Asianet Suvarna News Asianet Suvarna News

Shanghai Lockdown: ಜೈಲಿನಂತಾದ ಮನೆಗಳಿಂದ ಪ್ರಜೆಗಳ ಆರ್ತನಾದ ವಿಡಿಯೋ ವೈರಲ್!

ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿ ಜನರು ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿ ಬದುಕುತ್ತಿದ್ದಾರೆ. ದೀರ್ಘ ಕಾಲದಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ನಲ್ಲಿರುವ ಕಾರಣ, ಸ್ಥಳೀಯ ಅಧಿಕಾರಿಗಳ ಮೇಲೆ ಜನರ ಆಕ್ರೋಶ ಭುಗಿಲೆದ್ದಿದೆ. ಜನರು ತಮ್ಮ ಅಪಾರ್ಟ್‌ಮೆಂಟ್‌ಗಳಿಂದ ನಿಂತು ಕೂಗುತ್ತಿರುವಂಥ ವಿಡಿಯೋ ವೈರಲ್ ಆಗಿದೆ. ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕೆಟವಾಗಿದ್ದು, ಇದರಲ್ಲಿ ಜನರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.

Lockdown from Corona in China video of people of Shanghai shouting imprisoned in homes goes viral san
Author
Bengaluru, First Published Apr 12, 2022, 12:00 AM IST | Last Updated Apr 12, 2022, 12:01 AM IST

ನವದೆಹಲಿ (ಏ.11):  ಚೀನಾ (China) ಮೊದಲಿನಿಂದಲೂ 'ಶೂನ್ಯ ಕೋವಿಡ್ ನೀತಿ'ಯನ್ನು (Zero Covid Policy) ಅನುಸರಿಸುತ್ತಿದೆ. ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿ (Shanghai) ಕೋವಿಡ್ (Covid 19)ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಚೀನಾದ ಕಮ್ಯುನಿಸ್ಟ್ ಪಕ್ಷದ (China Communist Party) ಸರ್ಕಾರವು ಇಡೀ ನಗರದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಅನ್ನು (Lockdown) ವಿಧಿಸಿದೆ. ಇದರ ನಡುವೆ ಕಟ್ಟುನಿಟ್ಟಾದ ಕೋವಿಡ್ ಲಾಕ್‌ಡೌನ್‌ನಿಂದ ಕೋಪಗೊಂಡ ಜನರ ವೀಡಿಯೊಗಳು ಪ್ರಕಟವಾಗಿದೆ.

ಇದರಲ್ಲಿ ಜನರು ತಮ್ಮ ಅಪಾರ್ಟ್ ಮೆಂಟ್ ಗಳಲ್ಲಿ ನಿಂತು ಕೂಗುತ್ತಿರುವುದನ್ನು ಕೇಳಬಹುದಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೊಗಳು ವೈರಲ್  ಆಗುತ್ತಿವೆ, ಇದರಲ್ಲಿ ಜನರು ಸ್ಥಳೀಯ ಸ್ಥಳೀಯ ಅಧಿಕಾರಿಗಳೊಂದಿಗೆ ಜಗಳವಾಡುವುದನ್ನು ಕಾಣಬಹುದು. ಇಂತಹ ಕಟ್ಟುನಿಟ್ಟಿನ ಲಾಕ್‌ಡೌನ್ ಭೀಕರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಜನರು ಎಚ್ಚರಿಸುತ್ತಿದ್ದಾರೆ.

ತನ್ನ ಕಟ್ಟುನಿಟ್ಟಾದ ಕೋವಿಡ್ ನೀತಿಯ ಅಡಿಯಲ್ಲಿ, ಸೋಂಕು ಹರಡುವುದನ್ನು ತಡೆಯಲು ಚೀನಾ, ಏಪ್ರಿಲ್ 5 ರಿಂದ ಶಾಂಘೈ ಅನ್ನು ಸಂಪೂರ್ಣವಾಗಿ ಮುಚ್ಚಿದೆ. ನಗರದ 26 ಕೋಟಿ ಜನರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ.


ಅಮೆರಿಕದಲ್ಲಿ ನೆಲೆಸಿರುವ ಖ್ಯಾತ ಆರೋಗ್ಯ ವಿಜ್ಞಾನಿ ಎರಿಕ್ ಫೀಗಲ್-ಡಿಂಗ್ ಶಾಂಘೈನ ಕೆಲವು ವಿಡಿಯೋಗಳನ್ನು ಟ್ವೀಟ್ ಮಾಡಿದ್ದಾರೆ. ವೀಡಿಯೊವನ್ನು ಟ್ವೀಟ್ ಮಾಡುವಾಗ, ಅವರು ಅಪಾರ್ಟ್ ಮೆಂಟ್ ನಿಂದ ಚೀನಾದ ಜನರು ಸ್ಥಳೀಯ ಉಪಭಾಷೆ ಶಾಂಘೈನೀಸ್ ಕೂಗುತ್ತಿದ್ದಾರೆ ಎಂದು ಬರೆದಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, 'ಲಾಕ್‌ಡೌನ್‌ನ ಏಳನೇ ದಿನದಂದು, ಶಾಂಘೈ ನಿವಾಸಿಗಳು ತಮ್ಮ ಬೃಹತ್ ಅಪಾರ್ಟ್‌ಮೆಂಟ್‌ಗಳಿಂದ ಕೂಗುತ್ತಿದ್ದಾರೆ. ಹಲವಾರು ಸಮಸ್ಯೆಗಳು ಮುಂದೆ ಎದುರಾಗಲಿವೆ ಎಂದು ಕೂಗುವ ವ್ಯಕ್ತಿಯೊಬ್ಬರು ಹೇಳುತ್ತಾರೆ. ಜನರನ್ನು ಹೆಚ್ಚು ಕಾಲ ಬಂಧಿಯಾಗಿರಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಹಾಗೇನಾದರೂ ಆದಲ್ಲಿದುರಂತ ಸಂಭವಿಸುತ್ತದೆ ಎಂದು ಅವರು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಬರೆದಿದ್ದಾರೆ.

