Asianet Suvarna News Asianet Suvarna News

ಬೈಡನ್‌ಗೆ ಬಲ ತುಂಬಿದ ಒಬಾಮಾ, ಟ್ರಂಪ್ ಆಡಳಿತ ವೈಖರಿ ಟೀಕಿಸಿದ ಮಾಜಿ ಅಧ್ಯಕ್ಷ!

ರಂಗೇರಿದ ಅಮೆರಿಕ ಚುನಾವಣಾ ಕಣ| ಬೈಡನ್‌ಗೆ ಬಲ ತುಂಬಿದ ಒಬಾಮಾ| ಬೈಡನ್‌ ಪರ ಪ್ರಚಾರದಲ್ಲಿ ಟ್ರಂಪ್ ಆಡಳಿತ ವೈಖರಿ ಟೀಕಿಸಿದ ಮಾಜಿ ಅಧ್ಯಕ್ಷ| ವೈಯುಕ್ತಿಕವಾಗಿಯೂ ಟ್ರಂಪ್ ವಿರುದ್ಧ ಒಬಾಮಾ ಕಿಡಿ
 

In rare gloves off moment Obama calls on voters to hand Trump a clear defeat pod
Author
Bangalore, First Published Oct 22, 2020, 5:16 PM IST

ವಾಷಿಂಗ್ಟನ್(ಅ.22): ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ಅತ್ತ ಟ್ರಂಪ್ ಅಧ್ಯಕ್ಷರಾಗಿ ಮುಂದುವರೆಯಲು ಹಾತೊರೆಯುತ್ತಿದ್ದರೆ, ಇತ್ತ ಬೈಡನ್ ಕೂಡಾ ಅಧ್ಯಕ್ಷರಾಗಲು ಎಲ್ಲಾ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬೆಂಬಲ ಬೈಡನ್‌ಗೆ ಮತ್ತಷ್ಟು ಬಲ ನೀಡಿದೆ. 

ಅಮೆರಿಕ ಅಧ್ಯಕ್ಷೀಯ ಚುನಾವಣೆ, ಬೈಡನ್‌ಗೆ ಮತ್ತೊಂದು ಸಂಕಷ್ಟ!

ಬುಧವಾರ ಬೈಡನ್ ಪರ ಚುನಾವಣಾ ಪ್ರಚಾರ ನಡೆಸಿದ ಒಬಾಮಾ, ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ವಿರುದ್ಧ ಗುಡುಗಿದ ಒಬಾಮಾ ಅವರ ಆಡಳಿತ ವೈಖರಿಯ ಬಗ್ಗೆ ಕಿಡಿ ಕಾರುತ್ತಾ, ಅವರು ತಮ್ಮ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ವೈಫಲ್ಯ, ವರ್ಣ ಬೇಧ ನೀತಿ, ಹೆಲ್ತ್‌ ಕೇರ್ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದ ಒಬಾಮಾ, ಟ್ರಂಪ್ ಸುಳ್ಳಿನ ಕಂತೆ ಹಾಗೂ ಅಶಿಸ್ತಿನ ವರ್ತನೆ ಕುರಿತಾಗಿಯೂ ಈ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

'ಬೈಡನ್‌, ಕಮಲಾ ಪರ ಬರಾಕ್‌ ಒಬಾಮಾ ಪ್ರಚಾರ!

ವೈಯುಕ್ತಿಕವಾಗಿಯೂ ಟ್ರಂಪ್ ವಿರುದ್ಧ ಗುಡುಗಿದ ಒಬಾಮಾ ಅವರ ಟಿವಿ ರೇಟಿಂಗ್‌ ಡೌನ್ ಆಗಿದೆ. ಇದಕ್ಕಾಗೇ ಅವರು ಚಿಂತಿತರಾಗಿದ್ದಾರೆ. ಇದು ರಿಯಾಲಿಟಿ ಶೋ ಅಲ್ಲ, ವಾಸ್ತವತೆ ಎಂದು ಟ್ರಂಪ್‌ಗೆ ಭರ್ಜರಿಯಾಗೇ ಪಂಚ್ ನೀಡಿದ್ದಾರೆ.

Follow Us:
Download App:
  • android
  • ios