Asianet Suvarna News Asianet Suvarna News

ನಾಸಾಗೆ ತ್ಯಾಜ್ಯ ನಿರ್ವಹಣೆ ಐಡಿಯಾ ನೀಡಿ 25 ಕೋಟಿ ರೂಪಾಯಿ ಗೆಲ್ಲುವ ಅವಕಾಶ!

ಬರೋಬ್ಬರಿ 25 ಕೋಟಿ ರೂಪಾಯಿ ಬಹುಮಾನ ಗೆಲ್ಲುವ ಅವಕಾಶ. ಇದು ನಾಸಾದ ಆಫರ್. ನೀವು ಮಾಡಬೇಕಾದದ್ದು ಇಷ್ಟೆ. ನಾಸಾಗೆ ತ್ಯಾಜ್ಯ ನಿರ್ವಹಣೆ ಐಡಿಯಾ ಕೊಟ್ಟರೆ ಸಾಕು. ಉತ್ತಮ ಐಡಿಯಾಗೆ 25 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ.

Solve Moon mission waste management and win Win rs 25 crore cash prize from nasa ckm
Author
First Published Oct 18, 2024, 11:05 PM IST | Last Updated Oct 18, 2024, 11:05 PM IST

ವಾಶಿಂಗ್ಟನ್ ಡಿಸಿ(ಅ.18) ವಿಶ್ವದ ಅತೀ ದೊಡ್ಡ ಬಾಹ್ಯಕಾಶ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ನಾಸಾ ಇದೀಗ ವಿಶೇಷ ಘೋಷಣೆಯೊಂದನ್ನು ಮಾಡಿದೆ. ಎಲ್ಲರಿಗೂ ಪಾಲ್ಗೊಳ್ಳಲು ಅವಕಾಶವಿದೆ. ಕೇವಲ ಐಡಿಯಾ ಕೊಟ್ಟರೆ ಸಾಕು, ಉತ್ತಮ ಐಡಿಯಾ ಕೊಡುವ ವ್ಯಕ್ತಿಗಳು 25 ಕೋಟಿ ರೂಪಾಯಿ ಬಹುಮಾನ ಗೆಲ್ಲಲು ಸಾಧ್ಯವಿದೆ. ನಾಸಾದ ಮುಂದಿನ ಚಂದ್ರಯಾನ ಮಿಷನ್‌ಗೆ ತ್ಯಾಜ್ಯ ನಿರ್ವಹಣೆ ಮಾಡಲು ಉತ್ತಮ ಐಡಿಯಾ ನೀಡುವವರಿಗೆ 25 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

ಅಮೆರಿಕದ ನಾಸಾ ಸೆಪ್ಟೆಂಬರ್, 2026ರಲ್ಲಿ ಚಂದ್ರನ ಮೇಲೆ ಮಾನವನ ಇಳಿಸಲು ಸಜ್ಜಾಗಿದೆ. ಇದಕ್ಕಾಗಿ ಅತೀ ದೊಡ್ಡ ಲೂನಾರ್ ಮಿಷನ್‌ನಲ್ಲಿ ತೊಡಗಿಸಿಕೊಂಡಿದೆ. ಇದೀಗ ನಾಸಾಗೆ ಮೂನ್ ಮಿಷನ್ ನಡುವೆ ಕೆಲ ಸಮಸ್ಯೆಗಳು ತಲೆದೋರಿದೆ. ಮೂನ್ ಮಿಷನ್‌ನಲ್ಲಿ ತ್ಯಾಜ್ಯಗಳ ನಿರ್ವಹಣೆ ಹೇಗೆ ಅನ್ನೋದು ದೊಡ್ಡ ತಲೆನೋವಾಗಿದೆ. ಇದಕ್ಕಾಗಿ ನಾಸಾ ಮಿಷನ್‌ಲ್ಲಿ ಅತೀ ಕಡಿಮೆ ತ್ಯಾಜ್ಯ ಹಾಗೂ ತಾಜ್ಯಗಳನ್ನು ಮರುಬಳಕೆ ಮಾಡಬಲ್ಲ ಐಡಿಯಾಗಳನ್ನು ನೀಡಲು ಮನವಿ ಮಾಡಿದೆ.

ಭೂಮಿಯನ್ನೇ ಗುಳುಂ ಮಾಡಲಿದೆಯೇ ಕಪ್ಪು ಕುಳಿ? ವಿಜ್ಞಾನಿಗಳು ಹೇಳಿದ್ದೇನು?

