ಜಾಗತಿಕ 15 ಶ್ರೀಮಂತ ನಗರಗಳಲ್ಲಿ ಮುಂಬೈಗೂ ಸ್ಥಾನ

First Published 11, Feb 2018, 2:04 PM IST
Mumbai 12th richest city globally
Highlights

ಭಾರತದ ವಾಣಿಜ್ಯ ನಗರ ಎಂದೇ ಖ್ಯಾತವಾಗಿರುವ ಮುಂಬೈ ಜಾಗತಿಕವಾಗಿ 950 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ವಿಶ್ವದ 15 ಶ್ರೀಮಂತ ನಗರಗಳಲ್ಲಿ ಸ್ಥಾನ ಪಡೆದಿದೆ.

ನವದೆಹಲಿ : ಭಾರತದ ವಾಣಿಜ್ಯ ನಗರ ಎಂದೇ ಖ್ಯಾತವಾಗಿರುವ ಮುಂಬೈ ಜಾಗತಿಕವಾಗಿ 950 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ವಿಶ್ವದ 15 ಶ್ರೀಮಂತ ನಗರಗಳಲ್ಲಿ ಸ್ಥಾನ ಪಡೆದಿದೆ.

 ನ್ಯೂ ವರ್ಲ್ಡ್ ವೆಲ್ತ್ ಸಲ್ಲಿಸಿರುವ ವರದಿಯಲ್ಲಿ ಮುಂಬೈ  ವಿಶ್ವದ 12ನೇ ಶ್ರೀಮಂತ ನಗರ ಎನಿಸಿಕೊಂಡಿದೆ.  ಪ್ರತೀ ನಗರಗಳಲ್ಲಿ ವಾಸಿಸುವ ಜನರ ವೈಯಕ್ತಿಕ ಸಂಪತ್ತನ್ನು ಆಧಾರವಾಗಿರಿಸಿಕೊಂಡು ಈ ವರದಿಯನ್ನು ತಯಾರಿ ಮಾಡಲಾಗಿದೆ. 

ಇಲ್ಲಿನ ಜನರ ಎಲ್ಲಾ ಆಸ್ತಿಗಳನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಬಿಲಿಯನೇರ್’ಗಳು ವಾಸವಾಗಿರುವ 10 ನಗರಗಳಲ್ಲಿಯೂ ಕೂಡ ಮುಂಬೈ ಕೂಡ ಸ್ಥಾನ ಪಡೆದಿದೆ. ಅಲ್ಲದೇ ಇಲ್ಲಿ ವಾಸಿಸುವವರ  ಆದಾಯದ ಪ್ರಮಾಣದಲ್ಲಿಯೂ ಕೂಡ ಏರಿಕೆ ಕಂಡು ಬರುತ್ತಿದೆ.

loader