Asianet Suvarna News Asianet Suvarna News

ಗನ್ ತೋರಿಸಿ 32 ಲಕ್ಷ ರೂ ವಾಚ್ ಕಳ್ಳತನ, ಚೇಸ್ ಮಾಡಿದ ಮಾಲೀಕನಿಗೆ ಮತ್ತೊಂದು ಶಾಕ್, ವಿಡಿಯೋ!

ಗನ್ ತೋರಿಸಿ 32 ಲಕ್ಷ ರೂಪಾಯಿ ವಾಚ್ ಕದ್ದ ಕಳ್ಳ ಬೈಕ್ ಮೂಲಕ ವೇಗವಾಗಿ ಸಾಗಿದ್ದಾನೆ. ಆದರೆ ಈ ಕಳ್ಳನನ್ನು ತನ್ನ ಲ್ಯಾಂಬೊರ್ಗಿನಿ ಮೂಲಕ ಚೇಸ್ ಮಾಡಿದ ಮಾಲೀಕನಿಗೆ ಮತ್ತೊಂದು ಶಾಕ್ ಎದುರಾಗಿದೆ.

Lamborghini Crash after man try to ramps thief for his stolen rs 32 lakh watch in Brazil ckm
Author
First Published May 21, 2024, 8:11 PM IST

ಸಾವೋ ಪೌಲೋ(ಮೇ.21)  ಶ್ರೀಮಂತ ಉದ್ಯಮಿ ಟ್ರಾಫಿಕ್ ಸಿಗ್ನಲ್‌ನಲ್ಲಿರುವಾಗ ಕಳ್ಳನೊಬ್ಬ ಗನ್ ತೋರಿಸಿ ಬರೋಬ್ಬರಿ 32 ಲಕ್ಷ ರೂಪಾಯಿ ರೊಲೆಕ್ಸ್ ವಾಚ್ ಕದ್ದಿದ್ದಾನೆ. ಬಳಿಕ ಬೈಕ್ ಮೂಲಕ ಅತೀ ವೇಗವಾಗಿ ಸಾಗಿದ್ದಾನೆ. ಇತ್ತ ವಾಚ್ ಕಳ್ಳನ ಹಿಡಿಯಲು ತನ್ನ 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನ ಮೂಲಕ ಮಾಲೀಕ ಚೇಸ್ ಮಾಡಿದ್ದಾನೆ. ಬಳಿಕ ದಿಢೀರ್ ಯೂ ಟರ್ನ್ ಪಡೆಯಲು ಮುಂದಾಗ ಕಳ್ಳನ ಬೈಕ್‌ಗೆ ಡಿಕ್ಕಿ ಹೊಡೆದರೂ ಕಳ್ಳ ಬೈಕ್ ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ಆದರೆ ಮಾಲೀಕನ ಲ್ಯಾಂಬೋರ್ಗಿನಿ ಕಾರು ನಜ್ಜು ಗುಜ್ಜಾಗಿದೆ. ಈ ವಿಡಿಯೋ ವೈರಲ್ ಆಗಿದೆ.

ಬ್ರೆಜಿಲ್‌ನ ರಾಜದಾನಿ ಸಾವೋ ಪೌಲೋದಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ತನ್ನ ಹಸಿರು ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಸಿಗ್ನಲ್ ವೇಳೆ ಎಲ್ಲಾ ವಾಹನಗಳು ನಿಂತಿತ್ತು. ಲ್ಯಾಂಬೋರ್ಗಿನಿ ಕಾರಿನ ಹಿಂಭಾಗ, ಮುಂಭಾಗದಲ್ಲೂ ವಾಹನಗಳು ನಿಂತಿತ್ತು. ಇದೇ ಸಮಯ ನೋಡಿಕೊಂಡ ಕಳ್ಳ ರಸ್ತೆಯ ಬದಿಯಿಂದ ಬೈಕ್ ಮೂಲಕ ಬಂದು ಗನ್ ತೋರಿಸಿ ಲ್ಯಾಂಬೋರ್ಗಿನಿಯಲ್ಲಿದ್ದ ಉದ್ಯಮಿಯ ಬರೋಬ್ಬರಿ 32 ಲಕ್ಷ ರೂಪಾಯಿ ವಾಚ್ ಪಡೆದು ಪರಾರಿಯಾಗಿದ್ದಾನೆ.