ನಾಸಾ ಯೋಜನೆ, ಭೂಮಿಯಿಂದ ಬಾಹ್ಯಾಕಾಶ ಪ್ರಯಾಣ ಬಳಿಕ ಚಂದ್ರನಮೇಲೆ ಲ್ಯಾಂಡ್ ಬಳಿಕ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಹಾಗೂ ತ್ಯಾಜ್ಯಗಳ ಮರುಬಳಕೆ ಹೇಗೆ ಅನ್ನೋ ಕುರಿತು ನಾಸಾ ಸಲಹೆ ಆಹ್ವಾನಿಸಿದೆ. ಚಂದ್ರನ ಮೇಲೆ ಮಾನವನ ಲ್ಯಾಂಡ್ ಆಗುವ ಕಾರಣ ಆಹಾರ, ನೀರು, ಬಟ್ಟೆ, ವೈಜ್ಞಾನಿಕ ವಸ್ತುಗಳು ಸೇರಿದಂತೆ ಇತರ ತ್ಯಾಜ್ಯಗಳ ಪ್ರಮಾಣ ಹೆಚ್ಚಾಗಲಿದೆ. ಈ ಮಿಷನ‌್‌ನಲ್ಲಿ ಬಾಹ್ಯಾಕಾಶದಲ್ಲೇ 96 ಬ್ಯಾಗ್ ತ್ಯಾಜ್ಯ ಉತ್ಪಾದನೆಯಾಗಲಿದೆ ಎಂದು ನಾಸಾ ಹೇಳಿದೆ. 

ಕಡಿಮೆ ತ್ಯಾಜ್ಯ ಉತ್ಪಾದನೆ, ಉತ್ಪಾದನೆಯಾಗುವ ತ್ಯಾಜ್ಯಗಳ ಮರುಬಳಕೆ ಮೂಲಕ ಪರಿರಸಕ್ಕೂ ಪೂರಕವಾದ ಉತ್ತಮ ಸಲಹೆ ನೀಡಿದರೆ ಸಾಕು, ಈ ಉತ್ತಮ ಹಾಗೂ ಆಯ್ಕೆಯಾಗುವ ಸಲಹೆಗೆ 25 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ. ನಾಸಾ ಪ್ರೊಗ್ರಾಂ ಎಕ್ಸಿಕ್ಯೂಟೀವ್ ಆ್ಯಮಿ ಕಮಿನಿಸ್ಕಿ ಹೇಳಿದ್ದಾರೆ. 

ಈ ಟಾಸ್ಕ್‌ನಲ್ಲಿ ಪಾಲ್ಗೊಂಡು ಸಲಹೆ ನೀಡಲು ಇಚ್ಚಿಸುವವರು ಎರಡು ಮಾದರಿಯಲ್ಲಿ ಟಾಸ್ಕ್ ಪೂರ್ಣಗೊಳಿಸಬೇಕು. ಪ್ರೊಟೈಪ್ ಬಿಲ್ಡ್ ಟ್ರಾಕ್ ಮೂಲಕ ಪಾಲ್ಗೊಳ್ಳುವವರು ಹಾರ್ಡ್‌ವೇರ್ ಅಭಿವೃದ್ಧಿಪಡಿಸಬೇಕು, ಈ ಮೂಲಕ ಸಾಲಿಡ್ ವೇಸ್ಟ್ ನಿರ್ವಹಣೆಗೆ ಸೂಕ್ತರೀತಿಯಲ್ಲಿ ಸಲಹೆ ನೀಡಬೇಕು. ಮತ್ತೊಂದು ಡಿಜಿಟಲ್ ಟ್ವಿನ್ ಟ್ರಾಕ್.  ವರ್ಚುವಲ್ ಮೂಲಕ ತ್ಯಾಜ್ಯ ನಿರ್ವಹಣೆ ಸಲಹೆ ನೀಡಬೇಕು. ತಂಡವಾಗಿ ಎರಡೂ ಟ್ರಾಕ್‌ನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು. ಅಥವಾ ಒಂದರಲ್ಲಿ ಮಾತ್ರ ಪಾಲ್ಗೊಂಡು ಸಲಹೆ ನೀಡಬೇಕು. ಪ್ರತಿ ವಿಭಾಗಕ್ಕೆ ಬಹುಮಾನ ಮೊತ್ತ ಹಂಚಲಾಗಿದೆ.
ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಇನ್ನೆಷ್ಟು ದಿನ ಬದುಕಬಲ್ಲರು?

Latest Videos
Follow Us:
Download App:
  • android
  • ios