ಲಂಡನ್‌ನ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ & ಪಾರ್ಟನರ್ ಅತೀಹೆಚ್ಚು ಮಿಲಿಯನೇರ್‌ (ಲಕ್ಷಾಧಿಪತಿಗಳು- 10 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು) ಗಳನ್ನು ಹೊಂದಿರುವ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  

ಲಂಡನ್‌: ಲಂಡನ್‌ನ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ & ಪಾರ್ಟನರ್ ಅತೀಹೆಚ್ಚು ಮಿಲಿಯನೇರ್‌ (ಲಕ್ಷಾಧಿಪತಿಗಳು- 10 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು) ಗಳನ್ನು ಹೊಂದಿರುವ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿ ಪ್ರಕಾರ ಭಾರತದ ಯಾವ ನಗರದಲ್ಲಿ ಎಷ್ಟು ಲಕ್ಷಾಧಿಪತಿಗಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವದ ಶ್ರೀಮಂತ ನಗರಗಳ ಪಟ್ಟಿ 2023ರ ಪ್ರಕಾರ ಯುನೈಟೆಡ್ ನೇಷನ್ (USA)ನ ನ್ಯೂಯಾರ್ಕ್‌ ನಗರ ಅತೀ ಶ್ರೀಮಂತ ನಗರವೆನಿಸಿದೆ. ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರ ಸೇರಿದಂತೆ ಜಪಾನ್‌ನ ಟೋಕಿಯೋ, ಅಮೆರಿಕಾದ ದ ಬೇ ಏರಿಯಾ, ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌, ಸಿಂಗಾಪುರ್, ಲಾಸ್ ಎಂಜಲೀಸ್, ಚೀನಾದ ಹಾಂಗ್‌ಕಾಂಗ್, ಬೀಜಿಂಗ್, ಶಾಂಘೈ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಇವೆ. 

ಇವಲ್ಲದೇ 1.25 ಲಕ್ಷ ಲಕ್ಷಾಧಿಪತಿಗಳನ್ನು ಹೊಂದುವ ಮೂಲಕ ದೇಶದ ಐದು ಮಹಾನಗರಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 59,400 ಲಿಲಿಯನೇರ್‌ಗಳನ್ನು ಹೊಂದಿರುವ ವಾಣಿಜ್ಯ ನಗರಿ ಮುಂಬೈ, 30200 ಲಕ್ಷ ಜನರನ್ನು ಹೊಂದಿರುವ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ, 12, 600 ಲಕ್ಷಾಧಿಪತಿಗಳನ್ನು ಹೊಂದಿರುವ ಗಾರ್ಡನ್ ಸಿಟಿ ನಮ್ಮ ಬೆಂಗಳೂರು, 12,100 ಜನ ಲಕ್ಷಾಧಿಪತಿಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, 11,100 ಲಕ್ಷಾಧಿಪತಿಗಳನ್ನು ಹೊಂದಿರುವ ಮುತ್ತಿನ ನಗರಿ ಹೈದರಾಬಾದ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಮುಂಬೈ To ಬೆಂಗಳೂರು; ಇಲ್ಲಿದೆ ಭಾರತದ 10 ಶ್ರೀಮಂತ ನಗರದ ಲಿಸ್ಟ್!

ವರದಿಯ ಪ್ರಕಾರ ಈ ಎಲ್ಲಾ ಅಂಕಿಅಂಶಗಳು ಡಿಸೆಂಬರ್ 31, 2022 ರವೆರೆಗಿನ ಸಂಪತ್ತನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ. ಮತ್ತು 'ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು' ಅಥವಾ HNWI(High-Net-Worth Individual) 1 ಮಿಲಿಯನ್ USD ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಸಂಪತ್ತನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಮತ್ತು ಪ್ರತಿ ನಗರದಲ್ಲಿ ವಾಸಿಸುವ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು ಗಳನ್ನು ಮಾತ್ರ ಈ ಪಟ್ಟಿ ಒಳಗೊಂಡಿದೆ. 

ಜಾಗತಿಕ 15 ಶ್ರೀಮಂತ ನಗರಗಳಲ್ಲಿ ಮುಂಬೈಗೂ ಸ್ಥಾನ