ಕಾಸ್ಟ್ಲಿ ಒಡವೆ ಸೇರಿ ಕೇಳಿದ್ದೆಲ್ಲ ಕೊಡ್ತಿದ್ದ ಬಾಯ್ ಫ್ರೆಂಡ್, ಹೇಗೆ ಅನ್ನೋ ಸತ್ಯ ಗೊತ್ತಾದ್ಮೇಲೆ ಹುಡುಗಿ ಶಾಕ್!

ಬೈಕ್‌ನಲ್ಲಿದ್ದ ಕಳ್ಳ ಸಣ್ಣ ಗ್ಯಾಪ್ ಮೂಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಸಿಗ್ನಲ್ ಬಿಡುತ್ತಿದ್ದಂತೆ ಉದ್ಯಮಿ ತನ್ನ ಸೂಪರ್ ಕಾರು ಲ್ಯಾಂಬೋರ್ಗಿನಿಯಲ್ಲಿ ಅತೀ ವೇಗದಿಂದ ಕಳ್ಳನ ಚೇಸ್ ಮಾಡಿದ್ದಾನೆ. ಲ್ಯಾಂಬೋರ್ಗಿನಿ ವೇಗಕ್ಕೆ ಕಳ್ಳ ಸಿಕ್ಕೇ ಬಿಟ್ಟ. ಆದರೆ ಲ್ಯಾಂಬೋರ್ಗಿನಿ ಹಿಂಬಾಲಿಸುತ್ತಿರುವುದು ಗಮನಿಸಿದ ಕಳ್ಳ ದಿಢೀರ್ ಲೆಫ್ಟ್ ಟರ್ನ್ ಮಾಡಿದ್ದಾನೆ. 

 

 

ಇತ್ತ ಉದ್ಯಮಿ ಲ್ಯಾಂಬೋರ್ಗಿನಿ ಮೂಲಕ ಕಳ್ಳನ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಬೈಕ್ ನೆಲಕ್ಕೆ ಅಪ್ಪಳಿಸಿದೆ. ಆದರೆ ಸಣ್ಣ ಪುಟ್ಟ ಗಾಯಗೊಂಡಿದ್ದ ಕಳ್ಳ ಬೈಕ್‌ ಅಲ್ಲೆ ಬಿಟ್ಟು ಓಡಿದ್ದಾನೆ. ಆದರೆ ಉದ್ಯಮಿಯ ಕಾರು ಬೈಕ್‌ಗ ಡಿಕ್ಕಿ ಹೊಡೆದು, ರಸ್ತೆಯ ಡೈವಿಡರ್‌ಗೆ ಡಿಕ್ಕಿ ಹೊಡೆದಿದೆ. ಡೈವಡರ್ ಬಳಿ ಇದ್ದ ಲೈಟ್ ಪೋಸ್ಟ್ ಕೂಡ ಕಾರಿನ ಮೇಲೆ ಬಿದ್ದಿದೆ. 4 ಕೋಟಿ ರೂಪಾಯಿ ಲ್ಯಾಂಬೋರ್ಗಿನಿ ಕಾರು ನಜ್ಜು ಗುಜ್ಜಾಗಿದೆ. ಆದರೆ ಕಳ್ಳ ಮಾತ್ರ ಸಿಗಲೇ ಇಲ್ಲ.

ಅತ್ತ 32 ಲಕ್ಷ ರೂಪಾಯಿ ವಾಚ್ ಕಳ್ಳತನವಾಗಿದ್ದರೆ, ಇತ್ತ 4 ಕೋಟಿ ರೂಪಾಯಿ ಲ್ಯಾಂಬೋರ್ಗಿನಿ ಕಾರು ನಷ್ಟವಾಗಿದೆ. ಹೊಚ್ಚ ಹೊಸ ಕಾರು ಈ ಪಾಟಿ ಡ್ಯಾಮೇಜ್ ಆಗಿರುವ ಜೊತೆ ನೆಚ್ಚಿನ ವಾಚ್ ಕೂಡ ಇಲ್ಲಾದಾಗಿರುವುದು ಉದ್ಯಮಿಗೆ ತೀವ್ರ ಬೇಸರ ತಂದಿದೆ.

Bike Thief 60 ಸೆಕೆಂಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕಳ್ಳತನ, ಕರಾಮತ್ತು ನೋಡಿ ಪೊಲೀಸರೆ ದಂಗು!
 

Latest Videos
Follow Us:
Download App:
  • android
  • ios