Asianet Suvarna News Asianet Suvarna News

ಹಮಾಸ್ ಬಳಿಕ ಉತ್ತರ ಇಸ್ರೇಲ್ ಗಡಿ ಸ್ಫೋಟಿಸಿ ಒಳನುಗ್ಗಿದ ಲೆಬೆನಾನ್ ಹೆಝ್‌ಬೊಲ್ಹಾ ಉಗ್ರರು!

ಗಾಜಾದಿಂದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿಮಾಡುತ್ತಿದ್ದರೆ, ಇದೀಗ ಲೆಬೆನಾನ್‌ನಿಂದ ಹೆಝ್‌ಬೊಲ್ಹಾ ಉಗ್ರರು ದಾಳಿ ಆರಂಭಿಸಿದ್ದಾರೆ. ನಿನ್ನೆ ರಾಕೆಟ್ ದಾಳಿ ಆರಂಭಿಸಿದ ಉಗ್ರರು ಇಂದು ಇಸ್ರೇಲ್ ಗಡಿಯಲ್ಲಿ ಹಾಕಿದ್ದ ತಡಗೋಡೆಯನ್ನೇ ಸ್ಫೋಟಿಸಿ ಒಳನುಗ್ಗಿದ್ದಾರೆ.

Lebanon Hezbollah terrorists attack North Israel border after Hamas Horror ckm
Author
First Published Oct 11, 2023, 9:50 PM IST

ಜೆರುಸಲೇಮ್(ಅ.11)  ಸುತ್ತಲು ಶತ್ರುಗಳಿಂದಲೇ ತುಂಬಿರುವ ಇಸ್ರೇಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ ಇದೀಗ ಲೆಬೆನಾನ್ ಉಗ್ರರು ಅಖಾಡಕ್ಕಿಳಿದಿದ್ದಾರೆ. ಲೆಬೆನಾನ್ ಗಡಿಯಂದ ನಿನ್ನೆ ರಾಕೆಟ್ ದಾಳಿ ಮಾಡಿದ್ದ ಹೆಝ್‌ಬೊಲ್ಹಾ ಉಗ್ರರು ಇಂದು ಇಸ್ರೇಲ್ ಗಡಿ ಸ್ಫೋಟಿಸಿ ಒಳನುಗ್ಗಿದ್ದಾರೆ. ಉತ್ತರ ಇಸ್ರೇಲ್ ಗಡಿಯಿಂದ ಒಳನುಗ್ಗಿರುವ ಹೆಝ್‌ಬೊಲ್ಹಾ ಉಗ್ರರು ಇದೀಗ ಮತ್ತೊಂದು ನರಮೇಧಕ್ಕೆ ಸಜ್ಜಾಗಿದ್ದಾರೆ. 

ಗಾಜಾಪಟ್ಟಿ ಮೇಲೆ ದಾಳಿ ತೀವ್ರಗೊಳಿಸಿದ ಬೆನ್ನಲ್ಲೇ ಲೆಬೆನಾನ್ ಉಗ್ರರು ನಿನ್ನೆ ರಾಕೆಟ್ ದಾಳಿ ಮೂಲಕ ಇಸ್ರೇಲ್ ಹೆಲಿಕಾಪ್ಟರ್ ಹೊಡೆದುರುಳಿಸಿದ್ದರು. ಇಸ್ರೇಲ್‌ನತ್ತ ತೂರಿ ಬಂದ ಹೆಝ್‌ಬೊಲ್ಹಾ ಉಗ್ರರ ರಾಕೆಟ್‌ನಿಂದ ಹಲವು ಜೀವಹಾನಿಗಳು ಸಂಭವಿಸಿತ್ತು. ಇತ್ತ ಅಮೆರಿಕ ಎಚ್ಚರಿಕೆ ನಡುವೆಯೂ ಲೆಬೆನಾನ್ ಉಗ್ರರು ಪ್ರತಿ ದಾಳಿ ಆರಂಭಿಸಿದ್ದಾರೆ.

