ಅಮೆರಿಕ ಅಧ್ಯಕ್ಷೀಯ ಚುನಾವಣೆ, ಬೈಡನ್‌ಗೆ ಮತ್ತೊಂದು ಸಂಕಷ್ಟ!

ಭಾರೀ ಕುತೂಹಲ ಮೂಡಿಸಿದೆ ಅಮೆರಿಕ ಅಧ್ಯಕ್ಷೀಯ ಚುನಾವಣೆ| ಟ್ರಂಪ್, ಬೈಡನ್‌ ನಡುವೆ ಅಧ್ಯಕ್ಷ ಹುದ್ದೆಗೇರಲು ಭಾರೀ ಪೈಪೋಟಿ| ಬೈಡನ್‌ಗೆ ಮುಳುವಾಗುತ್ತಿದೆ ಮಗನ ವಿರುದ್ಧ ಕೇಳಿ ಬರುತ್ತಿರುವ ಆರೋಪ| ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ತಳುಕು ಹಾಕಿದೆ ಹಂಟರ್ ಹೆಸರು

Laptop connected to Hunter Biden linked to FBI money laundering probe pod

ವಾಷಿಂಗ್ಟನ್(ಅ.22): ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಡೀ ವಿಶ್ವದ ಗಮನವನ್ನೇ ಸೆಳೆದಿದೆ. ಒಂದೆಡೆ ಟ್ರಂಪ್ ತನ್ನ ಎದುರಾಳಿ ಬೈಡನ್‌ ಸೋಲಿಸಿ ಮತ್ತೆ, ಅಧ್ಯಕ್ಷರಾಗಿ ಮುಂದುವರೆಯಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹೀಗಿರುವಾಗಲೇ ಇತ್ತ ಬೈಡನ್‌ಗೆ ತಮ್ಮ ಮಗ ಹಂಟರ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಹಿನ್ನಡೆಯನ್ನುಂಟು ಮಾಡುತ್ತಿವೆ.

ಬೈಡನ್‌, ಕಮಲಾ ಪರ ಬರಾಕ್‌ ಒಬಾಮಾ ಪ್ರಚಾರ!

ಈ ಹಿಂದೆ ಮಗ ಹಾಗೂ ಆತ ಕಾರ್ಯ ನಿರ್ವಹಿಸುತ್ತಿದ್ದ ಕಂಪನಿ ನಡುವಿನ ಇಮೇಲ್‌ ಸಂಭಾಷಣೆ ಬೈಡನ್‌ಗೆ ಸಂಕಷ್ಟ ತಂದಿದ್ದವು. ಆದರೀಗ ಈ ಚುನಾವಣಾ ಪ್ರಛಾರದ ಭರಾಟೆ ನಡುವೆ ಹೊಸದೊಂದು ವಿವಾದ ಹುಟ್ಟಿಕೊಂಡಿದೆ. ಹೌದು ಬೈಡನ್ ಮಗ ಹಂಟರ್‌ ಬೈಡನ್‌ ಲ್ಯಾಪ್‌ಟಾಪ್‌ 2019ರಲ್ಲಿ ಎಫ್‌ಬಿಐ ನಡೆಸಿದ್ದ ತನಿಖೆಯಲ್ಲಿ ಅಕ್ರಮ ಹಣ ಪ್ರಕರಣಕ್ಕೆ ಲಿಂಕ್ ಹೊಂದಿತ್ತು ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರ ಭಾರೀ ಸದ್ದು ಮಾಡಿದೆ. 

ಬೈಡನ್‌ಗೆ ಬಲ ತುಂಬಿದ ಒಬಾಮಾ, ಟ್ರಂಪ್ ಆಡಳಿತ ವೈಖರಿ ಟೀಕಿಸಿದ ಮಾಜಿ ಅಧ್ಯಕ್ಷ!

ಈ ಆರೋಪದ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಕೆಡಲ ದಾಖಲೆಗಳೂ ಹರಿದಾಡಲಾರಂಭಿಸಿದ್ದು, ಇವುಗಳನ್ನು ಫಾಕ್ಸ್‌ ನ್ಯೂಸ್ ಅನೇಕ ಬಾರಿ ಪರಿಶೀಲನೆ ನಡೆಸಿದೆ. ಚುನಾವಣಾ ಹೊಸ್ತಿಲಲ್ಲಿ ಇಂತಹ ಆರೋಪಗಳು ಬೈಡನ್‌ಗೆ ಹಿನ್ನಡೆಯುಂಟು ಮಾಡಲಿವೆ ಎಂಬುವುದರಲ್ಲಿ ಅನುಮಾನವಿಲ್ಲ.

Latest Videos
Follow Us:
Download App:
  • android
  • ios