ಜನರ ಕೋಪ ಶೀಘ್ರದಲ್ಲೇ ಹೊರಬರಲಿದೆ ಎಂದು ಡಾ ಎರಿಕ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ವಿಡಿಯೋದ ಸತ್ಯಾಸತ್ಯತೆಯನ್ನು ದೃಢಪಡಿಸಿದ ಅವರು, 'ವೀಡಿಯೊವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ನನ್ನ ಮೂಲಗಳು ಕೂಡ ಇದನ್ನು ಪರಿಶೀಲಿಸಿವೆ. ಶಾಂಘೈನೀಸ್ ಸ್ಥಳೀಯ ಉಪಭಾಷೆಯಾಗಿದೆ. ಚೀನಾದ 1.3 ಶತಕೋಟಿ ಜನಸಂಖ್ಯೆಯಲ್ಲಿ ಕೇವಲ 140 ಮಿಲಿಯನ್ ಚೀನಿಯರು ಇದನ್ನು ಮಾತನಾಡುತ್ತಾರೆ. ನಾನು ಅಲ್ಲಿ ಹುಟ್ಟಿದ್ದರಿಂದ ನನಗೆ ಈ ಭಾಷೆ ತಿಳಿದಿದೆ ಎಂದಿದ್ದಾರೆ. ಶಾಂಘೈನಲ್ಲಿ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಮತ್ತು ಒಮಿಕ್ರಾನ್‌ನ ಬಿಎ.2 ಆವೃತ್ತಿಯು ಚೀನಾದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಜೀವಂತ ಕೈದಿಗಳ ಅಂಗಾಂಗ ಕಟ್, ಅಂಗಾಂಗ ಕಸಿಗಾಗಿ ಇದೆಂತಹಾ ಕ್ರೌರ್ಯ?

ಆಹಾರ ಪದಾರ್ಥಗಳ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ:  
ಶಾಂಘೈನಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ನಿಂದಾಗಿ, ತಮ್ಮ ಮನೆಗಳಲ್ಲಿ ಬಂಧಿತರಾಗಿರುವ ಜನರಿಗೆ ಆಹಾರ ಪದಾರ್ಥಗಳ ತೀವ್ರ ಕೊರತೆಯಿದೆ. ಕಡಿಮೆ ಖರ್ಚು ಮಾಡಿ ಹೆಚ್ಚು ದಿನ ತರಕಾರಿ ಉಳಿಸಲು ಯತ್ನಿಸುತ್ತಿರುವ ಹಲವು ವಿಡಿಯೋಗಳು ಹೊರಬಿದ್ದಿವೆ.

Coronavirus: ಒಟ್ಟಿಗೆ ಮಲಗಂಗಿಲ್ಲ, ಮುತ್ತು ಕೊಡುವಂತಿಲ್ಲ, ಅಪ್ಪಿಕೊಳ್ಳುವುದಕ್ಕೂ ಚೀನಾದಲ್ಲಿ ನಿಷೇಧ!

ಭಾನುವಾರ, ಶಾಂಘೈನಲ್ಲಿ 25 ಸಾವಿರ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಪ್ರಪಂಚದ ಇತರ ನಗರಗಳಿಗೆ ಹೋಲಿಸಿದರೆ ಈ ಪ್ರಕರಣಗಳು ತುಂಬಾ ಕಡಿಮೆ, ಆದರೆ ಚೀನಾದ ಪ್ರಕಾರ, 2019 ರಲ್ಲಿ ವುಹಾನ್‌ನಿಂದ ಕೋವಿಡ್ ಏಕಾಏಕಿ ಕಾಣಿಸಿಕೊಂಡ ನಂತರ, ಚೀನಾ ಇದುವರೆಗೆ ಅತ್ಯಂತ ಅಪಾಯಕಾರಿ ಕೋವಿಡ್ ಸೋಂಕನ್ನು ಎದುರಿಸುತ್ತಿದೆ. ಶಾಂಘೈ ಬೀದಿಗಳಲ್ಲಿ ಸಾಮಾನ್ಯ ನಾಗರಿಕರ ತಿರುಗಾಟಕ್ಕೆ ಸಂಪೂರ್ಣ ನಿಷೇಧವಿದೆ. ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ಸರಕುಗಳನ್ನು ತಲುಪಿಸುವ ಜನರು ಮತ್ತು ವಿಶೇಷ ಅನುಮತಿ ಹೊಂದಿರುವವರಿಗೆ ಮಾತ್ರ ಬೀದಿಗಳಲ್ಲಿ ಹೋಗಲು ಅವಕಾಶವಿದೆ.

Latest Videos
Follow Us:
Download App:
  • android
  • ios