View post on Instagram

ಭಾರತೀಯ ಸಮುದಾಯದಿಂದ ಒಂದಷ್ಟು ಹಿಂದಿ ಪದಗಳನ್ನು, ವಾಕ್ಯಗಳನ್ನು ಈ ಬ್ರಿಟಿಷ್ ವ್ಯಾಪಾರಿ ಕಲಿತುಕೊಂಡಿದ್ದಾನೆ. ಇದೇ ತಂತ್ರವನ್ನು ಉಪಯೋಗಿಸಿ ಭಾರತೀಯ ಸಮುದಾಯವನ್ನೇ ಟಾರ್ಗೆಟ್ ಮಾಡಿಕೊಂಡು ಉತ್ತಮ ವ್ಯಾಪಾರ ಮಾಡುತ್ತಿದ್ದಾನೆ.