Asianet Suvarna News Asianet Suvarna News

ಮೋದಿ ಶೈಲಿ ಅನುಸರಿಸಿದ ತಾಲಿಬಾನ್: ಸ್ವಚ್ಛ ಅಪ್ಘಾನಿಸ್ತಾನ ಮಿಷನ್‌ ಆರಂಭ!

* ಅಫ್ಘಾನಿಸ್ತಾನದಲ್ಲಿ ಭಾರೀ ರಕ್ತಪಾತ ನಡೆಸಿ ಅಧಿಕಾರಕ್ಕೆ ಬಂದ ತಾಲಿಬಾನ್

* ರಕ್ತದೋಕುಳಿ ನಡೆಸಿದ್ದ ತಾಲಿಬಾನಿಯರಿಂದ ಸ್ವಚ್ಛತಾ ಅಭಿಯಾನ

* ಇತ್ತ ವೈರಲ್ ಆಯ್ತು ಪಿಎಂ ಮೋದಿ ಫೋಟೋ

Like Clean India Mission Of PM Modi Taliban Starts Clean Afghanistan Campaign pod
Author
Bangalore, First Published Sep 9, 2021, 3:00 PM IST

ಕಾಬೂಲ್(ಸೆ.09): ಅಫ್ಘಾನಿಸ್ತಾನದಲ್ಲಿ ಭಾರೀ ರಕ್ತಪಾತ ನಡೆಸಿ ಅಧಿಕಾರಕ್ಕೆ ಬಂದ ತಾಲಿಬಾನ್ ಈಗ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ತಾಲಿಬಾನ್ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿರುವ Talib Timew ಈ ಫೋಟೋ ಶೇರ್ ಮಾಡಿದೆ. ಇದರಲ್ಲಿ, ಕಂದಹಾರ್ ಮೇಯರ್ ಮತ್ತು ಸಾಮಾನ್ಯ ನಾಗರಿಕರು ಬೀದಿಗಳಲ್ಲಿ ಪೊರಕೆಯಿಂದ ಗುಡುಸಿ ಸ್ವಚ್ಛತೆಯ ಸಂದೇಶವನ್ನು ನೀಡಿದ್ದಾರೆೆಂದು ತಾಲಿಬ್ ಟೈಮ್ಸ್ ವರದಿ ಮಾಡಿದೆ.

ಮೋದಿ ಫೋಟೋ ವೈರಲ್

ಈ ಹಿಂದೆ ಭಾರತದಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಿದ್ದ ಪಿಎಂ ಮೋದಿ ಪೊರಕೆ ಹಿಡಿದು ತಾವೇ ಖುದ್ದು ರಸ್ತೆಗಳನ್ನು ಗುಡಿಸಿದ್ದರು. ಸದ್ಯ 2014 ರಲ್ಲಿ ಮೋದಿ ಸ್ವಚ್ಛ ಭಾರತ್ ಮಿಷನ್ ಫೋಟೋ ಜೊತೆ ತಾಲಿಬಾನಿಯರ ಈ ಫೋಟೋ ತಾಳೆ ಹಾಕಿ ಶೇರ್ ಮಾಡಲಾಗುತ್ತಿದೆ.  ಇನ್ನು ಪಿಎಂ ಮೋದಿ ಆರಂಭಿಸಿದ್ದ ಸ್ವಚ್ಛತಾ ಅಭಿಯಾನದ ಪರಿಣಾಮವಾಗಿ, ಹಳ್ಳಿಗಳಲ್ಲಿಯೂ ಸಹ ಬಹುತೇಕ ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ಜನರು ಸ್ವಚ್ಛತೆಯ ಬಗ್ಗೆ ಜಾಗೃತರಾಗಿದ್ದಾರೆ.

ತಾಲಿಬಾನ್ ಗೆ ಸಂಬಂಧಿಸಿದ ಪ್ರಮುಖ ಸುದ್ದಿ

ಅಫ್ಘಾನಿಸ್ತಾನವನ್ನು ಮಾದಕ ವ್ಯಸನಿಗಳ ದೊಡ್ಡ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ತಾಲಿಬಾನ್ ಈಗ ವ್ಯಸನ-ವಿರೋಧಿ ಅಭಿಯಾನಕ್ಕೂ ಒತ್ತು ನೀಡುತ್ತಿದೆ. ಅವರು ಜಲಾಲಾಬಾದ್‌ನಿಂದ ಹೆಚ್ಚಿನ ಸಂಖ್ಯೆಯ ಮಾದಕ ವ್ಯಸನಿಗಳನ್ನು ಕಾಬೂಲ್‌ನ ಕೇಂದ್ರಗಳಿಗೆ ಪುನರ್ವಸತಿ ಮತ್ತು ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.

ಕಾಬೂಲ್ ನಗರದ ಹಲವು ಭಾಗಗಳಲ್ಲಿ ತಾಲಿಬಾನ್ ಅಂತರ್ಜಾಲವನ್ನು ಸ್ಥಗಿತಗೊಳಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳಿವೆ. ಅವರ ವಿರುದ್ಧ ಹೆಚ್ಚುತ್ತಿರುವ ಚಳುವಳಿ, ಅದರಲ್ಲೂ ವಿಶೇಷವಾಗಿ ಮಹಿಳೆಯರ ವಿರೋಧಕ್ಕೆ ಬ್ರೇಕ್ ಹಾಕಲು ಹೀಗೆ ಮಾಡಲಾಘಿದೆ ಎನ್ನಲಾಗಿದೆ.

ತಾಲಿಬ್ ಟೈಮ್ಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಅನ್ವಯ, ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಎಮಿರೇಟ್ ಮುಖ್ಯಸ್ಥ ಮುಹಮ್ಮದ್ ಹಸನ್ ಅಖುಂಡ್ ಅವರು ಅಲ್ ಜಜೀರಾಕ್ಕೆ ನೀಡಿದ ಸಂದರ್ಶನದಲ್ಲಿ ಅಫ್ಘಾನಿಸ್ತಾನದಲ್ಲಿ ಬಹಳಷ್ಟು ರಕ್ತ ಹರಿಸಿದ್ದಾರೆ. ಆದರೀಗ ಅವರ ದೇಶ ಅಲ್ಲಿನ ಕ್ಷೇತ್ರ ಹಾಘೂ ಇಡೀ ವಿಶ್ವದೊಂದಿದೆ ಅತ್ಯುತ್ತಮ ಬಾಂಧವ್ಯ ರೂಪಿಸಲು ಬಯಸುತ್ತಿದೆ ಎಂದಿದ್ದಾರೆ.

Follow Us:
Download App:
  • android
  • ios