ಹಮಾಸ್‌ ಉಗ್ರರಿಗೆ ಸಮುದ್ರ, ಸುರಂಗ ಮಾರ್ಗದಿಂದ ಶಸ್ತ್ರಾಸ್ತ್ರ ಪೂರೈಕೆ?

ಶಸ್ತ್ರಾಸ್ತ್ರ ಹಿಡಿದ ಉಗ್ರರು ಉತ್ತರ ಇಸ್ರೇಲ್ ಗಡಿಯಲ್ಲಿ ಹಾಕಿದ್ದ ಫೆನ್ಸಿಂಗ್ ಸ್ಫೋಟಿಸಿದ್ದಾರೆ. ಇದೀಗ ನೇರವಾಗಿ ಗಡಿಯೊಳಕ್ಕೆ ನುಗ್ಗಿ ಇಸ್ರೇಲಿಗರ ಮೇಲೆ ಗುಂಡಿನ ಮಳೆ ಸುರಿಸಲು ಸಜ್ಜಾಗಿದ್ದಾರೆ. ಇತ್ತ ಇಸ್ರೇಲ್ ಸೇನೆ ಉತ್ತರ ಹಾಗೂ ಲೆಬೆನಾನ್ ಗಡಿ ಮೇಲೆ ಪ್ರತಿದಾಳಿಗೆ ಸಜ್ಜಾಗಿದೆ. 

ತವರು ದೇಶದಲ್ಲಿ ಸಂಘರ್ಷ, ಯುದ್ಧ ಆರಂಭವಾದಾಗ ವಿದೇಶದಲ್ಲಿರುವ ಆ ದೇಶಗಳ ಪ್ರಜೆಗಳು ಸದ್ಯಕ್ಕೆ ತವರಿಗೆ ಹೋಗದೇ ಇರುವುದು ಸೂಕ್ತ ಎಂದು ಭಾವಿಸುತ್ತಾರೆ. ಆದರೆ ಹಮಾಸ್‌ ಉಗ್ರರ ದಾಳಿಗೆ ತುತ್ತಾಗಿರುವ ಇಸ್ರೇಲಿಗಳು ಮಾತ್ರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದೇಶ ತಮ್ಮ ಸೇವೆ ಬಯಸುತ್ತಿದೆ ಎಂದು ಅರ್ಥೈಸಿಕೊಂಡಿರುವ ವಿದೇಶಗಳಲ್ಲಿರುವ ಸಾವಿರಾರು ಇಸ್ರೇಲಿಗಳು ತವರಿನತ್ತು ದೌಡಾಯಿಸುತ್ತಿದ್ದಾರೆ. ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿ ಹೋರಾಡುತ್ತೇವೆ, ಇಲ್ಲವೇ ಇಸ್ರೇಲ್‌ ಸೈನಿಕರಿಗೆ ನೆರವಾಗುತ್ತೇವೆ ಎಂದು ಅಥೆನ್ಸ್‌, ನ್ಯೂಯಾರ್ಕ್‌ ಇನ್ನಿತರ ದೇಶಗಳಲ್ಲಿ ನೆಲೆಸಿರುವ ಇಸ್ರೇಲಿಗರು ವಿಮಾನ ನಿಲ್ದಾಣಗಳತ್ತ ದಾಂಗುಡಿ ಇಡುತ್ತಿದ್ದಾರೆ. ಸಹಾಯ ಮಾಡುವುದಾಗಿ ಆನ್‌ಲೈನ್‌ ಚಾಟ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ನಲ್ಲಿ ಪ್ರತಿ ಪ್ರಜೆಯೂ ಕನಿಷ್ಠ ಸೇನಾ ಕರ್ತವ್ಯ ನಿರ್ವಹಿಸುವುದು ಕಡ್ಡಾಯ.

ಇಸ್ರೇಲ್‌ ಸೇನೆಯಿಂದ ಗಾಜಾ಼ದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಳಕೆ?
 

Follow Us:
Download App:
  • android
  • ios