ಎಲ್ಲರ ಮುಂದೆ ಅಬ್ಬರಿಸಲು ಹೋದ ಕಿಂಗ್ ಕೋಬ್ರಾ ಕಥೆ ಕೊನೆಯಲ್ಲಿ ಯಾರಿಗೂ ಬೇಡವಾಗಿತ್ತು. ಎಲ್ಲವನ್ನೂ ಉಗುಳಿ, ಉಸಿರು ತೆಗೆದುಕೊಂಡ ಕಿಂಗ್ ಕೋಬ್ರಾಗೆ ಮತ್ತೆ ಜೀವಬಂತು. ಅಷ್ಟಕ್ಕೂ ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ ನೀವೇ ನೋಡಿ.
ಸಣ್ಣ ಪ್ರಾಣಿ ಇರಲಿ ಇಲ್ಲ ದೊಡ್ಡ ಮನುಷ್ಯ ಇರಲಿ ಅವರನ್ನು ನುಂಗಿ ಅರಗಿಸಿಕೊಳ್ಳುವ ಶಕ್ತಿ ಹೆಬ್ಬಾವಿ (python) ಗಿದೆ. ಅದೇ ಹಾವಿನ ರಾಜ, ವಿಶ್ವದ ಅತ್ಯಂತ ವಿಷಕಾರಿ (poisonous) ಹಾವುಗಳಲ್ಲಿ ಒಂದಾಗಿರುವ ಕಿಂಗ್ ಕೋಬ್ರಾ (King Cobra) ಕಚ್ಚೋದನ್ನು ಕೇಳಿದ್ದೇವೆ. ಸಣ್ಣ ಕೀಟಾಣುಗಳನ್ನು ಈ ಹಾವು ನುಂಗುತ್ತದೆ. ಆದ್ರೆ ಒಂದೇ ಬಾರಿ ಎರಡು, ಮೂರು ಹಾವನ್ನು ನುಂಗೋದನ್ನು ನೋಡಿದ್ದೀರಾ? ಈಗ ಕಿಂಗ್ ಕೋಬ್ರಾ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಕಿಂಗ್ ಕೋಬ್ರಾ, ನುಂಗಿದ ಮೂರು ಹಾವುಗಳನ್ನು ಒಂದಾದ್ಮೇಲೆ ಒಂದರಂತೆ ಹೊರಗೆ ಹಾಕುತ್ತದೆ.
ಸೋಶಿಯಲ್ ಮೀಡಿಯಾ ಎಕ್ಸ್ (Social Media x) ನಲ್ಲಿ ಈ ಹಾವಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೂರು ಹಾವನ್ನು ನುಂಗಿದ ಕಿಂಗ್ ಕೋಬ್ರಾ ಎಂದು ಶೀರ್ಷಿಕೆ ಹಾಕಲಾಗಿದೆ. ವಿಡಿಯೋದಲ್ಲಿ ಕಿಂಗ್ ಕೋಬ್ರಾ ಒಂದೊಂದೇ ಹಾವನ್ನು ಹೊರಗೆ ಹಾಕೋದನ್ನು ನೀವು ಕಾಣ್ಬಹುದು. ಮೂರು ಹಾವನ್ನು ಹೊಟ್ಟೆಯಿಂದ ಹೊರಗೆ ಹಾಕಿದ ನಂತ್ರ ಸುಸ್ತಾದಂತೆ ಕಾಣುವ ಕಿಂಗ್ ಕೋಬ್ರಾ, ತಕ್ಷಣ ಹೆಡೆ ಎತ್ತುತ್ತದೆ. ಈ ವಿಡಿಯೋವನ್ನು 2 ಲಕ್ಷ 75 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಜನರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಹಾವು ಮರುಬಳಕೆ ಮಾಡುತ್ತೆ ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಹಾವಿನ ತಲೆ, ಕಿಂಗ್ ಕೋಬ್ರಾ ಗಂಟಲಿಗೆ ಸಿಕ್ಕಿಕೊಂಡ ಕಾರಣ ಅದು ಹಾವನ್ನು ಉಗುಳಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಸುತ್ತಮುತ್ತ ನೆರೆದಿದ್ದ ಜನರನ್ನು ನೋಡಿ ಹಾವು ಒತ್ತಡಕ್ಕೊಳಗಾಗಿದೆ ಎಂಬ ಕಮೆಂಟ್ ಕೂಡ ಬಂದಿದೆ.
