ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್; ರಾಜಮನೆತನಕ್ಕೆ ಮರಳಲು ಸಜ್ಜಾದ್ರಾ ಪ್ರಿನ್ಸ್ ಹ್ಯಾರಿ?
ಕಿಂಗ್ ಚಾರ್ಲ್ಸ್ IIIಗೆ ಕ್ಯಾನ್ಸರ್ ಎಂಬುದು ಗೊತ್ತಾಗುತ್ತಿದ್ದಂತೆ ಪುತ್ರ ಪ್ರಿನ್ಸ್ ಹ್ಯಾರಿ ಅವರನ್ನು ನೋಡಲು ಹೋಗಿದ್ದಾರೆ. ಕುಟುಂಬದಿಂದ ದೂರಾಗಿರುವ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್ ಈ ಸಮಯದಲ್ಲಿ ಮತ್ತೆ ರಾಜಮನೆತನದೊಂದಿಗೆ ಒಂದಾಗುವರೇ ಎಂಬ ವಿಶ್ಲೇಷಣೆಗಳು ಜೋರಾಗಿ ನಡೆಯುತ್ತಿವೆ.
75 ವರ್ಷದ ಕಿಂಗ್ ಚಾರ್ಲ್ಸ್ IIIಗೆ ಕ್ಯಾನ್ಸರ್ ಎಂದು ಪತ್ತೆಯಾದ ನಂತರ, ಪ್ರಿನ್ಸ್ ಹ್ಯಾರಿ ಯುಕೆಗೆ ಹಾರಿ ಅವರ ಅನಾರೋಗ್ಯದ ತಂದೆಯನ್ನು ಭೇಟಿಯಾದರು. ರಾಜಮನೆತನದಿಂದ ಹೊರಗುಳಿದ ನಂತರ ರಾಜಮನೆತನದ ಹುದ್ದೆಯಿಂದ ಕೆಳಗಿಳಿದಿರುವ ಪ್ರಿನ್ಸ್ ಹ್ಯಾರಿ ಇದೇ ಮೊದಲ ಬಾರಿ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಮತ್ತು ಸಂದರ್ಶನವೊಂದರಲ್ಲಿ ಅವರು ತಮ್ಮ ಪಾತ್ರಕ್ಕೆ ಮರಳಲು ಸಿದ್ಧ ಎಂದಿದ್ದಾರೆ. ಆದಾಗ್ಯೂ, ಕಿಂಗ್ ಚಾರ್ಲ್ಸ್ ತಾವಾಗಿಯೇ ಕೇಳಿದರೆ ಮಾತ್ರ ಹ್ಯಾರಿ ತನ್ನ ರಾಜಮನೆತನಕ್ಕೆ ಮರಳಲು ಸಿದ್ಧ ಎಂದು ಮೂಲಗಳು ತಿಳಿಸಿವೆ.
39 ವರ್ಷದ ಡ್ಯೂಕ್ ಆಫ್ ಸಸೆಕ್ಸ್ ತನ್ನ ಕ್ಯಾನ್ಸರ್ ಪೀಡಿತ ತಂದೆಯನ್ನು ಭೇಟಿ ಮಾಡಲು ಹೋದ ಬಗ್ಗೆ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿ, ಅವರಿಗೆ ಕಾಯಿಲೆ ಎಂದು ಸ್ವತಃ ತಂದೆಯೇ ಕರೆ ಮಾಡಿ ತಿಳಿಸಿದರು. ತಿಳಿಯುತ್ತಿದ್ದಂತೆ ಭೇಟಿಯಾಗಲು ಹೋದೆ, ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದರು.
ಲಂಡನ್‌ನಲ್ಲಿ ಹುಟ್ಟಲಿದೆ ವಿರುಷ್ಕಾ ಎರಡನೇ ಮಗು, ಡೆಲಿವರಿ ಡೇಟ್ ಏನು?
ತಂದೆಯೊಂದಿಗೆ ಏನು ಮಾತನಾಡಿದರೆಂದು ಹೇಳಲು ಯುವರಾಜ ಸಿದ್ಧರಿರಲಿಲ್ಲ. ಆದರೆ, ಯಾವುದೇ ಕಾಯಿಲೆಯು ಕುಟುಂಬವನ್ನು ಹತ್ತಿರವಾಗಿಸುತ್ತದೆ ಎಂದಿದ್ದಾರೆ ಚಾರ್ಲ್ಸ್.
ಪ್ರಿನ್ಸ್ ಹ್ಯಾರಿ ಮತ್ತು ಡಚೆಸ್ ಆಫ್ ಸಸೆಕ್ಸ್ ಮೇಘನ್ ಮಾರ್ಕೆಲ್ ರಾಜಮನೆತನದೊಂದಿಗೆ ರಾಜಿ ಮಾಡಿಕೊಳ್ಳಲು 'ಮಾಸ್ಟರ್‌ಪ್ಲಾನ್' ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಓಡಾಡುತ್ತಿರುವ ನಡುವೆಯೇ ತಂದೆಯ ಕಾಯಿಲೆ ಹಿನ್ನೆಲೆಯಲ್ಲಿ ಪ್ರಿನ್ಸ್ ಹ್ಯಾರಿ ತವರಿಗೆ ಭೇಟಿ ನೀಡಿದ್ದಾರೆ.
ಕ್ಲಿಯರ್ ಸ್ಕಿನ್ಗಾಗಿ ದಿನಕ್ಕೆಷ್ಟು ನೀರು ಕುಡೀಬೇಕು?
2020ರಲ್ಲಿ ಹ್ಯಾರಿ ಮತ್ತು ಮೇಘನ್ ರಾಜಮನೆತನದಿಂದ ಹೊರ ಬಂದಿದ್ದರು. ಈ ಮನೆತನಕ್ಕೆ ಸಿಗಬೇಕಾದ ಎಲ್ಲ ಗೌರವ ಆದರಗಳಿಂದ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿತ್ತು.