ಇಂಗ್ಲೆಂಡಿನ ಹೋಟೆಲ್‌ನಲ್ಲೂ ಗೋಮಾಂಸ ಆಹಾರ ಮಾರಾಟಕ್ಕೆ ಬಿಡದ ಹಿಂದೂಗಳು; ಮಾಲೀಕನ ಮೇಲೆ ದಾಳಿ!
ಲಂಡನ್‌ನ ಷೆಫೀಲ್ಡ್‌ನಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೋಮಾಂಸ ಖಾದ್ಯಗಳನ್ನು ರೆಸ್ಟೋರೆಂಟ್ ಮೆನುವಿನಲ್ಲಿ ಸೇರಿಸಿದ್ದಕ್ಕೆ ಭಾರತದ ಹಿಂದೂಗಳು ಗಲಾಟೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಭಾರತವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ ಬ್ರಿಟೀಷರ ದೇಶ ಇಂಗ್ಲೆಂಡಿನ ರಾಜಧಾನಿ ಲಂಡನ್‌ನ ಷೆಫೀಲ್ಡ್‌ನಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ಯುವಕರು ರೆಸ್ಟೋರೆಂಟ್‌ಗೆ ನುಗ್ಗಿ ಕೌಂಟರ್ ಹಿಂದೆ ಕುಳಿತಿದ್ದ ಸಿಬ್ಬಂದಿ ಮೇಲೆ ವಸ್ತುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಬ್ಬಾಸಿನ್ ಡೈನರ್ ರೆಸ್ಟೋರೆಂಟ್‌ನ ಮೆನುವಿನಲ್ಲಿ ಬೀಫ್ ಖಾದ್ಯಗಳನ್ನು ಸೇರಿಸಿದ್ದೇ ಗಲಾಟೆಗೆ ಕಾರಣ ಎಂದು ವರದಿಯಾಗಿದೆ.
ಹಲವು ಸಾಮಾಜಿಕ ಜಾಲತಾಣ ಖಾತೆಗಳು, ಬೀಫ್ ಖಾದ್ಯಗಳನ್ನು ವಿರೋಧಿಸಿ ಭಾರತೀಯ ಹಿಂದೂಗಳ ಗುಂಪೊಂದು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿವೆ. ಇದು ಟ್ವಿಟರ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರೆಸ್ಟೋರೆಂಟ್‌ನ ಹೊರಗಿನಿಂದ ಯಾರೋ ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರ್ನಾಲ್ಕು ಯುವಕರು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ವಸ್ತುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ಓಡಿಬಂದು ಯುವಕರೊಬ್ಬನನ್ನು ಹಿಡಿದು ಮುಖಕ್ಕೆ ಹೊಡೆಯುವುದೂ ಕಾಣಿಸುತ್ತದೆ.
ಇದನ್ನೂ ಓದಿ: ಉತ್ತರ ಭಾರತದಲ್ಲಿ ಖ್ಯಾತಿ ಗಳಿಸಿದ ದಕ್ಷಿಣ ಭಾರತದ ಕ್ಯಾಲೋರಿರಹಿತ ತಿಂಡಿಗಳು; ಇದು ನಮ್ಮ ಕರ್ನಾಟಕ ಸ್ಪೆಷಲ್!
ಇನ್ನು ಗೋಮಾಂಸ ಖಾದ್ಯ ವಿಚಾರದಲ್ಲೇ ಗಲಾಟೆ ನಡೆದಿದೆ ಎಂದು ಕೆಲವರು ವಿಡಿಯೋದಲ್ಲಿ ಹೇಳುತ್ತಿರುವುದು ಕೇಳಿಬರುತ್ತದೆ. ಆದರೆ, ಇತರರು ಬೇರೆ ಕಾರಣಗಳಿವೆ ಎನ್ನುತ್ತಾರೆ. ಘಟನೆಯ ನಂತರ ಪೊಲೀಸರು ತನಿಖೆ ಆರಂಭಿಸಿ, ದಾಳಿಕೋರರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ರೆಸ್ಟೋರೆಂಟ್‌ಗೆ ಆದ ಹಾನಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಮಾಲೀಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆ 2024ರ ಆಗಸ್ಟ್‌ನಲ್ಲಿ ನಡೆದಿದ್ದು ಎಂದು ದಿ ಸ್ಟಾರ್ ವರದಿ ಮಾಡಿದೆ. ಸೌತ್ ಯಾರ್ಕ್‌ಷೈರ್ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಾಳಿಕೋರರು ರೆಸ್ಟೋರೆಂಟ್‌ನ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿ ಮಾಡಿದ್ದಾರೆ. ಸುಮಾರು 2,000 ಪೌಂಡ್ (2 ಲಕ್ಷ ರೂಪಾಯಿ) ನಷ್ಟವಾಗಿದೆ ಎಂದು ಮಾಲೀಕರು ಹೇಳಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ. ಘಟನೆ ನಡೆಯುವ ಕೆಲವು ತಿಂಗಳ ಹಿಂದೆ ತೆರೆದಿದ್ದ ಈ ರೆಸ್ಟೋರೆಂಟ್‌ನಲ್ಲಿ ಗ್ರಿಲ್ಡ್ ಚಿಕನ್, ಮಟನ್, ಪಿಜ್ಜಾ, ಬರ್ಗರ್, ಕಬಾಬ್ ಮತ್ತು ಇತರ ಮಾಂಸಾಹಾರಿ ಖಾದ್ಯಗಳನ್ನು ಬಡಿಸಲಾಗುತ್ತಿತ್ತು. ಈ ಘಟನೆಯಲ್ಲಿ ಪೊಲೀಸರು 5 ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಕಂಡು ಕೇಳರಿಯದ ಮಳೆ: ಪ್ರವಾಹಕ್ಕೆ ಕೊಚ್ಚಿ ಹೋದ ಕಾರುಗಳು