ಹಮಾಸ್ ನಾಯಕ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು ಬೆರಳು ಕತ್ತರಿಸಿ ಒಯ್ದಿದ್ದ ಇಸ್ರೇಲ್ ಸೈನಿಕರು
ವಿಶ್ವದಲ್ಲಿ ನೂರಾರು ಪ್ರಭೇದದ ಹಾವುಗಳಿವೆ. ಅವುಗಳ ಬಗ್ಗೆ ತಿಳಿಯೋದು ಸಾಕಷ್ಟಿದೆ. ಕೆಲ ದಿನಗಳ ಹಿಂದೆ ಹಾವೊಂದು ಆತ್ಮಹತ್ಯೆ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾವು ತನ್ನ ಬಾಲದಿಂದ ಕತ್ತನ್ನು ಸುತ್ತಿಕೊಂಡು ಸಾವನ್ನಪ್ಪಿತ್ತು. ಇದನ್ನು ನೋಡಿದ ಜನರು ದಂಗಾಗಿದ್ದರು. ಒತ್ತಡ, ಹದಗೆಟ್ಟ ವಾತಾವರಣದ ಸಂದರ್ಭದಲ್ಲಿ ಹಾವುಗಳು ಹೀಗೆ ಮಾಡಿಕೊಳ್ತವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.
ಕಿಂಗ್ ಕೋಬ್ರಾ ಬಗ್ಗೆ ನಿಮಗೆಷ್ಟು ಗೊತ್ತು? : ಭಾರತದ ನಾಗರಹಾವು ಮತ್ತು ಕಿಂಗ್ ಕೋಬ್ರಾ ಒಂದೇ ಎಂದು ಭಾವಿಸಲಾಗುತ್ತದೆ. ಆದ್ರೆ ಅದಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ತಜ್ಞರು ಹೇಳ್ತಾರೆ. ಭಾರತದ ರಾಷ್ಟ್ರೀಯ ಸರೀಸೃಪ ನಾಗರಹಾವು. ಇದನ್ನು ವಿಶ್ವದ ಅತ್ಯಂತ ವಿಷಕಾರಿ ಹಾವು ಎಂದು ಪರಿಗಣಿಸಲಾಗಿದೆ. ನಾಗರ ಹಾವು ಕಚ್ಚಿದ 45 ನಿಮಿಷದಲ್ಲೇ ಮನುಷ್ಯ ಸಾವನ್ನಪ್ಪುತ್ತಾನೆ. ನಾಗರಹಾವು ಸರಾಸರಿ 6 -7 ಅಡಿ ಉದ್ದವಿರುತ್ತದೆ. ಅದೇ ಕಿಂಗ್ ಕೋಬ್ರಾ ಸುಮಾರು 20 ಅಡಿ ಉದ್ದವಿರಬಹುದು.
ನಾಸಾಗೆ ತ್ಯಾಜ್ಯ ನಿರ್ವಹಣೆ ಐಡಿಯಾ ನೀಡಿ 25 ಕೋಟಿ ರೂಪಾಯಿ ಗೆಲ್ಲುವ ಅವಕಾಶ!
ನಾಗರಹಾವು, ಇಲಿ, ಕಪ್ಪೆ, ಹಲ್ಲಿ, ಪಕ್ಷಿ ಇತ್ಯಾದಿಗಳನ್ನು ನುಂಗುತ್ತದೆ. ಕಿಂಗ್ ಕೋಬ್ರಾ ದೊಡ್ಡ ಬೇಟೆಗಾರ. ಇತರ ಜೀವಿಗಳ ಹೊರತಾಗಿ, ಇತರ ಹಾವುಗಳನ್ನು ಬೇಟೆಯಾಡುತ್ತದೆ. ಕಿಂಗ್ ಕೋಬ್ರಾ ಹಾಗೂ ನಾಗರಹಾವು ಎರಡೂ 18-20 ವರ್ಷಗಳ ಕಾಲ ಬದುಕುತ್ತದೆ. ಕಿಂಗ್ ಕೋಬ್ರಾ ಹಾವು ಮಾತ್ರ ಗೂಡುಗಳನ್ನು ನಿರ್ಮಿಸಿ ಅಲ್ಲಿ ಮೊಟ್ಟೆಯಿಡುತ್ತದೆ. ಭಾರತದಲ್ಲಿ ನಾಲ್ಕು ಜಾತಿಯ ನಾಗರಹಾವುಗಳಿವೆ. ಸ್ಪೆಕ್ಟಾಕಲ್ಡ್ ಕೋಬ್ರಾ, ಮೊನೊಪ್ಲಾಯ್ಡ್ ಕೋಬ್ರಾ, ಸೆಂಟ್ರಲ್ ಏಷ್ಯನ್ ಕೋಬ್ರಾ ಮತ್ತು ಅಂಡಮಾನ್ ಕೋಬ್ರಾ. ಕಿಂಗ್ ಕೋಬ್ರಾ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಉತ್ತರಾಖಂಡ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.
